ಶಿವಮೊಗ್ಗ,ಮೇ.13 ; ಸುಳ್ಳು ವಂಶವೃಕ್ಷ ಸೃಷ್ಟಿಸಿ, ನಕಲಿ ದಾಖಲೆ ನೀಡಿ ನಿವೇಶನ ಕಬಳಿಸಿರುವ ತನ್ನ ಅತ್ತೆ ರತ್ನಾಕುಮಾರಿ ಎಂಬುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೀತಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿಯ ನಗರಸಭಾ ವ್ಯಾಪ್ತಿಯ ವಾರ್ಡ್ ನಂ.22 ರಲ್ಲಿನ ಆನೆಕೊಪ್ಪ ಬಡಾವಣೆಯಲ್ಲಿರುವ ಪಿಐಡಿ ನಂ.22-5-579-176 ಎ ಸ್ವತ್ತಿನ ನಿವೇಶನ ಸಂಖ್ಯೆ 53 ರ ಖಾಲಿ ನಿವೇಶನವು ನಮ್ಮ ತಾತ ಓಬಯ್ಯನವರಿಗೆ ಸೇರಿದಾಗಿದೆ. ಅವರು ಎಂ.ಪಿ.ಎಂ.ಕಾರ್ಖಾನೆಯಲ್ಲಿದ್ದಾಗ ಎಂಪಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ ನೀಡಿದ ನಿವೇಶ ಇದಾಗಿದ್ದು ನನ್ನ ಅಜ್ಜ 1999 ರಲ್ಲಿಯೇ ತೀರಿಕೊಂಡಿದ್ದರು. ಆ ಆಸ್ತಿ ಕಾನೂನಿನ ಪ್ರಕಾರ ನನ್ನ ತಂತೆ ಜಾನ್ ಅವರಿಗೆ ಬರಬೇಕಿತ್ತು. ಆದರೆ ನನ್ನ ತಂದೆ ಕೂಡ 2022 ರಲ್ಲಿ ತೀರಿಕೊಂಡರು. ಆಗ ನಾವು ಬೆಂಗಳೂರಿನಲ್ಲಿದ್ದೆವು ಎಂದರು.
ನಂತರ ನಮ್ಮ ಆಸ್ತಿ ಕುರಿತು ವಿಚಾರಿಸಲು ಬಂದಾಗ, ನನ್ನ ಅತ್ತೆ (ನನ್ನ ತಂದೆಯ ಅಕ್ಕ) ರತ್ನಕುಮಾರಿ ಎಂಬುವವರು ನಮ್ಮ ವಂಶವೃಕ್ಷವನ್ನೇ ಸುಳ್ಳು ನೀಡಿ, ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಅವರ ಹೆಸರಿಗೆ ಪೌತಿ ಖಾತೆಯನ್ನು ಮಾಡಿಸಿಕೊಂಡಿರುತ್ತಾರೆ. ಮೋಸ ಮಾಡುವ ಉದ್ಧೇಶದಿಂದಲೇ ವಂಶವೃಕ್ಷ ಸೇರಿದಂತೆ ಇತರೆ ಪ್ರಮಾಣಪತ್ರಗಳನ್ನು ನಗರ ಸಭೆಗೆ ನೀಡಿದ್ದಾರೆ.
ನಾನು ನನ್ನ ಅಣ್ಣ ಜೈ ಸೈನ್ ಜೀವಂತವಾಗಿದ್ದರೂ ತಪ್ಪು ಮಾಹಿತಿ ನೀಡಿ ಒಟ್ಟು ಒಂಭತ್ತು ಜನರಿದ್ದ ನಮ್ಮ ಕುಟುಂಬದಲ್ಲಿ 5 ಜನರ ಹೆಸರನ್ನು ಬಿಟ್ಟು ವಂಶವೃಕ್ಷ ನೀಡಿದ್ದಾರೆ. ಆದ್ದರಿಂದ ರತ್ನಕುಮಾರಿಯವರ ವಿರುದ್ಧ ಭದ್ರಾವತಿ ಹಳೆ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್.ಕೂಡ ದಾಖಲಿಸಿದ್ದೇವೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಯೂಟ ತಯಾರಿಕರ ಸಂಘದ ಜಿಲ್ಲಾಧ್ಯಕ್ಷೆ ಹನುಮಕ್ಕ ಮತ್ತು ಕೆ.ಆರ್.ಎಸ್.ಪಕ್ಷದ ತಾಲೂಕು ಅಧ್ಯಕ್ಷ ತೀರ್ಥೇಶ್ ಅವರು ಬೆಂಬಲ ನೀಡಿ, ಈ ಹೆಣ್ಣು ಮಗಳು ನೀತಿಗೆ ಅನ್ಯಾಯವಾಗಿದೆ.
ಭದ್ರಾವತಿಯಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ಆಸ್ತಿಯನ್ನು ಕಬಳಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥಹ ಪ್ರಕರಣಗಳಲ್ಲಿ ಇದೂ ಕೂಡ ಒಂದು. ನಗರ ಸಭೆ ಮತ್ತು ಕಂದಾಯ ಅಧಿಕಾರಿಗಳು ಸೇರಿದಂತೆ ಹಲವು ಸುಳ್ಳು ಪ್ರಮಾಣ ಪತ್ರಗಳನ್ನು ಕರ್ತವ್ಯ ಲೋಪ ಎಸಗಿದ್ದಾರೆ. ಈ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು ಮತ್ತು ಸಂತ್ರಸ್ತೆ ನೀತಿಗೆ ನ್ಯಾಯ ಸಿಗಬೇಕು. ಅಲ್ಲದೆ ತಪ್ಪು ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
