Homeರಾಜ್ಯಪೌರ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಪತ್ರಕರ್ತರ ನಿಯೋಗ ಸಿಎಂಗೆ ಮನವಿ

ಪೌರ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಪತ್ರಕರ್ತರ ನಿಯೋಗ ಸಿಎಂಗೆ ಮನವಿ

Spread the love

ಬೆಂಗಳೂರು,ಸೆ.21: ರಾಜ್ಯದ ಪೌರಕಾರ್ಮಿಕರ  ಖಾಯಂಯಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಪೌರ ಕಾರ್ಮಿಕರಿಗಾಗಿ ಪತ್ರಕರ್ತರುಬಳಗದ  ಹಿರಿಯ ಪತ್ರಕರ್ತರಾದ ಸುಭಾಷ್ ಹೂಗಾರ್, ಧರಣೀಶ್  ಬೂಕನಕೆರೆ, ಎನ್ ರವಿಕುಮಾರ್ ಟೆಲೆಕ್ಸ್, ಮಾರುತಿ ಪಾವಗಡ, ಟಿ.ಗುರುರಾಜ್, ಮಹಾಂತೇಶ ಹಿರೇಮಠ, ಸೋಮಶೇಖರ್ ಕವಚೂರು ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಪೌರಾಡಳಿತ ಸಚಿವ ಹೆಚ್ ಸಿ ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ನಾಗರೀಕ ಸಮಾಜದ ಆರೋಗ್ಯ ಮತ್ತು ಅಭಿವೃದ್ಧಿಯಲ್ಲಿ ಪೌರ ಕಾರ್ಮಿಕರ (Sanitary workars)  ಶ್ರಮ ಅಪೂರ್ವವಾದದ್ದು.

ಸಮಾಜದ ಆರೋಗ್ಯ ರಕ್ಷಣೆಗಾಗಿ ತಮ್ಮ ಆರೋಗ್ಯವನ್ನು ಮುಡಿಪಾಗಿಟ್ಟು ಬದುಕುತ್ತಿರುವ ಪೌರಕಾರ್ಮಿಕರ ಸ್ವಚ್ಛತಾ ವಲಯ ಸರ್ಕಾರದ ಇತರೆ ಇಲಾಖೆಗಳ ಯಾವ ನೌಕರರಿಗೂ ಮಿಗಿಲಾದ ಸೇವೆಯನ್ನೇ ಮಾಡುತ್ತಿದೆ. ಆದರೆ ವಲಯವನ್ನು ಸರ್ಕಾರಗಳು  ಆದ್ಯತೆಯಿಂದ ಕಾಣದಿರುವುದು ವಿಪರ್ಯಾಸ.

  ನಾಗರೀಕ ಸಮಾಜ ಕೂಡ ಪೌರಕಾರ್ಮಿಕರನ್ನು  ಅಸ್ಪೃಶ್ಯರಂತೆ ಕಾಣುತ್ತಾ ಬಂದಿದೆ. ಇದು ಅತ್ಯಂತ ಅಮಾನವೀಯ ಸಂಗತಿ.

ನಮ್ಮೆಲ್ಲರ ಆರೋಗ್ಯವನ್ನು ಸದಾ ಕಾಯುತ್ತಿರುವ ಪೌರ ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಮತ್ತು  ಹಕ್ಕುಗಳನ್ನು ದಕ್ಕಿಸಿಕೊಡಲು ನಾಗರೀಕ ಸಮಾಜ  ಕರ್ತವ್ಯ ಪ್ರಜ್ಞೆಯಿಂದಲೂ, ಅಂತಃಕರಣದಿಂದಲೂ ಮುಂದಾಗಬೇಕಿದೆ. ಇದೊಂದು ಋಣ ಸಮರ್ಪಣೆ ಎಂದರೂ ತಪ್ಪಾಗಲಾರದು.

ಹಿನ್ನಲೆಯಲ್ಲಿ ಪತ್ರಕರ್ತರಾದ ನಾವುಗಳು ನಾಗರೀಕರ ಸಮಾಜದ ಬಹುಮುಖ್ಯ ಭಾಗವೇ ಅಗಿರುವ  ಪೌರ ಕಾರ್ಮಿಕರಿಗೆ ನ್ಯಾಯಯುತವಾಗಿ ಸಲ್ಲಬೇಕಾಗಿರುವ ಹಕ್ಕು ಮತ್ತು ಸವಲತ್ತುಗಳ ಈಡೇರಿಕೆಗಾಗಿ  ಹೊಣೆಗಾರಿಕೆಯಿಂದಲೂ ಮತ್ತು  ಮಾನವತೆಯಿಂದಲೂ ಕೆಳಕಂಡ ಬೇಡಿಕೆಗಳನ್ನು  ತಮ್ಮ ಮುಂದೆ ಮಂಡಿಸುತ್ತಿದ್ದೇವೆ.

ತಾವು ಸಹಾನುಭೂತಿಯಿಂದ ಬೇಡಿಕೆಗಳನ್ನು ಪರಿಗಣಿಗಣಿಸಿ  ಕಾಲಮಿತಿಯೊಳಗೆ ಈಡೇರಿಸಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ನಿಯೋಗವು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದಲ್ಲದೇ ಪೌರ ಕಾರ್ಮಿಕರ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಸಹ ಮುಖ್ಯಮಂತ್ರಿಯ ಮುಂದೆ ಇಟ್ಟಿದ್ದು, ಬೇಡಿಕೆಗಳು ಕೆಳಗಿನಂತಿವೆ.

ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ( ಮಹಾನಗರ ಪಾಲಿಕೆಗಳು ಸೇರಿದಂತೆನೇರ ಪಾವತಿ ಮತ್ತು  ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು  ತಕ್ಷಣವೇ ಖಾಯಂಗೊಳಿಸಬೇಕು.

ಪೌರ ಕಾರ್ಮಿಕರು ಮತ್ತು ಇತರೆ ಇಲಾಖೆಗಳ ಸರ್ಕಾರಿ ನೌಕರರ ನಡುವಿನ ತಾರತಮ್ಯವನ್ನು ನಿವಾರಿಸಿ. ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರೆಂದೆ ಘೋಷಿಸಬೇಕು.

ಪೌರ ಕಾರ್ಮಿಕರಿಗೆ ಪ್ರತ್ಯೇಕ ವೇತನ ಮಂಡಳಿ ರಚಿಸಿ, ಮೂಲವೇತನವನ್ನು ಹೆಚ್ಚಳ ಮಾಡಬೇಕು.

ಪೌರ ಕಾರ್ಮಿಕರ ಆರೋಗ್ಯ ಕ್ಷಮತೆಯನ್ನು ಕಾಪಾಡಲು  ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ  ಮತ್ತು ಚಿಕಿತ್ಸೆ ನೀಡಬೇಕು.

ನಗದು ರಹಿತ ಆರೋಗ್ಯ ಚಿಕಿತ್ಸೆಗೆ ಯೋಜನೆ ಜಾರಿಗೊಳಿಸಬೇಕು. ಕಸ ತುಂಬುವ (ಲೋಡರ್ಸ್ )  ಸಿಬ್ಬಂದಿಗಳು ಮತ್ತು ತ್ಯಾಜ್ಯ  ವಿಲೇವಾರಿ  ವಾಹನ ಚಾಲಕರು, ಸಹಾಯಕರು, ಆಪರೇಟರ್ ಗಳನ್ನು ಹಾಗೂ ಒಳಚರಂಡಿ ಸ್ವಚ್ಚತಾ  ಕಾರ್ಮಿಕರು ಇವರುಗಳನ್ನು ಪೌರ ಕಾರ್ಮಿಕರೆಂದೇ ಪರಿಗಣಿಸಿ  ಅವರನ್ನು ಖಾಯಂ ಗೊಳಿಸಬೇಕು.

ಪೌರ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ರೂಪಕ ಅನುದಾನವನ್ನು ಮೀಸಲಿರಿಸಬೇಕು.

ಪೌರ ಕಾರ್ಮಿಕರು ಸೇವಾ ಅವಧಿಯಲ್ಲಿ ಸಾವು ಕಂಡರೆ ಅವರ ಅಂತ್ಯ ಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಬೇಕು.

ತಕ್ಷಣವೇ ರಾಜ್ಯದಲ್ಲಿನ ಪೌರಕಾರ್ಮಿಕರ ಸಾಮಾಜಿಕಆರ್ಥಿಕ ಸ್ಥಿತಿಗತಿಗಳ ಅಧ್ಯಯನಕ್ಕೆ ಸಮಿತಿಯೊಂದನ್ನು ರಚಿಸಿ ,3 ತಿಂಗಳ ಕಾಲಮಿತಿಯೊಳಗೆ ವರದಿ ಪಡೆದು. ಅದನ್ನು  ಜಾರಿಗೊಳಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆಗಳನ್ನು ಇಟ್ಟಿದ್ದಾರೆ.

ಹಿರಿಯ ಪತ್ರಕರ್ತರುಗಳಾದ ಸುಭಾಷ್ ಹೂಗಾರ್ , ಧರಣೀಶ್ ಬೂಕನಕೆರೆ, ಶಿವಾನಂದ ತಗಡೂರು, ಎನ್.ರವಿಕುಮಾರ್ ಟೆಲೆಕ್ಸ್ , ರುದ್ರಪ್ಪ ಸಿ, ಮೂರ್ತಿ ಜಿ ಆರ್, ಡಾ.ವಿಜಯಾ, ಯಶೋಧ, ಚೀ .ಉಮಾಶಂಕರ್ ಲಕ್ಷ್ಮೀಪುರ , ಜಾನ್ ಮಥಾಯಿಸ್ , ಶಾಂತಲಾ ಧರ್ಮರಾಜ್ , ಶ್ಯಾಮ್ ಹೆಬ್ಬಾರ್ ಎಸ್, ಮೀನಾ ಮೈಸೂರು, ಟಿ ಎನ್ ಸೀತಾರಾಮ್, ಮಂಜುನಾಥ್ ತುರುವನೂರು, ಚೀ ರಾಜೀವ್, ಆರ್ ಎಸ್ ಹಾಲಸ್ವಾಮಿ, ದೇಶಾದ್ರಿ ಹೊಸಮನಿ, ಮಂಜುನಾಥ್ ಚಾಂದ್, ಎಸ್ ಆರ್ ವೆಂಕಟೇಶ್ ಪ್ರಸಾದ್, ಕೆ ಹೆಚ್ ಸಾವಿತ್ರಿ, ಸಿ ಆರ್ ಬೋಪಯ್ಯ ಇವರುಗಳು ಬೇಡಿಕೆ ಪತ್ರದಲ್ಲಿ ತಮ್ಮ ಸಹಿ ದಾಖಲಿಸಿ ಮುಖ್ಯಮಂತ್ರಿಗೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments