ಶಿವಮೊಗ್ಗ, ಏ.29: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದಬೃಂದಾ 590(98.33) ಹಾಗೂ ವಾಣಿಜ್ಯ ವಿಭಾಗದ ರಂಜಿತಾ ಜಿ 596(99.33) ವಶಿಷ್ಟ ಎನ್.ಎಸ್.595 (99.17) ವಿಜ್ಞಾನ ವಿಭಾಗದ ಮಹಿನ್ ಖಾನಂ ಆಫ್ರಿದಿ 596 (99.33) ಹಾಗೂ ಸೋನಿಯಾ ಅವರುಗಳ ಮನೆಗೆ ಭೇಟಿ ನೀಡಿದ ಸದ್ಭಾವನ ಟ್ರಸ್ಟ್ನ ಅಧ್ಯಕ್ಷರು, ಕಾಂಗ್ರೆಸ್ನ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಅವರು ಅತಿ ಹೆಚ್ಚು ಅಂಕಪಡೆದ ಈ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಿದರು.
