Homeಅಪರಾಧಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ- ಪೊಲೀಸ್ ದಾಳಿ

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ- ಪೊಲೀಸ್ ದಾಳಿ

Spread the love

ಶಿವಮೊಗ್ಗ, ಏ.14: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.

ಗಮನಿಸಿ: 1 ಕೆಜಿ 720 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು


ಏ. 12
ರಂದು ಎನ್ ಟಿ ರಸ್ತೆಯಲ್ಲಿನ ಹೋಟೆಲ್ ವೊಂದರ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಪಡೆದ ದೊಡ್ಡಪೇಟೆ ಪೊಲೀಸ್ ಠಾಣೆ

ಪಿಐ ಮತ್ತು ಪಿಎಸ್ಐ ಹಾಗೂ ಸಿಬ್ಬಂಧಿಗಳ ತಂಡವು ದಾಳಿ ನಡೆಸಿದ್ದು, ರಾಗಿಗುಡ್ಡಆಸೀಫ್ ಖಾನ್ (33 ) ಪರಿಶೀಲಿಸಿ ಆತನ ಬಳಿ ಇದ್ದ ಅಂದಾಜು 70,000/- ರೂ ಮೌಲ್ಯದ 1ಕೆಜಿ 400 ಗ್ರಾಂ ತೂಕದ ಗಾಂಜಾವನ್ನು ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 80,000/-  ರೂ ಮೌಲ್ಯದ ಆಟೋವನ್ನು ವಶಪಡಿಸಿಕೊಂಡಿದ್ದು, ಆರೋಪಿ ವಿರುದ್ಧ ಠಾಣಾ ಗುನ್ನೆ ಸಂಖ್ಯೆ 134/2026 ಕಲಂ  20(b) (ii) B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments