ಶಿವಮೊಗ್ಗ,ಮೇ 14: ಕೇಂದ್ರ ಸರ್ಕಾರದ ‘ಜ್ಞಾನ ಭಾರತಂ ಮಿಷನ್’ ಯೋಜನೆಯಡಿ ರಾಷ್ಟ್ರದಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು ಮತ್ತು ದಾಖಲೆಗಳನ್ನು ಇಂದಿನ ತಂತ್ರಜ್ಞಾನದ ಮೂಲಕ ಸಂರಕ್ಷಿಣೆ ಹಾಗೂ ಡಿಜಿಟಲೀಕರಣ ಮಾಡುವ ಯೋಜನೆ ಹಮ್ಮಿಕೊಂಡಿದ್ದು ಈ ಯೋಜನೆಯ ಭಾಗವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ತಾಳೆಗರಿ ಹಸ್ತಪ್ರತಿಗಳ ಗಣತಿ ಮತ್ತು ಸಮೀಕ್ಷೆ ಕಾರ್ಯವು ಪ್ರಸ್ತುತ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಅವರುತಿಳಿಸಿದ್ದಾರೆ.
ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಹಸ್ತಪ್ರತಿಗಳನ್ನು ಸಮೀಕ್ಷೆ ಮಾಡಿ, ಡಿಜಿಟಲೀಕರಣದ ಮೂಲಕ ಭವಿಷ್ಯದ ಪೀಳಿಗೆಗಾಗಿ ಶಾಶ್ವತವಾಗಿ ಉಳಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.
ಗಮನಿಸಿ:ಮೇ.17 ರ ಮಧ್ಯರಾತ್ರಿಯಿಂದ ಬೇಸಿಗೆ ಹಂಗಾಮಿನ ನೀರು ಬಂದ್
ರಾಷ್ಟ್ರೀಯ ಭಂಡಾರ: ಸಂಗ್ರಹಿಸಲಾದ ಹಸ್ತಪ್ರತಿಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಮೊಬೈಲ್ ಅಪ್ಲಿಕೇಶನ್ ಮೂಲಕ ‘ಹಸ್ತಪ್ರತಿಗಳ ರಾಷ್ಟ್ರೀಯ ಭಂಡಾರ‘ಕ್ಕೆ(ನ್ಯಾಷನಲ್ ರೆಸ್ಪಾನ್ಸಿಬಿಲಿಟಿ) ಅಪ್‌ಲೋಡ್ ಮಾಡಲಾಗುತ್ತದೆ. ಇದರಿಂದ ಜಗತ್ತಿನಾದ್ಯಂತ ಈ ಜ್ಞಾನವನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು, ಸಂಘ–ಸಂಸ್ಥೆಗಳು, ಮಠ–ಮಂದಿರಗಳು ಮತ್ತು ದೇವಾಲಯಗಳಲ್ಲಿ ಹಸ್ತಪ್ರತಿಗಳು ಲಭ್ಯವಿದ್ದಲ್ಲಿ ಅವುಗಳ ಮಾಹಿತಿಯನ್ನು ನೀಡಿ ಸಹಕರಿಸಲು ಕೋರಲಾಗಿದೆ.
ಹಸ್ತಪ್ರತಿಗಳ ಬಗ್ಗೆ ಮಾಹಿತಿ ನೀಡಲು ಇಚ್ಛಿಸುವವರು ವಿದ್ಯಾನ್ ಮಂಜುನಾಥ್, ಸಮನ್ವಯಾಧಿಕಾರಿ ಮೊ.ಸಂ. 9743250050 ಕುಮಾರ್ ಹೆಚ್.ಸಿ., ಸಹಾಯಕ ನಿರ್ದೇಶಕರು, ರಾಜ್ಯ ಪುರಾತತ್ವ ಇಲಾಖೆ 8105013149 ಇವರನ್ನು ಸಂಪರ್ಕಿಸಬಹುದು.
ಪರಂಪರೆಯ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕೆಂದು ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಪತ್ರಿಕಾ ಕೋರಿದ್ದಾರೆ.
