Homeಜಿಲ್ಲೆಬೃಹತ್ ಕಾದಂಬರಿಗೆ “ಸ್ವಾತಂತ್ರ್ಯದ ಓಟ” ಕ್ಕೆ ರಂಗರೂಪ

ಬೃಹತ್ ಕಾದಂಬರಿಗೆ “ಸ್ವಾತಂತ್ರ್ಯದ ಓಟ” ಕ್ಕೆ ರಂಗರೂಪ

Spread the love

ಶಿವಮೊಗ್ಗ,ಏ.22: ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನವಾಗಿರುವ ಬೊಳುವಾರ ಮಹಮ್ಮದ್ ಕುಂಇ ಅವರ ಸ್ವಾತಂತ್ರ್ಯದ  ಓಟ ಕಾದಂಬರಿಯನ್ನು ನಾಟಕಕ್ಕೆ ರೂಪಾಂತರಗೊಳಿಸಿದ್ದು, ಇದೇ ಏ.25 ಮತ್ತು 26 ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರಲ್ಲಿ ಪ್ರದರ್ಶನಕ್ಕೆ ಸಿದ್ದವಾಗಿದೆ ಎಂದು ರಂಗಾಯಣದ ನಿರ್ದೇಶಕ ಪ್ರಸನ್ನ ಸಾಗರ್ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025 ಮಾ.7 ರ ಆಯವ್ಯಯ ಘೋಷಣೆ ಕಂಡಿಕೆ 371 ರಲ್ಲಿ ಲೇಖಕರಾದ ಬೊಳುವಾರು ಮಹಮ್ಮದ್ ಕುಂಇ ಅವರ ಸ್ವಾತಂತ್ರ್ಯದ ಓಟ ಕಾದಂಬರಿಯನ್ನು ರಂಗರೂಪಕ್ಕೆ ತರಲು ಸರ್ಕಾರವು ಒಂದು ಕೋಟಿ ವಿಶೇಷ ಅನುದಾನ ನೀಡಿ, ಅದರ ಜವಾಬ್ದಾರಿಯನ್ನು ಶಿವಮೊಗ್ಗ ರಂಗಾಯಣಕ್ಕೆ ಕೊಟ್ಟಿತ್ತು. ಅದರಂತೆ ಸರ್ಕಾರವೂ 8 ಜನ ಹಿರಿಯ ಸಲಹಾ ಸಮಿತಿಯನ್ನು ರಚಿಸಿದ್ದು, ಶಿವಮೊಗ್ಗ ರಂಗಾಯಣ ಆ ಸಮಿತಿಯ ಸದಸ್ಯರ ಸಲಹೆಗಳನ್ನು ಪಡೆದು ನಾಟಕವನ್ನು ರಂಗರೂಪಕ್ಕೆ ತರಲು ಸಿದ್ದವಾಗಿತ್ತು ಎಂದರು.

ಈ ಕಾಂಬದರಿಯ ಕೆಲವು ಭಾಗಗಳನ್ನು ಆಯ್ದು ಮಂಜುನಾಥ್ ಗೋಮಾರದಹಳ್ಳಿ ಅವರು ನಾಟಕಕ್ಕೆ ರೂಪಾಂತರ ಮಾಡಿದ್ದಾರೆ. ಇದನ್ನು ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ರಂಗಪಠ್ಯ ಮಾಡಿ ವಿನ್ಯಾಸಗೊಳಿಸಿ ನಿರ್ದೇಶನ ಮಾಡಿದ್ದಾರೆ. 3 ಗಂಟೆಯ ಕಾಲಾವಧಿ ನಾಟಕ ಇದಾಗಿದ್ದು, ಈ ನಾಟಕ್ಕಾಗಿ ಕರ್ನಾಟಕದ ಬೇರೆ ಭಾಗಗಳಿಂದ 22 ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ತಾಂತ್ರಿಕ ವರ್ಗದಲ್ಲಿ ಸಹ ನಿರ್ದೇಶಕ ಸಲ್ಮಾ ದಂಡಿನ್, ಸಂಗೀತ ರಾಘವ ಕಮ್ಮಾರ, ವಸ್ತ್ರ ವಿನ್ಯಾಸ ಡಾ.ಸಹನಾ ಪಿಂಜರ್, ರಂಗ ಸಜ್ಜಿಕೆ ನಿರ್ಮಾಣ ಮಧುಸೂಧನ್.ಬಿ.ಆರ್, ರಮೇಶ ಎಸ್ ಮೈಸೂರು, ಶಂಕರ ಬೆಳಲಕಟ್ಟೆ, ಬೆಳಕು ಮಂಜು ನಾರಾಯಣ, ಧ್ವನಿ ವಿನ್ಯಾಸ ಅಕ್ಷರ ವೇಣುಗೋಪಾಲ ನಿರ್ವಹಣೆ ಮಾಡಲಿದ್ದಾರೆ ಎಂದರು.

ಆಡಳಿತಾಧಿಕಾರಿ ಶೈಲಾಜ ಮಾತನಾಡಿ, ಸರ್ಕಾರದ ಅನುದಾನದಡಿ ಶಿವಮೊಗ್ಗ ರಂಗಾಯಣದಿಂದ ಸಿದ್ದವಾಗಿರುವ ಎರಡನೇ ನಾಟಕ ಇದಾಗಿದ್ದು, ಪ್ರದರ್ಶನ ಶುಲ್ಕ ರೂ.30 ಒಳಗೊಂಡಿದೆ. ಈಗಾಗಲೇ ಈ ನಾಟಕವನ್ನು ಬೇರೆ ಜಿಲ್ಲೆಗಳಲ್ಲೂ ಪ್ರದರ್ಶನ ಮಾಡುವ ಆಲೋಚನೆಯನ್ನು ನಡೆಸುತ್ತಿದ್ದು, ಅದಕ್ಕೆ ರೂಟ್ ಮ್ಯಾಪ್ ಸಿದ್ದಪಡಿಸಲಾಗಿದೆ. ಏ.28 ರ ನಂತರ ಅದನ್ನು ಕಾರ್ಯಗತಗೊಳಿಸಲಾಗುವುದು. ಇಲ್ಲದೇ ನಾ.ಡಿಸೋಜ ಅವರ ಕಾಗೋಡು ಹೋರಾಟಕ್ಕೆ ಮುನ್ನುಡಿಯಾದ ಘಟನೆಗೆ ಒಳಗೊಂಡಿರುವ ಕೊಳಗ ಎನ್ನುವ ಕಾದಂಬರಿಯನ್ನು ನಾಟಕದ ರಂಗರೂಪಕ್ಕೆ ತರಲು ಸರ್ಕಾರದಿಂದ ಅನುದಾನ ನೀಡಲು ಪ್ರಸ್ತಾವನೆಯನ್ನು ಕಳಿಸಿದ್ದೇವೆ ಎಂದು ಮಾಹಿತಿ ನೀಡಿದರು.

ನಾಟಕ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಮಾತನಾಡಿ, ಒಟ್ಟಾಗಿ ಬಾಳುವ ಕಲೆಯನ್ನು ರೂಪಿಸುವುದೇ ಈ ನಾಟಕ ಆಶಯವಾಗಿದೆ. ಧರ್ಮ ಧರ್ಮಗಳ ನಡುವೆ ದ್ವೇಷಕಾರುತ್ತಿರುವ ಈ ವಿದ್ಯಾಮಾನದಲ್ಲಿ ಇಂತಹ ನಾಟಕ ಅವಶ್ಯಕತೆ ಇದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments