Homeಜಿಲ್ಲೆಮುಸ್ಲಿಂರ ಪರವಾಗಿ ಮಾತನಾಡಿದರೆ ಕೋಮುವಾದವಲ್ಲವೇ??: ಈಶ್ವರಪ್ಪ

ಮುಸ್ಲಿಂರ ಪರವಾಗಿ ಮಾತನಾಡಿದರೆ ಕೋಮುವಾದವಲ್ಲವೇ??: ಈಶ್ವರಪ್ಪ

Spread the love

ಶಿವಮೊಗ್ಗ, ಮಾ.27: ಹಿಂದೂಗಳ ಪರವಾಗಿ ಮಾತನಾಡಿದರೆ ಕೋಮುವಾದ ಮುಸ್ಲಿಂರ ಪರವಾಗಿಮಾತನಾಡಿದರೆ ಕೋಮುವಾದವಲ್ಲವೇ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ , ಮಾಜಿಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತೀವ್ರವಾಗಿ ಪ್ರಶ್ನೆ ಮಾಡಿದರು.

ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದುಗಳು ತಮ್ಮ ಒಗ್ಗಟ್ಟು ಪ್ರದರ್ಶಿಸಿದರೆ ಅದುಕೋಮುವಾದ ಆಗುವುದಾದರೆ ದಾವಣಗೆರೆಯಲ್ಲಿ ಮುಸ್ಲಿಂ ಬಾಂಧವರಿಗೆ ಕಾಂಗ್ರೆಸ್ ಪಕ್ಷದವರಿಗೆ ಟಿಕೆಟ್ಕೊಡಬೇಕೆಂದು ಒತ್ತಾಯಿಸಿದ್ದು ಕೋಮುವಾದವಲ್ಲವೇ ಎಂದು ಪ್ರಶ್ನಿಸಿದರು.

.9 ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಧರ್ಮವನ್ನುಆಧಾರವಾಗಿಟ್ಟುಕೊಂಡು ಮತದಾರರಲ್ಲಿ ಧರ್ಮಾಂದತೆಯನ್ನು ಮೂಡಿಸಿ ಮತ ವಿಭಜನೆ ಮಾಡಿ ವಾಮ ಮಾರ್ಗದ ಮೂಲಕ ಚುನಾವಣೆ ಗೆಲ್ಲುವ ಹುನ್ನಾರವನ್ನು ಮಾಡುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಇದಕ್ಕಾಗಿ ಸರ್ಕಾರವನ್ನೇ ಬ್ಲಾಕ್‌ಮೇಲ್ ಮಾಡಿ ಹಿಂದುಮುಸ್ಲಿಂ ಎಂದು ಸಮಾಜದಲ್ಲಿ ಒಡಕು ಮೂಡಿಸಿಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧರಾಗಿದ್ದ ಸಚಿವ ಜಮೀರ್ ಅಹಮದ್ ಮೇಲೆ ಕೋಮು ಸೌಹಾರ್ಧತೆಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.

ಪಶ್ಚಿಮಘಟ್ಟ ಪ್ರದೇಶದಲ್ಲಿ ಅವೈಜ್ಞಾನಿಕ ಕಾರ್ಯಗತಗೊಳಿಸಲು ಹೊರಟಿರುವ ಶರಾವತಿ ಪಂಪ್ಡ್ಸ್ಟೋರೇಜ್ ಯೋಜನೆಯನ್ನು ನಿಯೋಜಿಸಿ ಹಲವು ಹೋರಾಟಗಳು ನಡೆದಿದ್ದು, ಇವು ಕೇಂದ್ರ ಸರ್ಕಾರದಗಮನ ಸೆಳೆಯಲು ಯಶಸ್ವಿಯಾಗಿವೆ. ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಯೋಜನೆಗೆ ಇದುವರೆಗೂ ಅನುಮತಿ ಕೊಟ್ಟಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕಾಗಿ ಅವರಿಗೆಅಭಿನಂದನೆಗಳು ಎಂದರು.

ಈಗಾಗಲೇ ಯೋಜನೆಯ ವಿರುದ್ಧ ಹಲವು ಗಣ್ಯರು, ಮಠಾಧೀಶರು, ಪರಿಸರ ಪ್ರೇಮಿಗಳು, ಹೋರಾಟದ ಧ್ವನಿಯನ್ನು ಎತ್ತಿದ್ದಾರೆ.

ರಾಷ್ಟ್ರಭಕ್ತ ಬಳಗವೂ ಅಹೋರಾತ್ರಿ ಧರಣಿ ನಡೆಸಿದೆ. ಹೈಕೋರ್ಟ್ ಕೂಡಾ ಪ್ರಕರಣಕ್ಕೆಸಂಬಂಧಿಸಿದಂತೆ ಛೀಮಾರಿ ಹಾಕಿದೆ. ಸ್ವಾಮೀಜಿಗಳು ಕೂಡಾ ನಮ್ಮ ಹೆಣದ ಮೇಲೆ ಯೋಜನೆಜಾರಿಯಾಗಲಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವೂ ಕೂಡಾ ಅದನ್ನೇ ಹೇಳುತ್ತೇವೆ. ಹಣದದಾಹಕ್ಕಾಗಿ ರೂಪಿಸಿರುವ ಯೋಜನೆಯನ್ನು ಕೈಬಿಡಬೇಕು ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments