Homeಅಪರಾಧ28 ಗ್ರಾಂ ಬಂಗಾರ ಕಳ್ಳತನ – ಆರೋಪಿ ಸೆರೆ

28 ಗ್ರಾಂ ಬಂಗಾರ ಕಳ್ಳತನ – ಆರೋಪಿ ಸೆರೆ

Spread the love

ಶಿವಮೊಗ್ಗ,ಮೇ.3: ನವುಲೆ ಸರ್ಜಿ ಕನ್ವೆಷನ್ ಹಾಲ್ ನಲ್ಲಿ ಮದುವೆಯ ಸಮಯದಲ್ಲಿ ರೂಮ್ ಗಳಲ್ಲಿ ಬ್ಯಾಗ್ ನಲ್ಲಿದ್ದ ಆಭರಣ ಕಳ್ಳತವಾಗಿದ್ದು, ಪೊಲೀಸ್ ಆರೋಪಿಯನ್ನು ಪತ್ತೆ ಹಚ್ಚಿ ಕಳ್ಳತವಾದ ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದಾರೆ.

2026 ಏ.30 ರಂದು ರಂದು ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ನವುಲೆ ಸರ್ಜಿ ಕನ್ವೆಷನ್ ಹಾಲ್ ನಲ್ಲಿ ಮದುವೆಯ ಸಮಯದಲ್ಲಿ ರೂಮ್ ಗಳಲ್ಲಿ ಬ್ಯಾಗ್ ನಲ್ಲಿಟ್ಟಿದ್ದ ಒಟ್ಟು 28 ಗ್ರಾಂ ತೂಕದ ಬಂಗಾರದ ಆಭರಣಗಳು ಅವುಗಳ ಬೆಲೆ 2,40,000/- ರೂಗಳನ್ನು ತೆಗೆದುಕೊಂಡು ಹೋಗಿದ್ದು ಈ ಬಗ್ಗೆ ಪಿರ್ಯಾದುದಾರರಾದ ತೇವರ ಚಟ್ನಹಳ್ಳಿ ಗ್ರಾಮದ ಸದಾಶಿವಪ್ಪ ಏ.30 ರಂದು ದೂರು ನೀಡಿದ ಮೇರೆಗೆ ವಿನೋಬನಗರ ಪೊಲೀಸ್ ಠಾಣೆ ಸಿ ಆರ್ ನಂ 86/2026 ಕಲಂ ಕಲಂ 305ಬಿಎನ್‌ಎಸ್ 2023 ರೀತ್ಯಾ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.

ಗಮನಿಸಿ:ಪೊಲೀಸ್ ದಾಳಿ- 1 ಕೆಜಿ 67 ಗ್ರಾಂ ತೂಕದ ಗಾಂಜಾ ವಶ

ಕಳ್ಳತವಾದ ಬಂಗಾರ ಆಭರಣಗಳನ್ನು ಮತ್ತು ಆರೋಪಿಯನ್ನು ಪತ್ತೆ ಮಾಡಲು ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್ ಬಿ.ಹೆಚ್ಚವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ. ಎ.ಜಿ, ಡಿವೈಎಸ್‌ಪಿ ಸಂಜೀವ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರು ಸುರೇಶ್ ಉಸ್ತವಾರಿಯಲ್ಲಿ ಪಿಎಸ್‌ಐ ತಿರುಮಲೇಶ್ ಮತ್ತು ಸಿಬ್ಬಂದಿಗಳಾದ ರಾಜು, ಚಂದ್ರನಾಯ್ಕ, ಮಲ್ಲಪ್ಪ, ಅರುಣ್ ಕುಮಾರ್, ಮನುಶಂಕರ ಇವರುಗಳ ತಂಡವನ್ನು ರಚಿಸಲಾಗಿರುತ್ತದೆ.

ಈ ಪ್ರಕರಣದ ಆರೋಪಿತರ ಪತ್ತೆಯಲ್ಲಿದ್ದಾಗ ಮಾಹಿತಿ ಸಂಗ್ರಹಿಸಿ ಇದರಲ್ಲಿ ಭಾಗಿಯಾಗಿದ್ದ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಮತ್ತು ಆರೋಪಿ ಶರಾವತಿ ನಗರ ಆಟೋ ಕಾಂಪ್ಲೇಕ್ಸ್ ನ  ಅಮ್ಜದ್ ಖಾನ್ @ ಅಂಜು ಬಿನ್ ಹಬೀಬುಲ್ಲಾ ಖಾನ್ 29 ವರ್ಷ ಈತನನ್ನು ಮೇಲೆ ಪ್ರಕರಣ ದಾಖಲಾಗಿ 06 ಗಂಟೆಯೊಳಗೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಅಭಿರಕ್ಷೆಗೊಳಪಡಿಸಿ ನಂತರ ಆರೋಪಿತನನ್ನು ಬಂಧಿಸಿ ಆರೋಪಿ ಕಡೆಯಿಂದ ಪ್ರಕರಣದಲ್ಲಿ ಕಳವು ಮಾಡಿಕೊಂಡು 24 ಗ್ರಾಂ ತೂಕದ ಬಂಗಾರದ ಆಭರಣಗಳು ಅದರ ಬೆಲೆ 3,75,000 ಮತ್ತು ಕೃತ್ಯಕ್ಕೆ ಬಳಸಿದ 2,10,000/- ರೂ ಮೌಲ್ಯದ 02 ಬೈಕ್ ಗಳು ಸೇರಿ ಒಟ್ಟು ಅಂದಾಜು ಮೌಲ್ಯ 5,85,000/- ರೂ ಗಳ ಮಾಲು ವಶ ಪಡಿಸಿಕೊಳ್ಳಲಾಗಿದೆ.

ಈ ಪತ್ತೆ ಕಾರ್ಯವನ್ನು ಶಿವಮೊಗ್ಗ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ನಿಖಿಲ್ ಬಿ. ಐ.ಪಿ.ಎಸ್ ರವರು ಶ್ಲಾಘೀಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments