ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.22
ಬೆಳೆ ನಷ್ಟದ ಸಂಬಂಧಿಸಿದಂತೆ ಹಾನಿಗೊಳಗಾದವರಿಗೆ ತುರ್ತು ಪರಿಹಾರವನ್ನು ಘೋಷಿಸಬೇಕೆಂದು ರೈತರ ಆಗ್ರಹಿಸಿ ಸಚಿವ ಮಧು ಬಂಗಾರಪ್ಪರಿಗೆ ಮನವಿ ಮಾಡಿದರು.
ಶುಕ್ರವಾರ ಶಿವಮೊಗ್ಗದ ಜಿಲ್ಲಾ ಪಂಚಾಯತ್ ಕಚೇರಿ ಎದುರು ರೈತ ಪ್ರತಿಭಟನೆ ನಡೆಸಿದರು.
ಭದ್ರಾವತಿ ಶಿವಮೊಗ್ಗ ತಾಲೂಕುಗಳು ಹಳೆ ಹೊನ್ನೂರು ಹೋಬಳಿಯಲ್ಲಿ ಮಳೆ ಹಾನಿಯಾಗಿದೆ. ಕಳೆದ ಆರುತಿಂಗಳಿಂದ ಸರ್ವೆಯಲ್ಲೇ ಲಕ್ಷಾಂತರ ಸರ್ವೇ ಅರ್ಜಿ ಬಾಕಿ ಇದೆ. ಇದರಿಂದ ನೊಂದಾಯಿತ ಸರ್ವೆಯರ್ಗಳು ಮುಷ್ಕರದಲ್ಲಿ ತೊಡಗಿದ್ದಾರೆ ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದರು.
ಶಿವಮೊಗ್ಗ ತೀರ್ಥಹಳ್ಳಿ ಹೊಸನಗರ ತಾಲೂಕುಗಳ ಭಾಗಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಆನೆಗಳು ಸಂಚಿರುವ ಜಾಗದಲ್ಲಿ ಫ್ರೆಂಚ್ ಗಳನ್ನು ಶೀಘ್ರವೇ ದುರಸ್ತಿ ಮಾಡಿ ಆನೆಗಳ ಒಪಟಳವನ್ನು ತಪ್ಪಿಸಿ ಎಂದು ಮನವಿ ಮಾಡಿದರು.
