ಶಿವಮೊಗ್ಗ,ಏ.16 : ಚಿತ್ರಸಿರಿ-ಸಿರಿವಂತೆ ವತಿಯಿಂದ ಏ.17 ರ ಸಂಜೆ 4 ಗಂಟೆಗೆ ಸಾಗರ ತಾಲ್ಲೂಕಿನ ಸಿರಿವಂತೆಯ ಚಿತ್ರಸಿರಿ ಅಂಗಳದಲ್ಲಿ ಸಿರಿಗೌರಿ ಮತ್ತು ಚಿಗುರು ಸಿರಿಗೌರಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಚಂದ್ರಶೇಖರ ಸಿರಿವಂತೆ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯದಲ್ಲಿ ಮಾತನಾಡಿದ ಅವರು, ನನ್ನ ಬಾಳ ಸಂಗಾತಿಯಾಗಿದ್ದ ಗೌರಿಯವರು 2022 ರ ಫೆಬ್ರವರಿಯಲ್ಲಿ ಇಹಲೋಹ ತ್ಯಜಿಸಿದರು. ನನ್ನಾಕೆಯ ಜನ್ಮದಿನವಾದ ಏ.19 ರಂದು ಆಕೆ ನೆನಪಿನಲ್ಲಿ ಹಾಗೂ ಆಕೆಯ ಹೆಸರಿನಲ್ಲಿ 2023 ರಿಂದ ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದರು.
ಗೌರಿ ನೆನಪಿನಲ್ಲಿ 45 ವರ್ಷ ದಾಟಿದ ಅಪರೂಪದ ಸಾಧನೆ ಮಾಡಿರುವ ಒಬ್ಬ ಹೆಣ್ಣು ಮಗಳಿಗೆ ಸಿರಿಗೌರಿ ಪ್ರಶಿಸ್ತಿ, 1 ರಿಂದ ಸ್ನಾತಕೋತ್ತರ ಓದುತ್ತಿರುವ ವಿದ್ಯಾರ್ಥಿನಿಗೆ ಚಿಗುರು ಸಿರಿಗೌರಿ ಪ್ರಶಸ್ತಿ ನೀಡಲಾಗುತ್ತಿದೆ.
ಸಿರಿಗೌರಿ ಪ್ರಶಸ್ತಿಯೊಂದಿಗೆ ರೂ. 5000 ನಗದು ಹಾಗೂ ಚಿಗುರು ಸಿರಿಗೌರಿ ಪ್ರಶಸ್ತಿಯೊಂದಿಗೆ ರೂ.2000 ನಗದು ಜೊತೆಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿದೆ ಎಂದರು.
ಈ ಬಾರಿಯ ಸಿರಿಗೌರಿ ಪ್ರಶಸ್ತಿಗೆ ಶಿವಮೊಗ್ಗದ ವಕೀಲರಾದ ಸರೋಜ ಚಂಗೊಳ್ಳಿ ಹಾಗೂ ಚಿಗುರು ಸಿರಿಗೌರಿ ಪ್ರಶಸ್ತಿಗೆ ಸಾಗರ ತಾಲ್ಲೂಕಿನ ಬಳಸಗೋಡಿನ ರಾಷ್ಟ್ರೀಯ ಯೋಗಪಟು 11 ವರ್ಷದ ನಮನ ಆಯ್ಕೆಯಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜನಮೇಜಿ ರಾವ್, ಜಗದೀಶ್ ಸಂಪಳ್ಳಿ, ನಟರಾಜ್ ಇದ್ದರು.
