ದೆಹಲಿ, ಏ.17 : ಬಹು ನಿರೀಕ್ಷಿತ ಹಾಗೂ ಮೋದಿ ಸರ್ಕಾರ ಜಾರಿ ಮಾಡಿಯೇ ತಿರುತ್ತೇವೆ ಎನ್ನುತ್ತಿದ್ದ ಮಹಿಳಾ ಮೀಸಲಾತಿ ಬಿಲ್ ಗೆ ಲೋಕಾಸಭೆಯಲ್ಲಿ ಸೋಲಾಗಿದೆ.
ಕ್ಷೇತ್ರ ಪುನರ್ ವಿಂಗಡಣೆ ಮತ್ತು ಶೇ.33 ರಷ್ಟು ಮಹಿಳಾ ಮೀಸಲಾತಿ ಮಸೂದೆ ಮಂಡನೆಗಾಗಿ ಇಂದು ವಿಶೇಷ ಸಂಸತ್ ಅನ್ನು ಮೋದಿ ಸರ್ಕಾರ ಕರೆದಿತ್ತು. ಅದರಂತೆ ಪ್ರಧಾನಿ ಮೋದಿಯವರು ಮಹಿಳಾ ಮೀಸಲಾತಿ ಮಸೂದೆಯ ಪರ ಮತ ಹಾಕಲು ಸಭೆ ಕರೆದು ಎಲ್ಲಾ ಸಂಸದರಿಗೆ ಹಾಗೂ ತಮ್ಮ ಎಕ್ಸ್ ಖಾತೆಯಲ್ಲೂ ಮನವಿ ಮಾಡಿದ್ದರು. ಆದರು ಪ್ರಧಾನಿಯ ಮನವಿ ಫಲಿಸಲ್ಲಿ.
ಗಮನಿಸಿ:ನಕಲಿ ಪಿಹೆಚ್ಡಿ ಸರ್ಟಿಫಿಕೇಟ್ : ಅತಿಥಿ ಉಪನ್ಯಾಸಕ- ವಜಾ
ಒಟ್ಟು ಲೋಕಾಸಭೆಯಲ್ಲಿ 543 ಸಂಸದರಿದ್ದು, ಮಸೂದೆಯ ಅಂಗೀಕಾರಕ್ಕೆ 326 ಮತಗಳು ಬೇಕಿತ್ತು. ಆದರೆ ಮಸೂದೆಯ ಪರವಾಗಿ 298 ಮತ ಚಲಾಯಿಸಿದ್ದು, 230 ಮತಗಳು ಅದರ ವಿರುದ್ದ ಮಂಡನೆಯಾಗಿದೆ. 28 ಮತಗಳಿಂದ ಈ ಮಸೂದೆ ಸೋಲಾಗಿದೆ. ಅದರೆ ಕುತೂಹಲಕಾರಿ ಎಂದರೆ ಈ ಮಸೂದೆ ಅಂಗೀಕಾರರ ಅಧಿವೇಶನಕ್ಕೆ 54 ಸಂಸದರು ಗೈರಾಗಿದ್ದಾರೆ. ಇದು ಬಹಳ ಚರ್ಚೆಗೂ ಗ್ರಾಸವಾಗಿದೆ
