Homeಜಿಲ್ಲೆನೌಕರರನ್ನು ಖಾಯಂ ಮಾಡಿದ್ದರೆ ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ: ನಾಗೇಂದ್ರ ಹೆದ್ದೂರು ಎಚ್ಚರಿಕೆ

ನೌಕರರನ್ನು ಖಾಯಂ ಮಾಡಿದ್ದರೆ ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ: ನಾಗೇಂದ್ರ ಹೆದ್ದೂರು ಎಚ್ಚರಿಕೆ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.17

ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಮತ್ತು ದಿನಗೂಲಿ ನೌಕರರನ್ನು ಕೂಡಲೇ ಖಾಯಂ ಮಾಡಬೇಕು. ಇಲ್ಲದಿದ್ದರೆ ಸಂಸತ್ ಮತ್ತು ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕುತ್ತೇವೆ” ಎಂದು ಆಲ್ ಇಂಡಿಯಾ ಸ್ಟೇಟ್ ಗವರ್ನಮೆಂಟ್ ಕ್ಲಾಸ್ IV ಎಂಪ್ಲಾಯೀಸ್ ಫೆಡರೇಶನ್‌ನ ಆಲ್ ಇಂಡಿಯಾ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯದ ನಾಯಕ ಡಾ.ಹೆಚ್.ಎಸ್. ನಾಗೇಂದ್ರ ಹೆದ್ದೂರು ಕೇಂದ್ರ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ “ಗ್ರ‍್ಯಾಂಡ್ ಪ್ರೊಟೆಸ್ಟ್ ರ‍್ಯಾಲಿ”ಯನ್ನು ಉದ್ದೇಶಿಸಿ ಅವರು ಮಾತನಾಡಿ, “ಇದು ಕೇವಲ ದೆಹಲಿಯ ಹೋರಾಟವಲ್ಲ. 26 ರಾಜ್ಯಗಳಿಂದ ನೌಕರರು ಬಂದಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿರುವ ಪ್ರತಿಭಟನೆ ಇದು. ಸರ್ಕಾರ ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು” ಎಂದು ಅವರು ಹೇಳಿದರು.

ನಮ್ಮ 11 ಬೇಡಿಕೆಗಳಲ್ಲಿ ಅಂಗನವಾಡಿ, ಬಿಸಿಯೂಟ, ದಿನಗೂಲಿ ನೌಕರರ ಖಾಯಮಾತಿ ಹಾಗೂ ಹಳೆ ಪಿಂಚಣಿ ಯೋಜನೆ (OPS) ಜಾರಿ ಪ್ರಮುಖವಾದದ್ದು, ಈ ಬೇಡಿಕೆ ಈಡೇರದಿದ್ದರೆ ಮುಂದಿನ ಹೋರಾಟ ರಾಷ್ಟ್ರಪತಿ ಭವನದತ್ತ” ಎಂದು ಹೆದ್ದೂರು ಗುಡುಗಿದರು.

ಹೊರಗುತ್ತಿಗೆದಾರರು, ಕಾಂಟ್ರಾಕ್ಟ್ ಬೇಸಿಕ್, ಗ್ರಾಮ ಸಹಾಯಕರು, ವಿ.ಎ. ಸಹಾಯಕರು, ಕ್ಷೇಮಾಭಿವೃದ್ಧಿಯವರು, ಎಲ್.ಎಸ್, ನೀರುಗಂಟಿಗಳು ಹಾಗೂ ಹೊರಗುತ್ತಿಗೆಯಲ್ಲಿರುವ ಡಾಕ್ಟರ್‌ಗಳು ಸೇರಿದಂತೆ ಎಲ್ಲಾ ಇಲಾಖೆಯ ದಿನಗೂಲಿ ನೌಕರರಿಗೆ ಸರ್ಕಾರದಿಂದ ಖಾಯಂ ಮಾಡಬೇಕು ಮತ್ತು ಸರ್ಕಾರದ ಸವಲತ್ತು ಕೋಡಬೇಕು. ಇಲ್ಲದಿದ್ದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮಿರದವರೆಗೆ 26 ರಾಜ್ಯಗಳಿಂದ ರಾಷ್ಟ್ರ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಹಳೆ ಪಿಂಚಣಿ, ಗುತ್ತಿಗೆ ಪದ್ಧತಿ ರದ್ದತಿ ಪ್ರಮುಖವಾಗಿತ್ತು. ಬೇಡಿಕೆ ಈಡೇರದಿದ್ದರೆ ದೇಶವ್ಯಾಪಿ ಮುಷ್ಕರ ಅನಿವಾರ್ಯ ಎಂದು ಫೆಡರೇಶನ್ ತಿಳಿಸಿದೆ.

ಈ ಪ್ರತಿಭಟನೆಯಲ್ಲಿ ಫೆಡರೇಶನ್‌ನ ರಾಷ್ಟ್ರೀಯ ನಾಯಕರಾದ ಗಣೇಶ್, ನಟರಾಜ್, ಶರ್ಮ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ಲಕ್ಷಾಂತರ ನೌಕರರು ಕೆಂಪು ಧ್ವಜಗಳೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments