Homeಜಿಲ್ಲೆಮಗಳಿಗೆ ಉಚಿತ ಆಪರೇಷನ್- ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಿದ ತಾಯಿ

ಮಗಳಿಗೆ ಉಚಿತ ಆಪರೇಷನ್- ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಿದ ತಾಯಿ

Spread the love

ಶಿವಮೊಗ್ಗ,ಏ.24 : ಪತ್ರಕರ್ತರ ಸಹಕಾರದಲ್ಲಿ ಸುಮಾರು 7ಲಕ್ಷ ರೂ. ಖರ್ಚಾಗುವ ಮಗಳ ಬೆನ್ನು ಮೂಳೆಯ ಆಪರೇಷನ್ ಉಚಿತವಾಗಿ ಆಗಿದ್ದು ಇದಕ್ಕಾಗಿ ನೆರವು ನೀಡಿದ ಪತ್ರಕರ್ತರನ್ನು ಮತ್ತು ಸಹಾಯ ಮಾಡಿದ ಎಲ್ಲರನ್ನು ಕೃತಜ್ಞತೆಯಿಂದ ನೆನೆಯುವುದಾಗಿ ಬೊಮ್ಮನಕಟ್ಟೆಯ ಲಕ್ಷ್ಮೀ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ನನ್ನ ಮಗಳು ಹರ್ಷಿತಾ(9)ಳಿಗೆ ಬೆನ್ನುಮೂಳೆ ಸಮಸ್ಯೆಯಾಗಿತ್ತು. ಆಗ ನಾನು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿ ಚಿಕಿತ್ಸೆಗೆ ನೆರವು ನೀಡುವಂತೆ ಕೋರಿದ್ದೆ. ಪತ್ರಿಕೆಯಲ್ಲಿ ಬಂದ ವರದಿಯನ್ನು ಕಂಡು ಹಲವರು ನನಗೆ ಹಣದ ಸಹಾಯ ಮಾಡಿದರು. ಅದರಲ್ಲಿ ಪ್ರಮುಖವಾಗಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಕೆ.ವಿ. ಶಿವಕುಮಾರ್ ಮತ್ತು ಶಿಕಾರಿಪುರದ ಪತ್ರಕರ್ತರಾದ ಕೆ.ಎಸ್. ಹುಚ್ರಾಯಪ್ಪ ಅವರು ಸ್ಪಂದಿಸಿ ಕೂಡಲೇ ಶಿವಮೊಗ್ಗದ ದೀಪಕ್ ಪೈನ್‌ಕೇರ್ ವೈದ್ಯರಾದ ಡಾ||ದೀಪಕ್ ಅವರನ್ನು ಭೇಟಿಮಾಡಿ ವಿಷಯವನ್ನು ತಿಳಿಸಿ, ಸಹಾಯ ಮಾಡುವಂತೆ ಕೋರಿದರು. ಅವರು ಎಲ್ಲಾ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಿ ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಗೆ ಹೋಗಿ ಎಂದು ಶಿಫಾರಸ್ಸು ಪತ್ರ ನೀಡಿದರು. ಅಲ್ಲಿ ನಾನು ಹೋದಾಗ ಡಾ|| ರಾಘವೇಂದ್ರ ಹಾಗೂ ಅವರ ತಂಡದವರು ನನ್ನ ಮಗಳಿಗೆ ಉಚಿತವಾಗಿ ಆಪರೇಷನ್ ಮಾಡಿದರು. ಇದಕ್ಕೆ ಬೇರೆ ಕಡೆಯಾಗಿದ್ದರೆ ಸುಮಾರು 7 ಲಕ್ಷ ರೂ. ಖರ್ಚಾಗುತ್ತಿತ್ತು. ಪತ್ರಕರ್ತರ ನೆರವು, ಸಾರ್ವಜನಿಕರ ಸಹಾಯದಿಂದ ಬಡತನದಲ್ಲಿದ್ದ ನಮಗೆ ಇದು ವರವಾಗಿ ಪರಿಣಮಿಸಿತು ಎಂದರು.

ಗಮನಿಸಿ:ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ- ಶೀಘ್ರವೇ ತೀರ್ಮಾನ : ಜಿ.ಆರ್.ರಾಘವೇಂದ್ರ

ಈಗ ನನ್ನ ಮಗಳು ಹರ್ಷಿತ ಗುಣಮುಖಳಾಗುತ್ತಿದ್ದಾಳೆ ಇಂತಹ ಪುಣ್ಯದ ಕಾರ್ಯದಲ್ಲಿ ನೆರವಿಗೆ ನಿಂತ ಪತ್ರಕರ್ತರಾದ ಕೆ.ವಿ.ಶಿವಕುಮಾರ್, ಡಾಕ್ಟರ್ ದೀಪಕ್ ಹಾಗೂ ಇವರನ್ನು ಪರಿಚಯಿಸಿದ ಶಿಕಾರಿಪುರದ ಪತ್ರಕರ್ತರಾದ ಕೆ.ಎಸ್. ಹುಚ್ಚರಾಯಪ್ಪ ಇವರುಗಳ ನೆರವನ್ನು ನಾನು ಮರೆಯುವುದಿಲ್ಲ.

ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯ ಡಾ|| ರಾಘವೇಂದ್ರ ಹಾಗೂ ಅವರ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳಿಗೂ ನಾನು ಗೌರವಪೂರ್ವಕ ನಮಸ್ಕಾರ ತಿಳಿಸುತ್ತೇನೆ. ವಿಶೇಷವಾಗಿ ಶಿವಮೊಗ್ಗದ ಎಲ್ಲಾ ಪತ್ರಿಕಾ ಬಾಂಧವರನ್ನು ಹಾಗೂ ಹಣದ ಸಹಾಯ ಮಾಡಿದ ಕೆ.ಎಸ್.ಹುಚ್ಚರಾಯಪ್ಪ, ಶರತ್ ಆರ್., ಮಂಜುನಾಥ್ ವಿ., ಸಾಗರ್ ಬಿ., ಕೃಷ್ಣಮೂರ್ತಿ ಎನ್.ಹೆಚ್., ಮಹೇಶ್ ಕುಮಾರ್, ಮಂಜುನಾಥ್, ಸಿದ್ದಣ್ಣ, ಎ.ಎಲ್. ಶ್ರೀನಿವಾಸ್‌ಮೂರ್ತಿ, ಇಸ್ಮಾಯಿಲ್ ಕುಟ್ಟಿ, ಸಿದ್ದಲಿಂಗೇಶ್, ಪಿ.ಹೆಚ್.ನಾಗರಾಜ್, ರಾಹುಲ್, ಬಾಬು ಎಸ್., ಇರ್ಫಾನ್ ಆರ್., ಮಂಜುನಾಥ್ ಎಸ್.ಕೆ. ಇವರೆಲ್ಲರಿಗೂ ಅಭಿನಂದನೆ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments