Homeಜಿಲ್ಲೆಫಲಿತಾಂಶ- ಸರ್ಕಾರಿ ಕಾಲೇಜನ್ನು ಹಿಂದಕ್ಕಿಕ್ಕಿದ ಅನುದಾನ ರಹಿತ ಕಾಲೇಜು

ಫಲಿತಾಂಶ- ಸರ್ಕಾರಿ ಕಾಲೇಜನ್ನು ಹಿಂದಕ್ಕಿಕ್ಕಿದ ಅನುದಾನ ರಹಿತ ಕಾಲೇಜು

Spread the love

ಶಿವಮೊಗ್ಗ,  ಏ.10: 2025-26 ನೇ ಸಾಲಿನ ದ್ವಿತೀಯ ಪಿಯುಸಿ-1 ರ ಪರೀಕ್ಷೆ ಫಲಿತಾಂಶ ಹೊರಬಿದಿದ್ದು, ಈ ಫಲಿತಾಂಶದಲ್ಲಿ ಜಿಲ್ಲೆಯ ಅನುದಾನ ರಹಿತ ಕಾಲೇಜುಗಳು  ಸರ್ಕಾರಿ ಕಾಲೇಜನ್ನು ಹಿಂದಕ್ಕಿಕಿ ಮುಂದೆ ಸಾಗಿದೆ.

ಗಮನಿಸಿ: ಬಡ್ಡಿಸಾಲಕ್ಕೆ ಬೇಸೆತ್ತು ವ್ಯಕ್ತಿ ಅತ್ಮಹತ್ಯೆ- ನ್ಯಾಯಾಲಯ ಪರಿಹಾರಕ್ಕೆ ಆದೇಶ

ಕಳೆದ ಬಾರಿ ಫಲಿತಾಂಶಕ್ಕಿಂತ ಈ ಬಾರಿ ಫಲಿತಾಂಶದಲ್ಲಿ ಜಿಲ್ಲೆ  14 ಕ್ಕೆ ಕುಸಿದಿದೆ. ಅದರೂ ಶೇ10 ಮುಂಬಡ್ತಿ ಪಡೆಯುವ ಮೂಲಕ ಸುಧಾರಿಸಿದೆ. ಆದರೆ ಜಿಲ್ಲೆಯ ಫಲಿತಾಂಶದಲ್ಲಿ ಆಶ್ಚರ್ಯಕರ ಸಂಗತಿಯೆಂದರೆ ಅನುದಾನ ರಹಿತ ಕಾಲೇಜುಗಳು ಸರ್ಕಾರಿ ಕಾಲೇಜುಗಳನ್ನು ಓವರ್ ಟೆಕ್ ಮಾಡಿರುವುದು.

ಹಿಂದುಳಿದ ಸರ್ಕಾರಿ ಕಾಲೇಜು:

ಜಿಲ್ಲೆಯಲ್ಲಿ 17 ಕಾಲೇಜುಗಳಲ್ಲಿ ಶೇ.100 ಫಲಿತಾಂಶ ಬಂದಿದ್ದು, ಇದರಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಶೇ. 80.01 ಫಲಿತಾಂಶ ಪಡೆದಿದ್ದು, 895 ಉನ್ನತ ಶ್ರೇಣಿ, 3551 ಪ್ರಥಮ 1179, ದ್ವಿತೀಯ 1179  ಹಾಗೂ 421 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅನುದಾನಿ ಕಾಲೇಜುಗಳು ಶೇ. 86.69 ಫಲಿತಾಂಶ ಪಡೆದಿದ್ದು, 547 ಉನ್ನತ ಶ್ರೇಣಿ, 1398 ಪ್ರಥಮ, 348 ದ್ವಿತೀಯ ಹಾಗೂ 169 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅನುದಾನ ರಹಿತಕ್ಕೆ ಶೇ. 96.74 ಫಲಿತಾಂಶ:

ಅನುದಾನ ರಹಿತ ಕಾಲೇಜುಗಳು ಶೇ.96.74 ಫಲಿತಾಂಶ ಪಡೆದಿದ್ದು, 2971 ಉನ್ನತ ಶ್ರೇಣಿ, 3238 ಪ್ರಥಮ, 310 ದ್ವಿತೀಯ ಹಾಗೂ 49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇನ್ನೂ ವಸತಿ ಶಾಲೆಗಳು ಶೇ. 99.11 ಫಲಿತಾಂಶ ಪದೆದಿದ್ದು, 209 ಉನ್ನತ ಶ್ರೇಣಿ, 121 ಪ್ರಥಮ ಹಾಗೂ 04 ದ್ವಿತೀಯ ಸ್ಥಾನ ಪಡೆದು ಉತ್ತೀರ್ಣರಾಗಿದ್ದಾರೆ.

ಸರ್ಕಾರವು ವಿದ್ಯಾರ್ಥಿಗಳಿಗೆ ಪರೀಕ್ಷೆ ಭರವಸೆಯಾಗಬೇಕು, ಅದು ಅವರಿಗೆ ಹೊರೆಯಾಗಬಾರದೆಂಬ ಉದ್ದೇಶದಿಂದ ಸರ್ಕಾರದಿಂದಲೇ ಕಾಲೇಜುಗಳಲ್ಲಿ ನಡೆಸುವ ಪೂರ್ವಭಾವಿ ಪರೀಕ್ಷೆಗಳಲ್ಲಿ  ಮಾಡೆಲ್ ಪರೀಕ್ಷೆ ಪತ್ರಿಕೆಯನ್ನು ತಯಾರಿ ಕಳಿಸಲಾಗುತ್ತಿತ್ತು. ಇದನ್ನು ಮುಖ್ಯ ಪರೀಕ್ಷೆಗೆ ಅಭ್ಯಾಸ ಪತ್ರಿಕೆಯಾಗಿಯು ಮಾರ್ಪಾಡು ಮಾಡಲಾಗಿತ್ತು. ಅದರಂತೆ 3 ಪೂರ್ವಭಾವಿ ಪರೀಕ್ಷೆಯನ್ನು ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದು, ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತಿತ್ತು. ಅದರೂ ಫಲಿತಾಂಶದಲ್ಲಿ ಸರ್ಕಾರಿ ಕಾಲೇಜು ಅನುದಾನ ರಹಿತ ಕಾಲೇಜುಗಳಿಗಿಂತ ಹಿಂದುಳಿದಿದ್ದು, ಸರ್ಕಾರವು ಪರೀಕ್ಷಾ ದೃಷ್ಟಿಯಲ್ಲಿ ಕೈಗೊಂಡಿದ್ದು ಹೊಸ ಆಯೋಜನೆಯನ್ನು ಮಕ್ಕಳಲ್ಲಿ ಅಳವಡಿಸಲು ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಕಾಲೇಜುಗಳು ವಿಫಲವಾದ್ದಂತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments