HomeUncategorizedಇತಿಹಾಸ ವರ್ತಮಾನವನ್ನು ಪ್ರತಿನಿಧಿಸುತ್ತದೆ: ಅನಿಕೇತ ಕಬೀರ್

ಇತಿಹಾಸ ವರ್ತಮಾನವನ್ನು ಪ್ರತಿನಿಧಿಸುತ್ತದೆ: ಅನಿಕೇತ ಕಬೀರ್

Spread the love

ಶಿವಮೊಗ್ಗ,ಮಾ.24: ಇತಿಹಾಸ ಎಂದರೆ ಕೇವಲ ಇಸವಿಗಳ ಲೆಕ್ಕಾಚಾರ ಅಲ್ಲ, ಅದು ವರ್ತಮಾನಸಮಾಜವನ್ನು ಪ್ರತಿನಿಧಿಸುತ್ತದೆ ಎಂದು ಲಂಡನ್ ನ ಆಕ್ಸ್ ವರ್ಡ್ ವಿವಿಯ ಸಂಶೋಧನಾ ವಿದ್ಯಾರ್ಥಿ ಅನಿಕೇತ ಕಬೀರ್ ಹೇಳಿದರು.

ಇಂದು ಸಹ್ಯಾದ್ರಿ ಕಲಾ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ ಇವರ ಸಂಯುಕ್ತಾಶ್ರಯದಲ್ಲಿಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು,

ಧರ್ಮ ಮತ್ತು ಇತಿಹಾಸ ಪರಸ್ಪರ ಪೂರಕ ಮತ್ತು ಪ್ರೇರಕವಾಗಿಯೇ ಬೆಳೆದುಕೊಂಡು ಬಂದಿದೆ. ಅದುಮಾನವೀಕ ಸಂಬಧಗಳನ್ನು ಒಳಗೊಳ್ಳುತ್ತಲೇ ಇತಿಹಾಸದ ಸತ್ಯಗಳನ್ನು ಬಿಚ್ಚಿಡುತ್ತದೆ.

ಭಾರತದಲ್ಲಿ ಹಿಂದೂ, ಭೌದ್ಧ, ಕ್ರೈಸ್ತ ಧರ್ಮ ಸೇರಿದಂತೆ ಮಧ್ಯ ಕಾಲೀನ ಮತ್ತು ವಸಾಹತುಶಾಹಿಅವಧಿಗಳಲ್ಲಿ ಬದಲಾವಣೆಗಳಿಗೆ ಒಳಗಾಗುತ್ತಲೇ ಧರ್ಮ ಇಂದು ಹಲವು ಅರ್ಥಗಳನ್ನು ಒಳಗೊಂಡುಸಂಕುಚಿತಗೊಳ್ಳುತ್ತಾ ಸಾಗುತ್ತಿದೆ. ಇಂತಹ ಧರ್ಮವನ್ನು ನಾವು ಮರಕಲ್ಪನೆ ಮಾಡಿಕೊಳ್ಳಬೇಕಾಗಿದೆಎಂದರು.

ಆಧುನಿಕ ಪೂರ್ವ ಭಾರತೀಯ ಪಠ್ಯಗಳನ್ನು ಧರ್ಮದ ಚೌಕಟ್ಟಿನಿಂದ ನೋಡಿದರೂ ಕೂಡ ಅಲ್ಲಿಭಾರತೀಯ ಪರಂಪರೆ ಮತ್ತು ಹೊಸ ದೃಷ್ಠಿಕೋನಗಳಿಂದ ವಿಂಗಡಿಸಬೇಕಾಗುತ್ತದೆ. ಇಂದು ಇತಿಹಾಸಮತ್ತು ಧರ್ಮ ಹಲವು ಮಜಲುಗಳಲ್ಲಿ ಬದಲಾವಣೆಯಾಗಿದೆ. ಏನೇ ಆಗಲಿ, ಧರ್ಮ ಮತ್ತು ಇತಿಹಾಸವನ್ನುನಾವು ಸಮೀಕರಿಸಿದಾಗ ಅದು ಪ್ರಸ್ತುತ ಸಮಾಜವನ್ನು ಅರ್ಥಮಾಡಿಕೊಳ್ಳುವ ವಿಮರ್ಶೆಯಪರಿಭಾಷೆಯಾಗಿ ರೂಪುಗೊಳ್ಳಬೇಕಾಗಿದೆ ಎಂದರು.

ಪ್ರಾಚಾರ್ಯರಾದ ಪ್ರೊ.ಎಸ್.ಸಿರಾಜ್ ಅಹಮದ್ ಮಾತನಾಡಿ, ಇಂದು ಇತಿಹಾಸ ಸೇರಿದಂತೆ  ಮಾನವಿಕ ಶಾಸ್ತ್ರಗಳನ್ನು ಏಕೆ ಓದಬೇಕು ಎಂಬ ಪ್ರಶ್ನೆ ನಮ್ಮ ವಿದ್ಯಾರ್ಥಿಗಳನ್ನು ಬಹುವಾಗಿ ಕಾಡುತ್ತಿದೆ. ಇದರಿಂದ ಪ್ರಯೋಜನ ಏನು ? ಎಂಬ ಪ್ರಶ್ನೆಗಳು ಮೂಡುತ್ತಿವೆ. ಅನಿಕೇತ್ ಕಭೀರ್ ಅವರು, ಪ್ರತಿಷ್ಠಿತರೋಡ್ಸ್ ಸ್ಕಾಲರ್‌ಶಿಪ್ ವಿಜೇತರಾಗಿ ಲಂಡನ್ನಿನ ಆಕ್ಸ್ಫರ್ಡ್ ವಿ.ವಿ.ಯಲ್ಲಿ ಸಂಶೋಧನೆ ಮಾಡುತ್ತಿರುವುದುಹೆಮ್ಮೆಯ ವಿಷಯವಾಗಿದೆ. ಇತಿಹಾಸ ಮತ್ತು ಧರ್ಮ ಇವರ ಆಸಕ್ತಿ ಕ್ಷೇತ್ರವಾಗಿದ್ದು, ಅವರಿಂದ ನಿಮಗೆಹಲವು ವಿಷಯಗಳು ಲಭ್ಯವಾಗಲಿವೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಮಂಜುನಾಥ್ ಕೆ.ಎನ್., ಇತಿಹಾಸ ವಿಭಾಗದಮುಖ್ಯಸ್ಥ ಡಾ.ಹೆಚ್.ಎಂ. ಶಂಭುಲಿಗಮೂರ್ತಿ, ಐಕ್ಯೂಎಸಿ ಸಂಚಾಲಕ ಡಾ. ಮಂಜುನಾಥ್ ಹೆಚ್.ಪಿ., ಪ್ರಾಧ್ಯಾಪಕರುಗಳಾದ, ಪ್ರೊ.ಪ್ರಹ್ಲಾದಪ್ಪ, ಡಾ.ಪ್ರಸನ್ನಕುಮಾರ್,  ಶಫೀವುಲ್ಲಾ ಕೆ., ಡಾ.ಬಿ.ಎಂ. ಚಂದ್ರಶೇಖರ್, ಪ್ರದೀಪ್, ಡಾ.ರಮೇಶ್, ಡಾ.ಶೈಲಜಾ, ರಾಘವೇಂದ್ರ, ರಿಷಿಕಾ, ಸಿಂಚನಾ ಸೇರಿದಂತೆಹಲವರಿದ್ದರು. ಪ್ರಣತಿ ಪ್ರಾರ್ಥಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments