Homeಜಿಲ್ಲೆಅಯ್ಯೋಯ್ಯೋ ಬೇಡ್ವೇ ಬೇಡ ಅಣುಸ್ಥಾವ್ರ ಯೋಜ್ನೆ....... ಏಸೂರು ಕೊಟ್ರೂ ಬೇಸೂರು ಕೊಡೆವು!

ಅಯ್ಯೋಯ್ಯೋ ಬೇಡ್ವೇ ಬೇಡ ಅಣುಸ್ಥಾವ್ರ ಯೋಜ್ನೆ……. ಏಸೂರು ಕೊಟ್ರೂ ಬೇಸೂರು ಕೊಡೆವು!

Spread the love

ಬೇಸರೂ ಅಣುಸ್ಥಾವರ ಯೋಜನೆ ವಿರುದ್ದ ಭುಗಿಲೆದ್ದ ಜನಾಕ್ರೋಶಪಾದಯಾತ್ರೆ

ಶಿವಮೊಗ್ಗ ಟೆಲೆಕ್ಸ್, ಮೇ.20

ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ( ಎನ್. ಪಿ ಸಿ) ಸ್ಥಾಪಿಸಲುದ್ದೇಶಿಸಿರುವ ಅಣುವಿದ್ಯುತ್ ಸ್ಥಾವರ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗತೊಡಗಿದ್ದು, ಇಂದು  ಬೇಸೂರು, ತುಮರಿ, ಬ್ಯಾಕೋಡು, ಹೆಗ್ಗೂಡು ಸೇರಿದಂತೆ ಭಾಗದ ನೂರಾರು ಗ್ರಾಮಸ್ಥರು ಪ್ರತಿಭಟನಾ ಪಾದಯಾತ್ರೆ ನಡೆಸಿದರು.

ಬೆಂಗಳೂರಿಗೆ ನೀರು ಸಾಗಿಸುವ  ಶರಾವತಿ ಪಂಪ್ ಸ್ಟೋರ್  ಜಲಯೋಜನೆಯ ಆತಂಕ ಇನ್ನೂ ಸಾಗರ ತಾಲ್ಲೂಕಿನ ಜನರನ್ನು ಕಾಡುತ್ತಿರುವಾಗಲೆ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ಕ್ರಮದ ವಿರುದ್ದ ಜನಾಕ್ರೋಶ ಭುಗಿಲೆದ್ದಿದೆ.

ಬುಧವಾರ ಬೆಳಗ್ಗೆ ಬೇಸೂರಿನ ಬಸವಣ್ಣ ದೇವಸ್ತಾನದಿಂದ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನಾ ಪಾದಯಾತ್ರೆ ಆರಂಭವಾಗಿದ್ದು, ಮೂಲಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮತ್ತು ಕೂಡಲಿ ಮಠದ ಸಿದ್ದವೀರಸ್ವಾಮೀಜಿ ಅವರು  ಚಾಲನೆ ನೀಡಿದರು.

ಮೂಲಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ  ಈಗ ಸಂಕಷ್ಟದ ಕಾಲ. ಇಂತಹ ಸಂದರ್ಭದಲ್ಲಿ ಮಲೆನಾಡಿನ ಜನ ಯಾವುದೇ ಪಕ್ಷ, ಪಂಗಡವಿಲ್ಲದೆ ಹೋರಾಡಬೇಕಿದ. ಮೂಲಕನಮ್ಮ ಬದುಕಿನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಪಾದಯಾತ್ರೆಯಲ್ಲಿ ಪಾಲ್ಗೊಂಡ ಮಾಜಿ ಸ್ವಾಮಿರಾವ್ ಅವರು ಎಲ್ಲಾ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ನೆಲದ ಸಂಕಷ್ಟ ಬಗ್ಗೆ ಧ್ವನಿ ಎತ್ತಬೇಕು. ನಾವು ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳು ಮೇಲ್ಮಟ್ಟದಲ್ಲಿ ಜನವಿರೋಧಿ ಯೋಜನೆಗಳನ್ನು ರೂಪಿಸಿ ನಮ್ಮ ಮೇಲೆ ಹೇರುವ ಕೆಲಸ ಮಾಡುತ್ತಾರೆ. ಇದರ ವಿರುದ್ದ ಪಕ್ಷಾತೀತವಾಗಿ ಹೋರಾಡಬೇಕು. ಈಗಾಗಲೆ ಶರಾವತಿ ಸೇರಿದಂತೆ ಅನೇಕ ಜಲ ಯೋಜನೆಗಳಿಂದ ಮಲೆನಾಡು ಜನ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬೇಸೂರು ಅಣುವಿದ್ಯುತ್ ಯೋಜನೆ ಜಾರಿಗೆ ಅವಕಾಶ ಕೊಡದೆ ಹೋರಾಟ ಮಾಡಬೇಕಿದೆ ಎಂದರು.

ತಾಳಗುಪ್ಪ ಕೂಡಲಿ ಮಠದ ಸಿದ್ದವೀರ ಸ್ವಾಮೀಜಿ ಮಾತನಾಡಿ, ಪರಿಸರ ಸೂಕ್ಷ್ಮ ಪ್ರದೇಶವಾದ ಮಲೆನಾಡಿನಲ್ಲಿ ಅಣು ವಿದ್ಯುತ್ ಸ್ಥಾವರ ಯೋಜನೆ ಅನುಷ್ಠಾನಗೊಳಿಸುವುದು ಸೂಕ್ತವಲ್ಲ. ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಸ್ವಾಮಿರಾವ್ ಮಾತನಾಡಿ, ಯಾವುದೇ ಕಾರಣಕ್ಕೂ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಜನರ ಸಂಘಟಿತ ಹೋರಾಟದ ಮುಂದೆ ಯಾವುದೇ ಸರ್ಕಾರವೂ ನಿರ್ಧಾರ ಹೇರಲು ಸಾಧ್ಯವಿಲ್ಲ ಎಂದು ಹೇಳಿದರು.

ತಾಳಗುಪ್ಪ ಕೂಡಲಿ ಮಠದ ಸಿದ್ದವೀರ ಸ್ವಾಮೀಜಿ ಮಾತನಾಡಿ, ಪರಿಸರ ಸೂಕ್ಷ್ಮ ಪ್ರದೇಶವಾದ ಮಲೆನಾಡಿನಲ್ಲಿ ಅಣು ವಿದ್ಯುತ್ ಸ್ಥಾವರ ಯೋಜನೆ ಅನುಷ್ಠಾನಗೊಳಿಸುವುದು ಸೂಕ್ತವಲ್ಲ. ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಸ್ವಾಮಿರಾವ್ ಮಾತನಾಡಿ, ಯಾವುದೇ ಕಾರಣಕ್ಕೂ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಜನರ ಸಂಘಟಿತ ಹೋರಾಟದ ಮುಂದೆ ಯಾವುದೇ ಸರ್ಕಾರವೂ ನಿರ್ಧಾರ ಹೇರಲು ಸಾಧ್ಯವಿಲ್ಲ ಎಂದು ಹೇಳಿದರು.

ಉರಿಗಾಗಿ, ನೀರಿಗಾಗಿ, ಉಸಿರಿಗಾಗಿ ಹಾಗೂ ಬದುಕಿಗಾಗಿಎಂಬ ಘೋಷಣೆಯೊಂದಿಗೆ ಆರಂಭವಾದ ಪಾದಯಾತ್ರೆಯಲ್ಲಿ ಅಯ್ಯೋಯ್ಯೋ ಬೇಡ್ವೇ ಬೇಡ ಅಣುಸ್ಥಾವ್ರ ಯೋಜ್ನೆ……. ಏಸೂರು ಕೊಟ್ರೂ ಬೇಸೂರು ಕೊಡೆವು! ಎಂಬ ಹಾಡು ಮೊಳಗಿತು 

ಉರಿಗಾಗಿ, ನೀರಿಗಾಗಿ, ಉಸಿರಿಗಾಗಿ ಹಾಗೂ ಬದುಕಿಗಾಗಿಎಂಬ ಘೋಷಣೆಯೊಂದಿಗೆ ಆರಂಭವಾದ ಪಾದಯಾತ್ರೆ ಬೇಸೂರು, ಹುಲಿದೇವರಬನ, ಗೆಣಸಿನಕುಣಿ, ಆವಿನಹಳ್ಳಿ, ಕಾಗೇಹಳ್ಳ, ಹೊಸೂರು, ಚಿಪ್ಲಿಶಾಲೆ, ಇಕ್ಕೇರಿ ಸರ್ಕಲ್ ಹಾಗೂ ಸುಭಾಹಿತ್ ಬಿಲ್ಲಿಂಗ್ ಮಾರ್ಗವಾಗಿ ಸಾಗರ  ಉಪವಿಭಾಗಾಧಿಕಾರಿಗಳ ಕಚೇರಿ ತಲುಪಲಿದೆ.

ಜನಪರ ಹೋರಾಟಗಾರರಾದ ತೀ.ನಾ. ಶ್ರೀನಿವಾಸ, ಬೇಸೂರು ಅಣುವಿದ್ಯುತ್ ಯೋಜನೆ ವಿರೋಧಿ  ಹೋರಾಟ ಸಮಿತಿ ಅಧ್ಯಕ್ಷ ಇಂದೂಧರ ಗೌಡ ಬೇಸೂರು,  ತುಮರಿ ಜಿ.ಟಿ ಸತ್ಯನಾರಾಯಣ, ಸೀತಾರಾಮ್ಕುರುವರಿ, ದಿನೇಶ್ ಶಿರವಾಳ, ನಾಗೇಂದ್ರ ಸಾಗರ, ಬಂದಗದ್ದೆ ರಾಧಾಕೃಷ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಚರಕ ಸಂಸ್ಥೆಯ ಪ್ರಕಾಶ್ ಕುಗ್ವೆ ಸೇರಿದಂತೆ ಚರಕ ಸಂಸ್ಥೆ  ಪ್ರತಿನಿಧಿಗಳು, ರೈತರು, ಪರಿಸರಾಸಕ್ತರು ಹಾಗೂ ಗ್ರಾಮಸ್ಥರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ದಾರಿಯುದ್ದಕ್ಕೂ  ಸಾರ್ವಜನಿಕರು ವಿವಿಧ ಸ್ಥಳಗಳಲ್ಲಿ ಪಾದಯಾತ್ರೆಗೆ ಸೇರ್ಪಡೆಗೊಂಡು ಬೆಂಬಲ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments