Homeಅಪರಾಧಹಲ್ಮೆಟ್ ಧರಿಸುವುದಿಲ್ಲವೆಂದ ಸವಾರ- ಪೊಲೀಸರಿಂದ ಕಠಿಣ ಶಿಕ್ಷೆ

ಹಲ್ಮೆಟ್ ಧರಿಸುವುದಿಲ್ಲವೆಂದ ಸವಾರ- ಪೊಲೀಸರಿಂದ ಕಠಿಣ ಶಿಕ್ಷೆ

Spread the love

ಶಿವಮೊಗ್ಗ, ಮೇ.5: ಹೆಲ್ಮೆಟ್ ಹಾಕಿ ಎಂದಿದ್ದಕ್ಕೆ ಪೊಲೀಸ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಗಮನಿಸಿ:ಪಶು ವೈದ್ಯಕೀಯ ವಿಜ್ಞಾನಿಗಳ ಮುಷ್ಕರ ಸ್ಥಳಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ ಭೇಟಿ

ಮೇ. 04 ಬೆಳಗ್ಗೆ ಪೂರ್ವ ಸಂಚಾರ ಪೊಲೀಸ್ ಠಾಣೆಯ ಎಎಸ್ ಐ ಮಂಜುನಾಥ ಮತ್ತು ಸಿಪಿಸಿ ಸಂತೋಶ್ ರವರುಗಳು ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ ಸಂಚಾರಿ ಕರ್ತವ್ಯದಲ್ಲಿದ್ದಾಗ, ದ್ವಿ ಚಕ್ರವಾಹನ ಸವಾರನೊಬ್ಬನು ಶಿರಸ್ತ್ರಾಣ  ಧರಿಸದೆ, ಸಂಚಾರ ನಿಯಮ ಉಲ್ಲಂಘಿಸಿ, ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದನ್ನು ಗಮನಿಸಿ,   ಅವನಿಗೆ ನಿಲ್ಲಿಸಲು ಸೂಚಿಸಿದ್ದಾರೆ.

ಬೈಕ್ ಸವಾರ ಸಯ್ಯದ್ ಮುಜಾಮಿಲ್ ನು ರಸ್ತೆಯ ಮಧ್ಯ ಬೈಕ್ ನಿಲ್ಲಿಸಿಕೊಂಡು ವಾಗ್ವಾದಕ್ಕೆ ಇಳಿದಿದ್ದು, ಅವನಿಗೆ ಶಿರಸ್ತ್ರಾಣ ಧರಿಸಬೇಕಾದ ಮಹತ್ವದ ಬಗ್ಗೆ ಹೇಳುತ್ತಿದ್ದಾಗ, ಅಲ್ಲಿಗೆ ಬಂದ ಜಬಿವುಲ್ಲಾ ಎಂಬುವವನು  ನಾವು ಹೆಲ್ಮೆಟ್ ಹಾಕುವುದಿಲ್ಲ ಏನು ಮಾಡುತ್ತೀಯ ಎಂದು ಇಬ್ಬರೂ ಸೇರಿ  ಪೊಲೀಸ್‌  ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ತಳ್ಳಿ ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೈಕಿನ ಕೀ ಕಿತ್ತು ಕೊಂಡು ನಿಮಗೆ ನೋಡಿಕೊಳ್ಳುತ್ತೇವೆ ಎಂದು  ಬೆದರಿಕೆ ಹಾಕಿ, ಬೈಕ್ ತೆಗೆದುಕೊಂಡು ಹೋಗಿದ್ದು, ಬಗ್ಗೆ ಕೋಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 99/2026  ಕಲಂ 121(1), 132, 3(5) ಬಿ.ಎನ್.ಎಸ್ ಕಾಯ್ದೆ ರೀತ್ಯಾಪ್ರಕರಣ ದಾಖಲಿಸಿಕೊಂಡು, ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿ, ಘನ ನ್ಯಾಯಾಲಯದ ಮುಂದೆ ಹಾಜರ್ ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments