Homeಜಿಲ್ಲೆಮಳೆ ಕೊರತೆ: ರೈತರ ಹಿತಕ್ಕಾಗಿ ದಿಶಾ ಸಭೆ ಚರ್ಚೆ- ಪರಿಹಾರ ಕ್ರಮಕ್ಕೆ ಸಂಸದರ ಸೂಚನೆ

ಮಳೆ ಕೊರತೆ: ರೈತರ ಹಿತಕ್ಕಾಗಿ ದಿಶಾ ಸಭೆ ಚರ್ಚೆ- ಪರಿಹಾರ ಕ್ರಮಕ್ಕೆ ಸಂಸದರ ಸೂಚನೆ

Spread the love

ಮಳೆ ಕೊರತೆ: ರೈತರ ಹಿತಕ್ಕಾಗಿ ದಿಶಾ ಸಭೆ ಚರ್ಚೆ- ಪರಿಹಾರ ಕ್ರಮಕ್ಕೆ ಸಂಸದರ ಸೂಚನೆ

ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಕೊರತೆ ಆಗಿರುವುದರಿಂದ ಏತ ನೀರಾವರಿಗಳ ಮೂಲಕ ನೀರು ಎತ್ತಲು ಬೃಹತ್ ನೀರಾವರಿ ಇಲಾಖೆ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಅವರು ತಿಳಿಸಿದರು.

ಜಿಲ್ಲೆಯ ಪ್ರಕೃತಿ ವಿಕೋಪ ಹಾಗೂ ರೈತರ ಪ್ರಮುಖ ಸಮಸ್ಯೆಗಳ ಕುರಿತು ದಿಶಾ ಸಮಿತಿ ಸಭೆಯಲ್ಲಿ ಅಧಿಕಾರಿಗಳ ತುರ್ತು ಪರಾಮರ್ಶನಾ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಕಳೆದ ಏಪ್ರಿಲ್. ಮೇ ತಿಂಗಳಲ್ಲಿ ಸುರಿದ ಗಾಳಿ ಮಳೆಯಿಂದಾಗಿ ಶಿವಮೊಗ್ಗ ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು 600 ಮನೆಗಳು ಭಾಗಶಃ ಹಾನಿಯಾಗಿದ್ದರೆ, 200 ಮನೆ ಸಂಪೂರ್ಣವಾಗಿ ಹಾಳಾಗಿವೆ ಇದುವರೆಗೂ ಪರಿಹಾರ ಬಂದಿಲ್ಲ. 1000 ಹೆಕ್ಟೇರ್ ಅಡಿಕೆ ಬೆಳೆ ಹಾನಿಯಾಗಿದೆ ಎಂದು ವರದಿ ಸಲ್ಲಿಕೆಯಾಗಿದೆ. ಪ್ರಕೃತಿ ವಿಕೋಪ ನಿಯಮಾವಳಿಗಳ ಪ್ರಕಾರ ಪರಿಹಾರ ಬರುತ್ತದೆ. ಆದರೆ ಸರ್ಕಾರದ ವಿಶೇಷ ಪರಿಹಾರ ಬಂದಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ೨೫ಕ್ಕೂ ಹೆಚ್ಚು ಏತನೀರಾವರಿಗಳಿವೆ. ಮಳೆ ಪ್ರಮಾಣ ಕಡಿಮೆ ಯಾಗಿದ್ದು, ಮುಂದೆ ಮಳೆ ಆದ ಸಂದರ್ಭದಲ್ಲಿ ಏತನೀರಾವರಿಗಳ ಮೂಲ ಕೆರೆಗಳಿಗೆ ನೀರು ತುಂಬಿಸಲು ಬೃಹತ್ ನೀರಾವರಿ ಇಲಾಖೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಬಾರಿ ಮೊತ್ತದ ವಿದ್ಯುತ್ ಬಿಲ್ ಬಾಕಿ ಇರುವುದರಿಂದ ನೀರು ಎತ್ತಲು ವಿದ್ಯುತ್ ಲಭ್ಯವಾಗುವುದಿಲ್ಲ. ಆದ್ದರಿಂದ ಸರ್ಕಾರ ವಿದ್ಯುತ್ ಬಿಲ್ ಪಾವತಿಸಬೇಕು ಎಂದು ಮನವಿ ಮಾಡಿಕೊಂಡರು.

ಸಭೆಯಲ್ಲಿ ಅಕಾಲಿಕ ಮಳೆಯಿಂದ ಜಿಲ್ಲೆಯಾದ್ಯಂತ ಉಂಟಾಗಿರುವ ಹಾನಿ ಮತ್ತು ರೈತರ ಜ್ವಲಂತ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.

ರೈತರ ಹಿತರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಸಂಕಷ್ಟದಲ್ಲಿರುವ ಅನ್ನದಾತನಿಗೆ ತಕ್ಷಣವೇ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. 2024-25ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಅರ್ಹ ಅನ್ನದಾತರಿಗೆ ಶೀಘ್ರವಾಗಿ ನ್ಯಾಯ ಒದಗಿಸಲು ಕೈಗೊಂಡಿರುವ ಪ್ರಗತಿಯ ಪರಿಶೀಲನೆ. ಜಿಲ್ಲೆಯ ಪ್ರಮುಖ ನದಿಗಳ ಹರಿವು ಮತ್ತು ಜಲಾಶಯಗಳ ನೀರಿನ ಸಂಗ್ರಹದ ಸ್ಥಿತಿಗತಿ ಪರಿಶೀಲನೆ. ಜೊತೆಗೆ ಲಿಫ್ಟ್ ಇರಿಗೇಶನ್ ಪಂಪಿಂಗ್, ಮೋಟಾರುಗಳ ಸುಸ್ಥಿತಿ ಹಾಗೂ ವಿದ್ಯುತ್ ಬಿಲ್ ನಿರ್ವಹಣೆಗೆ ಕಟ್ಟುನಿಟ್ಟಿನ ಸೂಚನೆ. ಮಳೆಮಾಪನ ಕೇಂದ್ರಗಳ ಪುನಶ್ಚೇತನ: ಜಿಲ್ಲೆಯಲ್ಲಿ ಹಾಳಾಗಿರುವ ಮಳೆಮಾಪನ ಕೇಂದ್ರಗಳನ್ನು ತಕ್ಷಣವೇ ದುರಸ್ತಿಗೊಳಿಸಿ, ಹವಾಮಾನ ಮುನ್ಸೂಚನೆ ನಿಖರವಾಗಿ ಸಿಗುವಂತೆ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಲಾಯಿತು.

ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ರೈತಬಾಂಧವರಿಗೆ ಯಾವುದೇ ಕೊರತೆಯಾಗದಂತೆ ಅಗತ್ಯವಿರುವ ಮೇವು ಹಾಗೂ ರಾಸಾಯನಿಕ ಗೊಬ್ಬರಗಳ ದಾಸ್ತಾನು, ವಿತರಣೆ ಮತ್ತು ಉಳಿಕೆ ವಿವರಗಳ ಪರಿಶೀಲನೆ ನಡೆಸಿ ಜಿಲ್ಲೆಯ ರೈತರ ಮತ್ತು ಸಾರ್ವಜನಿಕರ ಹಿತ ಕಾಯುವಲ್ಲಿ ಯಾವುದೇ ರೀತಿಯ ವಿಳಂಬ ಧೋರಣೆಯನ್ನು ಸಹಿಸುವುದಿಲ್ಲ. ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿ ಪ್ರಸ್ತಾವನೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಿಲ್ಲೆಯಲ್ಲಿ ಬೆಳೆ ವಿಮೆಗೆ 38474 ರೈತರು ನೋಂದಣಿ . 2.57 ಕೋ. ಹಣ ಬಂದಿದೆ. ಕಟ್ಟಿರುವುದು 3.8 ಕೋ. ಬಂದಿದೆ. ಕಟ್ಟಿರುವ ದುಡ್ಡು ಕೂಡ ಬಂದಿಲ್ಲ. ಸರಾಸರಿ ತಿದ್ದುಪಡಿ ಮಾಡುವ ಬಗ್ಗೆ ಸಭೆ ಯಲ್ಲಿ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೇಮಂತ್ ಕುಮಾರ್ , ದಿಶಾ ಸಮಿತಿ ಸದಸ್ಯರುಗಳು ಉಪಸ್ತಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments