ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.10
75 ವಸಂತಗಳನ್ನು ಪೂರೈಸಿರುವ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ರಮೇಶ್ ಹಿರೇಜಂಬೂರು ಆಯ್ಕೆಯಾಗಿದ್ದಾರೆ.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಕಚೇರಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ರಮೇಶ್ ಹಿರೇಜಂಬೂರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಸದಸ್ಯರು ಹಾಗೂ ಉಪಾದ್ಯಕ್ಷರಾಗಿದ್ದ ದೊಡ್ಡ ಬೊಮ್ಮಯ್ಯ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ರಿಟರ್ನಿಂಗ್ ಅಧಿಕಾರಿ ರಶ್ಮಿ ಬಿ. ನೇಮಕವಾಗಿದ್ದರು. ಚುನಾವಣೆ ಪ್ರಕ್ರಿಯೆಯಗಳನ್ನು ರಶ್ಮಿಯವರು ನಡೆಸಿಕೊಟ್ಟರು.

ಅಧ್ಯಕ್ಷರಾದ ರಮೇಶ್ ಎಂ. ಪಾಳ್ಯ , ಆನಂದ್ ಪರಮೇಶ್ವರ ಬೈದನಮನೆ, ಧ್ಯಾನ್ ಪೂಣ್ಣಚ್ಚ, ಕೃಷ್ಣಕುಮಾರ್ ಪಿ ಎಸ್, ವಿನೋದ್ ಕುಮಾರ್ ಬಿ. ನಾಯಕ್ ,ಸೋಮಶೇಖರ್.ಕೆ.ಎಸ್.(ಸೋಮಣ್ಣ), ಎಂ.ಎಸ್.ರಾಜೇಂದ್ರ ಕುಮಾರ್, ಪರಮೇಶ್ ಕೆ.ವಿ, ಕಾರ್ಯದರ್ಶಿ ರಘು ಕಚೇರಿ ಸಿಬ್ಬಂದಿಗಳಾದ ಕೆಂಪರಾಜು, ಎಚ್.ಎಸ್.ಹೇಮಂತ್ ಗೌಡ ಬಿ.ಆರ್, ಅನಿತಾ ಕೆ ಮತ್ತಿತರರು ಉಪಸ್ಥಿತರಿದ್ದರು.
ಚುನಾವಣೆ ಬಳಿಕ ಉಪಾಧ್ಯಕ್ಷರಾಗಿ ಆಯ್ಕೆಯಾದ ರಮೇಶ್ ಹಿರೇಜಂಬೂರು ಅವರಿಗೆ ಅಧ್ಯಕ್ಷರಾದ ರಮೇಶ್ ಪಾಳ್ಯ ಹಾಗೂ ಇತರ ನಿರ್ದೇಶಕರು ಶುಭಾಶಯ ಕೋರಿದರು.
