Homeಜಿಲ್ಲೆಅಧ್ಯಾಪಕರು ಹೊಸತನಕ್ಕೆ ತೆರೆದುಕೊಳ್ಳಬೇಕು: ಪ್ರೊ.ಕೇಶವ.ಹೆಚ್

ಅಧ್ಯಾಪಕರು ಹೊಸತನಕ್ಕೆ ತೆರೆದುಕೊಳ್ಳಬೇಕು: ಪ್ರೊ.ಕೇಶವ.ಹೆಚ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.1

ಕಾಲ ಕಾಲಕ್ಕೆ ಬದಲಾಗುವ ಪಠ್ಯಕ್ರಮಗಳಿಗೆ ಹೊಂದಿಕೊಂಡು ಅಧ್ಯಾಪಕರು ಹೊಸತನಕ್ಕೆ ತೆರೆದುಕೊಳ್ಳಬೇಕು ಎಂದು ಜಂಟಿ ನಿರ್ದೇಶಕ ಪ್ರೊ.ಕೇಶವ.ಹೆಚ್ ಹೇಳಿದರು.

ಅವರು ಶನಿವಾರ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ `ಆದಾಯ ತೆರಿಗೆ ಕಾಯ್ದೆ-2025: ಕಾನೂನು ಮತ್ತು ಅನುಷ್ಠಾನ (Income Tax Act, 2025 – Law & Practice)’ ವಿಷಯದ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹಳೆ ಪಠ್ಯಗಳನ್ನೆ ಬೋಧಿಸುತ್ತ ಕೂರದೆ ಅಧ್ಯಾಪಕರು ನಿರಂತರವಾಗಿ ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕು. ವಾಣಿಜ್ಯ ಶಾಸ್ತ್ರದ ಅಧ್ಯಾಪಕರು ವಿದ್ಯಾರ್ಥಿಗಳಿಗೆ ತಮ್ಮ ಪಕ್ಕದಲ್ಲೆ ಕೂರಿಸಿಕೊಂಡು ಕಲಿಸಿದರೆ ವಿದ್ಯಾರ್ಥಿಗಳು ಉದ್ಯೋಗ ಪಡಿಯಲು ಸಹಾಯವಾಗಲಿದ್ದು, ಕಾಲೇಜಿನಲ್ಲೆ ತಮ್ಮ ಆದಾಯ ತೆರಿಗೆಯನ್ನೆ ದಾಖಲಿಸುತ್ತ, ಕಲಿಸುತ್ತ ಹೊಸತನಕ್ಕೆ ತೆರೆದುಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ಗಮನಿಸಿ: ನಾಳೆ ಸಿವಿಲ್ ಪೊಲೀಸ್ ಪರೀಕ್ಷೆ: ಜಿಲ್ಲೆಯ 28 ಕೇಂದ್ರಗಳಲ್ಲಿ ಪೊಲೀಸ್‌ರಿಂದ ಏನೆಲ್ಲಾ ಸಿದ್ದತೆ? ಇಲ್ಲಿದೆ ಮಾಹಿತಿ

ಪ್ರೊ.ಅವಿನಾಶ್.ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಠ್ಯಕ್ರಮಕ್ಕೆ ಸಂಬಂಧಿಸಿದ ನಮ್ಮ ಮೌನ ಕೆಲವೊಮ್ಮೆ ಅಪರಾಧವಾಗುತ್ತದೆ. ಜವಾಬ್ದಾರಿಯುತ ಶಿಕ್ಷಕರಾಗಿ, ಪಠ್ಯಕ್ರಮದ ಕುರಿತು ನಮಗೆ ಯಾವುದೇ ಗೊಂದಲವಿರಕೂಡದು. ಎಲ್ಲಾ ಅಧ್ಯಾಪಕರು ವಿಚಾರ ವಿನಿಮಯದ ಮೂಲಕವಾಗಿ ಪಠ್ಯಕ್ರಮದಲ್ಲಿರುವ ಗೊಂದಲವನ್ನು ನಿವಾರಿಸಿಕೊಳ್ಳಬೇಕು. ಕೃತಕ ಬುದ್ದಿಮತ್ತೆ ಯುಗದಲ್ಲಿ ಶಿಕ್ಷಕರ ಪಾತ್ರ ಬದಲಾಗುತ್ತಿರುವುದರಿಂದ ಒಟ್ಟಿಗೆ ಸೇರಿ ಚರ್ಚೆ ಮಾಡಿ NEP ಅಡಿ ಪಠ್ಯಕ್ರಮವನ್ನು ವೇಗವಾಗಿ ಬದಲಾಯಿಸಬೇಕಾಗಿದೆ ಎಂದರು.

ಕಾರ್ಯಾಗಾರದಲ್ಲಿ ಆದಾಯ ತೆರಿಗೆ ಕಾಯ್ದೆ-2025ರ ಪ್ರಮುಖ ಅಂಶಗಳು, 1961ರ ಆದಾಯ ತೆರಿಗೆ ಕಾಯ್ದೆಯೊಂದಿಗೆ ಹೋಲಿಕೆ ಮಾಡಿದ ಪ್ರಮುಖ ಬದಲಾವಣೆಗಳು, ಸರಳೀಕೃತ ತೆರಿಗೆ ವಿಧಾನಗಳು, ತೆರಿಗೆ ನೀತಿಗಳು ಮತ್ತು ಅನುಸರಣೆ, ಪ್ರಾಯೋಗಿಕ ಸಮಸ್ಯೆಗಳು ಹಾಗೂ ಪ್ರಕರಣ ಆಧಾರಿತ ತೆರಿಗೆ ತಜ್ಞರೊಂದಿಗೆ ಸಂವಾದ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಿತು.

ಖ್ಯಾತ ಲೇಖಕ ಡಾ.ಬಿ.ಮರಿಯಪ್ಪ, ಶಿವಮೊಗ್ಗದ ಚಾರ್ಟರ್ಡ್ ಅಕೌಂಟೆಂಟ್ ಸಿ.ಎ.ಮಹೇಂದ್ರ ಗೌರವ ಅತಿಥಿಗಳಾಗಿ ಭಾಗವಹಿಸಿದರು. ಡಾ.ಕುಂದನ್ ಬಸವರಾಜ್ ಆಶಯ ನುಡಿಗಳನ್ನಾಡಿದರು. ಡಾ.ಸರಳ ಕೆ.ಎಸ್. ಡಾ.ಶೋಭಾರಾಣಿ, ಡಾ.ಪ್ರಸನ್ನ ಹೆಚ್.ಡಾ.ಲಕ್ಷ್ಮೀಶ್ ವೇದಿಕೆಯಲ್ಲಿ ಇದ್ದರು. ಡಾ.ಗಿರಿಧರ್ ಕೆ.ವಿ.ಸ್ವಾಗತಿಸಿ, ರೇವಣ ಸಿದ್ದೇಶ್ಬರ ಹಂಜಿ ಕಾರ್ಯಕ್ರಮ ನಿರೂಪಿಸಿ, ಮೇಘನ ಪ್ರಾರ್ಥಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments