Homeಜಿಲ್ಲೆಸಮಾಧಿ ಧ್ವಂಸ, ವ್ಯವಸ್ಥಿತ ಸಂಚು: ಕೆ.ಎಸ್. ಈಶ್ವರಪ್ಪ

ಸಮಾಧಿ ಧ್ವಂಸ, ವ್ಯವಸ್ಥಿತ ಸಂಚು: ಕೆ.ಎಸ್. ಈಶ್ವರಪ್ಪ

Spread the love

ಶಿವಮೊಗ್ಗ,.2: ಮುಸ್ಲಿಮರ ಒಂದು ಗುಂಪು ಊರಗಡೂರಿನಲ್ಲಿ ಬಾಲಕ ಸಂಕೇತ್‌ನ ಕೊಲೆ ಮಾಡಿತ್ತು. ಇದೀಗ ಅವನ ಸಮಾಧಿಯನ್ನೂ ಧ್ವಂಸಗೊಳಿಸಿದ್ದು, ಇದನ್ನು ಹಿಂದೂ ಸಮಾಜ ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಇಂದು ಸೂಳೆಬೈಲ್‌ನ ರುದ್ರಭೂಮಿಗೆ ಭೇಟಿ ನೀಡಿ ಸಂಕೇತ್ ಸಮಾಧಿ ಧ್ವಂಸಗೊಳಿಸಿದ ಜಾಗಕ್ಕೆತೆರಳಿ ಸಂಪೂರ್ಣ ಮಾಹಿತಿ ಪಡೆದ ಮೇಲೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಂಕೇತ್ ಕೊಲೆ ಮತ್ತು ಸಮಾಧಿ ಧ್ವಂಸ ಪ್ರಕರಣ ವ್ಯವಸ್ಥಿತ ಸಂಚು ಆಗಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳಿಗೆ ನಾನು ಒತ್ತಾಯ ಮಾಡುವುದೇನೆಂದರೆ ಪರಿಹಾರ ಕೊಟ್ಟ ಮಾತ್ರಕ್ಕೆ ಬಿಡಬಾರದು. ದೇಶದ್ರೋಹಿ ಮನಸ್ಥಿತಿ ಹೋಗಬೇಕಾದರೆ ಸರ್ಕಾರ ಕೂಡ ಮನಸ್ಥಿತಿ ಬದಲಾಯಿಸಬೇಕು.

ಹಿಂದೂ ಬಾಲಕನ ತಾಯಿ ಮಗ ಕೊಲೆಯಾದಾಗ ಕಣ್ಣೀರು ಹಾಕುವುದನ್ನು ನೋಡಿ ಇಡೀ ಸಮಾಜ ಮತ್ತು ಇಡೀ ಗ್ರಾಮ ಕಣ್ಣೀರು ಹಾಕಿತ್ತು. ಮಂಗಳೂರಿನಲ್ಲಿ ಕೊಲೆ ಯೊಂದು ನಡೆದಾಗ ಆರ್.ಎಸ್.ಎಸ್. ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಪೌರುಷ ದಿಂದ ಮಾತನಾಡಿದ ಮುಖ್ಯಮಂತ್ರಿಗಳು ಈಗ ಯಾಕೆ ತಣ್ಣಗಿದ್ದಾರೆ ಎಂದು ಪ್ರಶ್ನಿಸಿದರು.

ಇದು ವ್ಯವಸ್ಥಿತ ಪಿತೂರಿ. ಮುಸ್ಲಿಂ ಸಮಾಜ ಎಚ್ಚೆತ್ತು ಕೊಂಡು ತಮ್ಮ ಸಮಾಜದ ಕಿಡಿಗೇಡಿಗಳಿಗೆ ಸರಿ ಮಾಡದಿದ್ದರೆ ಮುಂದೆ ಬಹಳ ತೊಂದರೆ ಅನುಭ ವಿಸುತ್ತಾರೆ. ರಕ್ಷಣಾ ಧಿಕಾರಿಗಳ ಬಗ್ಗೆ ನನಗೆ ನಂಬಿಕೆ ಇದೆ. ಈಗಾಗಲೇ ಎರಡು ತಂಡ ರಚಿಸಿ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಆದರೆ, ಸರ್ಕಾರ ಮನಸ್ಥಿತಿ ಬದಲಾಯಿಸದಿದ್ದರೆ ಇಡೀ ಹಿಂದೂ ಸಮಾಜ ಸರ್ಕಾರದ ವಿರುದ್ಧ ದಂಗೆ ಇದ್ದರೆ ಆಶ್ಚರ್ಯವಿಲ್ಲ. ರೀತಿಗೂಂಡಾಗಿರಿ ಬದಲಾವಣೆಯಾಗದಿದ್ದರೆ ಸಮಾಜ ವೈಯಕ್ತಿಕ ವಾಗಿ ಅನುಭವಿಸಬೇಕಾಗುತ್ತದೆ. ನಿಟ್ಟಿನಲ್ಲಿ ಸರ್ಕಾರ ಜಾಗೃತಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ನಂತರ ಸಂಕೇತ್ ಮನೆಗೂ ಭೇಟಿ ನೀಡಿ ಪೋಷಕರೊಂದಿಗೆ ಮಾತನಾಡಿದರು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಸಂದರ್ಭದಲ್ಲಿ ಕೆ. . ಕಾಂತೇಶ್, . ವಿಶ್ವಾಸ್, ಮೋಹನ್ ಜಾಧವ್, ರಾಜು, ಕುಬೇರಪ್ಪ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments