ಶಿವಮೊಗ್ಗ.ಮಾ.30: ಅಮೆರಿಕನ್ ವಿಸ್ಟಂ ಪೀಸ್ ಯುನಿವರ್ಸಿಟಿಯಿಂದ ಶಿವಮೊಗ್ಗದ ಲೇಖಕಿ,ಕವಯತ್ರಿ ಎಸ್ ಎಸ್ ಇಂದಿರಾ ಪ್ರಕಾಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
ಇಂದಿರಾ ಅವರ ಸಮಾಜ ಸೇವೆ, ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ಈ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಇತ್ತಿಚೇಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಾಡಲಾಯಿತು.
ಇಂದಿರಾ ಪ್ರಕಾಶ್ ಅವರು ಸಾಹಿತ್ಯ ಸೇವೆ, ಮಹಿಳಾ ಸಬಲೀಕರಣದ ಕಡೆಗಿನ ಬದ್ಧತೆ ಹಾಗೂ ಸಾಮಾಜಿಕ ಚಟುವಟಿಕೆಗಳ ಮಾಡುತ್ತಾ ಬಂದಿದ್ದಾರೆ. ಇಂದಿರಾ ಅಕಾಡೆಮಿ ಸ್ಥಾಪಿಸಿ ಹಲವು ಶೈಕ್ಷಣಿಕ ಕಾರ್ಯಕ್ರಮ ಆಯೋಜಿಸಿದ್ದಾರೆ. ಸ್ನೇಹಿತರ ಬಳಗ ಅಭಿನಂದನೆ ಸಲ್ಲಿಸಿದೆ
