ಶಿವಮೊಗ್ಗ, ಏ.9 : 2025-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ- 1 ರಲ್ಲಿ ಶಿವಮೊಗ್ಗ ಜಿಲ್ಲೆಯು ಶೇ. 87.62 ಫಲಿತಾಂಶವನ್ನು ಪಡೆದಿದೆ.
ಜಿಲ್ಲೆಯಲ್ಲಿ 17532 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15361 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಗಮನಿಸಿ: ಮಹೀನ್ ಖಾನಮ್ ಜಿಲ್ಲೆಗೆ ಪ್ರಥಮ
ಕಲಾ ವಿಭಾಗದಲ್ಲಿ 3637 ರಲ್ಲಿ 2701 , ವಾಣಿಜ್ಯ ವಿಭಾಗದಲ್ಲಿ 5865 ರಲ್ಲಿ 5139, ವಿಜ್ಞಾನ ವಿಭಾಗದಲ್ಲಿ 8030 ರಲ್ಲಿ 7521, ನಗರ ಭಾಗದಲ್ಲಿ 10084 ರಲ್ಲಿ 8721 ಹಾಗೂ ಗ್ರಾಮೀಣ ಭಾಗದಲ್ಲಿ 7448 ರಲ್ಲಿ 6640 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
2024-25 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ.79.91 ಉತ್ತೇರ್ಣರಾಗಿದ್ದು, ಈ ಸಾಲಿನಲ್ಲಿ ಶೇ.87.62 ಫಲಿತಾಂಶ ಪಡೆಯವ ಮೂಲಕ ಉತ್ತಮ ಪ್ರಗತಿ ಸಾಧಿಸಿದೆ.
