Homeಜಿಲ್ಲೆಕುವೆಂಪು ವಿವಿಯಲ್ಲಿ ನಾಳೆಯಿಂದ ‘ಮಾನವ-ವನ್ಯಜೀವಿ ಸಂಘರ್ಷ’ ಕುರಿತು ರಾಷ್ಟ್ರೀಯ ಸಮ್ಮೇಳನ

ಕುವೆಂಪು ವಿವಿಯಲ್ಲಿ ನಾಳೆಯಿಂದ ‘ಮಾನವ-ವನ್ಯಜೀವಿ ಸಂಘರ್ಷ’ ಕುರಿತು ರಾಷ್ಟ್ರೀಯ ಸಮ್ಮೇಳನ

Spread the love

ಶಿವಮೊಗ್ಗ ಮೇ,13: ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿ ಮತ್ತು ನಿರ್ವಹಣಾ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ವತಿಯಿಂದಮಾನವವನ್ಯಜೀವಿ ಸಂಘರ್ಷ, ಸಹಬಾಳ್ವೆ ಮತ್ತು ಜೀವವೈವಿಧ್ಯ ಸಂರಕ್ಷಣೆ  ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಮೇ 14 ಮತ್ತು15 ರಂದು ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಅರಣ್ಯ ಇಲಾಖೆ, ಚಿಕ್ಕಮಗಳೂರು ವೃತ್ತ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ಸಮ್ಮೇಳನ ನಡೆಯಲಿದೆ.

ಮೇ 14 ಗುರುವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ಮುಖ್ಯ ವನ್ಯಜೀವಿ ಪಾಲಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಅವರು ಉದ್ಘಾಟಿಸಲಿದ್ದಾರೆ. ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಕಾನ್ (SACON) ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಎಚ್.ಎನ್. ಕುಮಾರ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.

ಎರಡು ದಿನಗಳ ಸಮ್ಮೇಳನದಲ್ಲಿ ವನ್ಯಜೀವಿ ತಜ್ಞರಿಂದ ಹನ್ನೆರಡು ವಿಶೇಷ ಉಪನ್ಯಾಸಗಳು ನಡೆಯಲಿವೆ. ಮೊದಲ ದಿನ ಮೇ 15 ಗುರುವಾರದಂದು ಪಶ್ಚಿಮ ಘಟ್ಟಗಳಲ್ಲಿನ ಜೀವ ವೈವಿಧ್ಯದ ಬಿಕ್ಕಟ್ಟಿನ ಬಗ್ಗೆ ಪ್ರೊ. ಟಿ.ಎನ್. ಪ್ರಕಾಶ್ ಕಮ್ಮರ್ಡಿ, ಕರ್ನಾಟಕದ ವನ್ಯಜೀವಿ ಸಂಘರ್ಷದ ಬಗ್ಗೆ ಡಾ. ಹೊನ್ನವಳ್ಳಿ.ಎನ್. ಕುಮಾರ್, ಚಿರತೆಗಳೊಂದಿಗಿನ ಸಹಬಾಳ್ವೆ ಕುರಿತು ಡಾ. ಸಂಜಯ್ ಗುಬ್ಬಿ, ಹುಲಿಮಾನವ ಸಂಘರ್ಷದ ಬಗ್ಗೆ ಐಜಿಪಿ ಡಾ. ಪಿ.ಎಸ್. ಹರ್ಷ ಮತ್ತು  ಆನೆಗಳ ಸಂಘರ್ಷದ ಕುರಿತು ಡಾ. ತಮ್ಮಯ್ಯ ಸಿ.ಕೆ. ಮತ್ತು ಮಾನವ ಹಸ್ತಕ್ಷೇಪವು ವನ್ಯಜೀವಿಗಳ ನಿರ್ಧಾರಗಳ ಮೇಲೆ ಪ್ರಭಾವದ ಬಗ್ಗೆ ಡಾ. ಹರೀಶ್ ಪ್ರಕಾಶ್ ಹಾಗೂ ಅವರು ವಿಷಯ ಮಂಡಿಸಲಿದ್ದಾರೆ.

ಗಮನಿಸಿ:ಮೇ.16 ರಂದು 11 ನೇ ವರ್ಷದ ಶ್ರೀಮನ್ಮಹಾ ರಥೋತ್ಸವವನ್ನು

ಎರಡನೇ ದಿನವಾದ ಮೇ 15   ಶುಕ್ರವಾರದಂದು ವನ್ಯಜೀವಿ ಸಂರಕ್ಷಣೆಯಲ್ಲಿ ಸೋಲಿಗರ ಸಾಂಪ್ರದಾಯಿಕ ಜ್ಞಾನದ ಬಗ್ಗೆ ಡಾ. ಸಿ. ಮಾದೇಗೌಡ, ತಾಂತ್ರಿಕ ಬಳಕೆ ಕುರಿತು ಪ್ರೊ. ನಾಗರಾಜ್ ಬಿ.ಸಿ. ಮತ್ತು ಪ್ರೊ. ಗುರುರಾಜ ಕೆ.ವಿ. ಹಾಗೂ ಲಂಗೂರ್‌ಗಳ ಸಾಮಾಜಿಕ ವ್ಯವಸ್ಥೆ ಬಗ್ಗೆ ಡಾ. ಚೇತನ್ ನಾಗ್ ಕೆ.ಎಸ್ ,ಆನೆಯ ಗಸ್ತಿನ ಬಗ್ಗೆ ಸಿದ್ಧಾರ್ಥ್ ಶೆಟ್ಟಿ ಹಾಗೂ ವನ್ಯಜೀವಿಗಳ ಮೇಲೆ ನಿಗಾ ಇಡಲು ಕೃತಕ ಬುದ್ಧಿಮತ್ತೆ (AI) ಬಳಕೆ ಕುರಿತು ಪ್ರೊ. ವಸಂತ ಕುಮಾರ್ ಅವರು ಮಾತನಾಡಲಿದ್ದಾರೆ.

ಅದೇ ದಿನ  ಸಂಜೆ 4:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಅಧ್ಯಕ್ಷತೆ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಹಿರಿಯ ಪ್ರಾಧ್ಯಾಪಕ ಪ್ರೊ. ಡೇವಿಡ್ ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕುವೆಂಪುವಿವಿ ವಿಜ್ಞಾನ ನಿಕಾಯದ ಡೀನ್ ಪ್ರೊ. ರಾಜಾ ನಾಯ್ಕ್, ಕುಲಸಚಿವ ಹೇಮಂತ್ ಎನ್., ಭದ್ರಾ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಪುಲ್ಕಿತ್ ಮೀನಾ ಹಾಗೂ ಸಂಘಟನಾ ಕಾರ್ಯದರ್ಶಿ ಪ್ರೊ. ವಿಜಯಕುಮಾರ ಉಪಸ್ಥಿತರಿರುವರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments