ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜೂ.15
ಖ್ಯಾತ ಪತ್ರಕರ್ತ, ಸಾಹಿತಿ ದಿವಂಗತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ (84)ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಅವರ ಪುತ್ರಿ ಕವಿತಾ ಲಂಕೇಶ್ ಅವರ ನಿವಾಸದಲ್ಲಿ ವಾಸವಾಗಿದ್ದು, ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಪುತ್ರ ಇಂದ್ರಜಿತ್ ಲಂಕೇಶ್ ಹಾಗೂ ಕವಿತಾ ಲಂಕೇಶ್ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಗಮನಿಸಿ: ಸೀಸದಿಂದ ಮಕ್ಕಳ ಮೆದುಳಿಗೆ ಹಾನಿ: ಡಾ.ತುಪ್ಪಿಲ್ ವೆಂಕಟೇಶ್
ಇಂದಿರಾ ಲಂಕೇಶ್ ಅವರು ಶಿವಮೊಗ್ಗದಲ್ಲಿಯೂ ಕೂಡ ಹಲವು ವರ್ಷಗಳ ಕಾಲ ವಾಸವಾಗಿದ್ದನ್ನು ನಾವು ಸ್ಮರಿಸಿಕೊಳ್ಳಬಹುದಾಗಿದೆ. ಪಿ.ಲಂಕೇಶ್ ಅವರು ಕಷ್ಟಕಾಲದಲ್ಲಿ ಇಂದಿರಾ ಅವರು ಲಂಕೇಶ್ ಅವರ ಬೆನ್ನುಲುಬಾಗಿ ನಿಂತಿದ್ದರು.
ಲಂಕೇಶ್ ಅವರ ನಿಧನದ ನಂತರವು ಪತ್ರಿಕೆ ಮುನ್ನೆಡುಸುವಲ್ಲಿ ಪ್ರಕಾಶನದ ಜವಾಬ್ದಾರಿಯನ್ನ ಹೊತ್ತಿದ್ದರು. ಸಾಹಿತ್ಯ ಮತ್ತು ಪತ್ರಿಕೋದ್ಯಮ ವಲಯದ ಜೊತೆ ಉತ್ತಮ ಒಡನಾಟವನ್ನು ಹೊಂದಿದ್ದರು. ಕೆಲವು ವರ್ಷಗಳ ಹಿಂದೆ ಇಂದಿರಾ ಅವರು ಹುಳಿಮಾವು ಮತ್ತು ನಾನು ಎಂಬ ಆತ್ಮಕಥನವನ್ನು ಕೂಡ ಬರೆದಿದ್ದರು. ತುಂಬಾ ಸರಳ ಸಜ್ಜನಿಕೆಯಾದ ಇಂದಿರಾ ಅವರ ಸಾವು ಕನ್ನಡ ಸಾಹಿತ್ಯ ಲೋಕಕ್ಕೆ ನಷ್ಟ ತಂದಿದೆ.
ಇಂದಿರಾ ಲಂಕೇಶ್ ಅವರ ಅಂತ್ಯ ಕ್ರಿಯೆಯು ಮಂಗಳವಾರ ಬೆಳಿಗ್ಗೆ ಚಾಮರಾಜಪೇಟೆಯಲ್ಲಿರುವ ಸ್ಮಶಾನದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
