Homeಜಿಲ್ಲೆಬಡ್ಡಿಸಾಲಕ್ಕೆ ಬೇಸೆತ್ತು ವ್ಯಕ್ತಿ ಅತ್ಮಹತ್ಯೆ- ನ್ಯಾಯಾಲಯ ಪರಿಹಾರಕ್ಕೆ ಆದೇಶ

ಬಡ್ಡಿಸಾಲಕ್ಕೆ ಬೇಸೆತ್ತು ವ್ಯಕ್ತಿ ಅತ್ಮಹತ್ಯೆ- ನ್ಯಾಯಾಲಯ ಪರಿಹಾರಕ್ಕೆ ಆದೇಶ

Spread the love

ಶಿವಮೊಗ್ಗ, ಏ.10: ಬಡ್ಡಿ ಸಾಲಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿ 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ನೀಡಿ ನ್ಯಾಯಾಲಯ ಆದೇಶಿಸಿದೆ.

ಗಮನಿಸಿ: ಉನ್ನತ ಶ್ರೇಣಿ ಪಡೆದ ಡಿ ಗ್ರೂಪ್ ನೌಕರನ ಪುತ್ರಿ- ಡಿಸಿಯಿಂದ ಅಭಿನಂದನೆ

ರಾಮಚಂದ್ರ ರವರು ಅವರ ಮಗಳ ಮದುವೆಗಾಗಿ ಕಳೆದ ಸುಮಾರು 10 ವರ್ಷಗಳ ಹಿಂದೆ ಅವರ ಸಂಬಂದಧಿಕರಾದ  1) ಮಹದೇವ,56 ವರ್ಷ, ವಾಸ ಬಂಡಾರಹಳ್ಳಿ ಗ್ರಾಮ , ಭದ್ರಾವತಿ  ಮತ್ತು  2) ಯಶೋದ, 48 ವರ್ಷ, ವಾಸ ಬಂಡಾರಹಳ್ಳ್ಳಿ ಗ್ರಾಮ , ಭದ್ರಾವತಿ ಇವರ ಬಳಿ ಕೈ ಸಾಲವನ್ನು  ಪಡೆದಿದ್ದು,  ನಂತರದ ದಿನಗಳಲ್ಲಿ ಸದರಿ ಹಣವನ್ನು ಆರೋಪಿತರಿಗೆ ವಾಪಸ್ ನೀಡಲು ಹೋದ ಸಮಯದಲ್ಲಿಆರೋಪಿತನು ಬಡ್ಡಿ ಹಣ ಸೇರಿಸಿ ಕೊಡು ಇಲ್ಲವಾದರೆ ಭದ್ರಾವತಿಯ ಬಂಡಾರಹಳ್ಳಿಯಲ್ಲಿನ ಮನೆಯನ್ನುತಮ್ಮ ಹೆಸರಿಗೆ ಬರೆದುಕೊಡು ಅಂತ ರಾಮಚಂದ್ರನಿಗೆ ಒತ್ತಾಯಪಡಿಸಿ, ಅವಾಚ್ಯವಾಗಿ ಮಾತನಾಡಿ, ಹೀಯಾಳಿಸಿ ಬೆದರಿಕೆ ಹಾಕಿದ್ದರಿಂದ ರಾಮಚಂದ್ರನು ದಿನಾಂಕ:06-02-2021 ರಂದು ಸಂಜೆ  ಭದ್ರಾವತಿಯ ಬಿ.ಹೆಚ್. ರಸ್ತೆಯಲ್ಲಿರುವ ರಘು ಲಾಡ್ಜ್ ರೂಂ ನಂ 04 ರಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವನೆ ಮಾಡಿ ಮೃತಪಟ್ಟಿದ್ದು, ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ಗುನ್ನೆ ನಂ. 12/2021 ಕಲಂ 306, 504, 506 ಸಹಿತ 34 ಐಪಿಸಿ ರಿತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಪಿಎಸ್ ಐ ಈರೇಶ  ರವರು ಪ್ರಕರಣದ ತನಿಖೆ ಪೂರೈಸಿ, ಘನನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರು ರತ್ನಮ್ಮ ಪಿ. ಅವರು ವಾದಮಂಡಿಸಿದ್ದು, ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ರವರು ದಿನಾಂಕ:09-04-2026 ರಂದು 1 ಮತ್ತು 2 ಆರೋಪಿತರಿಗೆ ಕಲಂ 306 ಸಹಿತ  34 ಐಪಿಸಿ ಕಾಯ್ದೆಗೆ 10 ವರ್ಷ ಕಠಿಣ ಕಾರಾವಾಸ ಮತ್ತು2,00,000/- ರೂ ದಂಡವನ್ನು ವಿಧಿಸಿ,  ಮೃತ ರಾಮಚಂದ್ರ ರವರ ಹೆಂಡತಿಯವರಿಗೆ ಪರಿಹಾರವಾಗಿ1,00,000/- ರೂಗಳನ್ನು ನೀಡಲು ಆದೇಶಿಸಿರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments