Homeಜಿಲ್ಲೆಸಹ್ಯಾದ್ರಿ ಸಿರಿ, ಹಬ್ಬವಾದ ಪರಿ

ಸಹ್ಯಾದ್ರಿ ಸಿರಿ, ಹಬ್ಬವಾದ ಪರಿ

Spread the love

ಶಿವಮೊಗ್ಗ,ಮಾ.26: ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ2026 ಸಂಭ್ರಮದದಿನವಾಗಿತ್ತು. ಸಹ್ಯಾದ್ರಿ ಸಿರಿಯು ಒಂದು ಸಂಭ್ರಮದ ಹಬ್ಬವಾಗಿ ಪರಿಣಮಿಸಿ ಎಂಆರ್‌ಎಸ್ ವೃತ್ತದಿಂದಕಾಲೇಜಿನ ಆವರಣದವರೆಗೆ ಭರ್ಜರಿ ಮೆರವಣಿಗೆ ಸಾಗಿತ್ತು.

ಮೆರವಣಿಗೆಯಲ್ಲಿ ಅನೇಕ ಕಾಲೇಜಿನ ತಂಡಗಳು ಭಾಗವಹಿಸಿ, ಸಂಸ್ಕೃತಿಯನ್ನು ಬಿಂಬಿಸುವ ಕಲಾಪ್ರದರ್ಶನ ಮೆರೆದರು.

ಸಹ್ಯಾದ್ರಿ ಸಿರಿಯು ಕಳೆದ 18 ವರ್ಷಗಳಿಂದ ನಡೆಯುತ್ತಾ ಬಂದಿದ್ದು, ಈ ಬಾರಿಯ ಕೂಡಭರ್ಜರಿಯಾಗಿಯೇ ಆರಂಭವಾಯಿತು.

ಸಹ್ಯಾದ್ರಿ ಸಿರಿಗೆ ಪ್ರಾಚಾರ್ಯ ಪ್ರೊ.ಎಸ್.ಸಿರಾಜ್ ಅಹ್ಮದ್ ಚಾಲನೆ ನೀಡಿ ಮಾತನಾಡಿ, ಇದುಸಂಸ್ಕೃತಿಯನ್ನು ಬಿಂಬಿಸುವ, ಎತ್ತಿ ಹಿಡಿಯುವ ಕಾರ್ಯಕ್ರಮವಾಗಿದೆ. ಕುವೆಂಪು ವಿವಿ ವ್ಯಾಪ್ತಿಯಸುಮಾರು 16ಕ್ಕೂ ಹೆಚ್ಚು ಕಾಲೇಜಿನ ತಂಡಗಳು ಭಾಗವಹಿಸಿದ್ದು ಇಂದು ನಡೆಯುವ ವಿವಿಧ ಸ್ಪರ್ಧೆಗಳಲ್ಲಿಅವರು ಭಾಗವಹಿಸಲಿದ್ದಾರೆ. ಇದೊಂದು ಜೀವಂತಿಕೆಯ ಕಾರ್ಯಕ್ರಮವಾಗಿದೆ. ಸಂಸ್ಕೃತಿಯ ಸ್ಪರ್ಶವನ್ನುಇದು ನೀಡುತ್ತದೆ. ಕೇವಲ ಸ್ಪರ್ಧೆಗಳೇ ಮುಖ್ಯವಾಗುವುದಿಲ್ಲ. ಸ್ಪರ್ಧೆಗಳ ಮೂಲಕ ಪ್ರತಿಭೆಗಳ ಅನಾವರಣಕೂಡ ಆಗುತ್ತದೆ. ಕಾಲೇಜು ಮಕ್ಕಳ ಸಾಂಸ್ಕೃತಿಕ ಮೆರವಣಿಗೆ ಇದು ಎಂದರು.

ಕಾರ್ಯಕ್ರಮ ಸಂಚಾಲಕ ಹಾಗೂ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಮಂಜುನಾಥ್ ಕೆ.ಎನ್. ಮಾತನಾಡಿ, ಹಲವು ವರ್ಷಗಳಿಂದ  ಸಹ್ಯಾದ್ರಿ ಸಿರಿ ಕಾರ್ಯಕ್ರಮವನ್ನು ನಾವು ನಡೆಸುತ್ತಾ ಬಂದಿದ್ದೇವೆ. ಸಹ್ಯಾದ್ರಿಉತ್ಸವದಂತೆ ಇದು ಕೂಡ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಇಲ್ಲಿ ಭಾಗವಹಿಸುವ ವಿವಿಧ ಕಾಲೇಜಿನಮಕ್ಕಳು ಡೊಳ್ಳು, ಕಂಸಾಳೆ, ಜಾನಪದ ನೃತ್ಯ, ಕೋಲಾಟ, ಸಾಂಸ್ಕೃತಿಕ ಬಿಂಬಿಸುವ ಭಿತ್ತಿಚಿತ್ರಗಳು, ಮಹಿಳೆಯರ ಪರವಾದ ಧ್ವನಿ, ಇವೆಲ್ಲದರ ಸಂಗಮವಾಗಿ ಮೆರವಣಿಗೆ ಮತ್ತು ಸಹ್ಯಾದ್ರಿ ಸಿರಿಕಾರ್ಯಕ್ರಮವೊಂದು ಹಬ್ಬದಂತೆ ಬಾಸವಾಗಿದೆ ಎಂದರು.

ಮೆರವಣಿಗೆಯಲ್ಲಿ ರಿಪ್ಪನ್‌ಪೇಟೆ, ತೀರ್ಥಹಳ್ಳಿ, ಸಾಗರ, ಸೊರಬ, ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯಮತ್ತು ವಿವಿ ವ್ಯಾಪ್ತಿಯ ನೂರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಎತ್ತಿನಗಾಡಿ, ಕಾಡಿನ ನೃತ್ಯ, ಡೊಳ್ಳು, ಕೋಲಾಟ, ವೀರಗಾಸೆ ಸೇರಿದಂತೆ ಹಲವು ತಂಡಗಳು ಮೆರವಣಿಗೆಯಲ್ಲಿಭಾಗವಹಿಸಿದ್ದವು. ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಸೆಲ್ಫಿಗಳನ್ನುಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ವಿದ್ಯಾರ್ಥಿಗಳ ಜೊತೆಗೆ ಬೋಧಕಬೋಧಕೇತರ ಮತ್ತು ಅತಿಥಿಉಪನ್ಯಾಸಕರುಗಳು ಕೂಡ ಸಡಗರದಿಂದ ಮೆರವಣಿಗೆಯಲ್ಲಿ ಭಾಗವಹಿಸಿ ವಿಶೇಷಉಡುಗೆತೊಡುಗೆಗಳಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದರು. ಒಂದು ಸಾಮೂಹಿಕ ಶಕ್ತಿ, ಸಾಮರಸ್ಯ, ಮಾನವೀಯತೆ, ಸರಳತೆ, ಸಿರಿಯಲ್ಲಿ ಕಂಡು ಬಂದಿತು.

ಮೆರವಣಿಗೆಯಲ್ಲಿ ಬೋಧಕ ವರ್ಗದವರಾದ ಪ್ರೊ.ಪ್ರಹ್ಲಾದಪ್ಪ, ಜಿ.ಕೆ.ಪ್ರೇಮ, ಶಂಭುಲಿಗಮೂರ್ತಿ, ಡಾ||ಪ್ರಸನ್ನಕುಮಾರ್, ಶಫೀವುಲ್ಲಾ, ಡಾ.ಮಹಾದೇವಸ್ವಾಮಿ, ಡಾ.ಬಿ.ಎಂ.ದ್ರಶೇಖರ್, ಶೈಲಜಾ, ಶೃಂಗಶ್ರೀ, ಡಾ.ಕೃಪಾಲಿನಿ, ಸಂಗೀತ, ರಮ್ಯ, ಸುಮನಾರಾಣಿ, ನಾಗರಾಜ್, ಪ್ರವೀಣ್, ಶ್ವೇತಾ, ಗಿರಿಜಮ್ಮ, ಸಿಂಚನ, ರಮೇಶ್, ಪ್ರದೀಪ್, ಸಂತೋಷ್, ರವಿ, ರಿಷಿಕಾ, ಕುಮಾರಸ್ವಾಮಿ, ಸ್ಫೂರ್ತಿ, ತಿಪ್ಪೇಶ್, ಚೇತನ್, ಶಶಿಕುಮಾರ್ ಸೇರಿದಂತೆ ಬೋಧಕಬೋಧಕೇತರ ಹಾಗೂ ವಿವಿಧ ಕಾಲೇಜುಗಳಿಂದ ಬಂದಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.

ನಂತರ ಕಾಲೇಜಿನ ವೇದಿಕೆಯಲ್ಲಿ ನಡೆದ ಸಹ್ಯಾದ್ರಿ ಸಿರಿ2026ರ ಕಾರ್ಯಕ್ರಮವನ್ನು ಉದ್ಘಾಟಿಸಿಮಾತನಾಡಿದ ಖ್ಯಾತ ಹಿನ್ನಲೆ ಗಾಯಕಿ ಸುರೇಖಾ ಹೆಗಡೆ, ಸಹ್ಯಾದ್ರಿ ಕಾಲೇಜೆಂದರೆ ಅದು ಹೆಮ್ಮೆಯಸಂಕೇತ. ಇಂತಹ ಕಾರ್ಯಕ್ರಮಗಳು ನಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುತ್ತವೆ. ಇದುಬಹುಕಾಲ ನೆನಪಿನಲ್ಲಿ ಇಡುವಂತಹ ಕಾರ್ಯಕ್ರಮವಾಗಿದೆ ಎಂದು ಹೇಳಿದರಲ್ಲದೆ, ಭಾವಗೀತೆ, ಚಿತ್ರಗೀತೆಯನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ರಾಜೇಶ್ವರಿ ಎನ್. ಮಾತನಾಡಿ, ನೆನಪುಗಳೇ ಶಾಶ್ವತಎನ್ನುವಂತೆ ಕಾರ್ಯಕ್ರಮ ಮೂಡಿ ಬಂದಿದೆ. ಇದೊಂದು ವಿದ್ಯಾರ್ಥಿಗಳಿಗೆ ಎನರ್ಜಿಯನ್ನು ಕೊಡುತ್ತದೆ. ಆತ್ಮವಿಶ್ವಾಸ ಬೆಳೆಸುತ್ತದೆ. ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್‌ನ ಶಕ್ತಿಯನ್ನು ಮತ್ತು ಕಲಾಪ್ರತಿಭೆಗಳನ್ನುಅನಾವರಣಗೊಳಿಸುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಮುಂದೆ ಇನ್ನೂ ಹೆಚ್ಚಿನ ಸಾಧನೆ ಮಾಡಲಿಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಎನ್. ಸಿರಾಜ್‌ಅಹ್ಮದ್ ವಹಿಸಿದ್ದರು. ಡಾ.ಮಂಜುನಾಥ್ಹೆಚ್.ಪಿ., ವಿ.ಹೆಚ್.ಕರಿಬಸಪ್ಪ , ನಂದಿತಾ, ಜಾಹ್ನವಿ, ಪ್ರಣತಿ ಮುಂತಾದವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments