Homeಜಿಲ್ಲೆಶಿಮುಲ್ ರಾಜ್ಯಕ್ಕೆ ದೊಡ್ಡ ಆರ್ಥಿಕ ನೆರವು: ಆರ್.ಎಂ.ಮಂಜುನಾಥ್

ಶಿಮುಲ್ ರಾಜ್ಯಕ್ಕೆ ದೊಡ್ಡ ಆರ್ಥಿಕ ನೆರವು: ಆರ್.ಎಂ.ಮಂಜುನಾಥ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ29

ಶಿಮುಲ್ (ಶಿವಮೊಗ್ಗ , ಚಿತ್ರದುರ್ಗ, ದಾವಣಗೆರೆ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ನಿಯಮಿತ) ನಿಂದ ಪ್ರತಿನಿತ್ಯ 9.50ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ರಾಜ್ಯಕ್ಕೆ ದೊಡ್ಡ ಆರ್ಥಿಕ ನೆರವು ನೀಡಿದೆ. ಇದಕ್ಕೆ ಪೂರಕ ಸಹಕಾರ ನೀಡುತ್ತಿರುವ ಹಾಲು ಉತ್ಪಾದಕರಿಗೆ ವರ್ಷಕ್ಕೆ 30ರಿಂದ 40 ಸಾವಿರ ರೂ.ಬೋನಸ್ ನೀಡುವ ನನ್ನ ಕನಸು ನನಸಾಗಿದೆ ಎಂದು ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರೂ, ಶಿಮುಲ್‌ನ ನಿರ್ದೇಶಕರೂ ಆಗಿರುವ ಡಾ. ಆರ್.ಎಂ. ಮಂಜುನಾಥಗೌಡ ಹೇಳಿದರು.

ಕೇಂದ್ರ ಸಚಿವಾಲಯ ಸ್ಥಾಪನೆಯ 5 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನಲೆಯಲ್ಲಿ ನಡೆಯುತ್ತಿರುವ ಸಹಕಾರ ಸಪ್ತಾಹ ಆಚರಣೆಯ ಅಂಗವಾಗಿ ಸೋಮವಾರ ಶಿಮುಲ್‌ನಲ್ಲಿ ಏರ್ಪಡಿಸಲಾಗಿದ್ದ ಶಿವಮೊಗ್ಗ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಮತ್ತು ಹಾಲು ಪರೀಕ್ಷಕರುಗಳಿಗೆ ಹಾಗೂ ಕೃತಕ ಗರ್ಭಧಾರಣ ಕಾರ್ಯಕರ್ತ ರುಗಳಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸಹಕಾರಿ ತತ್ವ ಬೆಳೆಯಬೇಕಾದರೆ ರಾಜಕಾರಣ, ಜಾತಿ, ಲಿಂಗಬೇಧ ಈ ಮೂರನ್ನೂ ಬಿಟ್ಟರೆ ಸಹಕಾರ ಕ್ಷೇತ್ರದ ಉನ್ನತಿ ಸಾಧ್ಯ. ಸಹಕಾರಿ ಸಂಘಗಳಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯ ಅವಕಾಶ ಕೂಡ ಸಿಗುತ್ತದೆ. ಶುದ್ಧ ನೀರಿಗೆ ಗ್ಲಾಸ್ ಒಂದಕ್ಕೆ 100 ರೂ. ಕೊಡಲು ಜನರು ಸಿದ್ಧರಿದ್ದಾರೆ. ಪೆಟ್ರೋಲ್-ಡೀಸ ಲ್‌ಗೂ ಕೊಡುತ್ತಾರೆ. ಆದರೆ ಪೌಷ್ಠಿಕಾಂಶ ನೀಡುವ ಹಾಲಿಗೆ 2ರೂ. ಜಾಸ್ತಿ ಮಾಡಿದರೆ ಕೋಲಾಹಲ ಮಾಡುತ್ತಾರೆ. ರೈತರ ಅಭಿವೃದ್ಧಿಯಾಗಬೇಕಾದರೆ ಹಾಲಿನ ದರ ಹೆಚ್ಚಳ ಮಾಡಲೇಬೇಕು ಎಂದು ಹೇಳಿದರು.

ಗಮನಿಸಿ: ನಾನು ಯಾವತ್ತೂ ಅಧಿಕಾರಕ್ಕೆ ಅಂಟಿಕೊಂಡವನಲ್ಲ: ಮಧು ಬಂಗಾರಪ್ಪ

ಹೈನುಗಾರಿಕೆ ರೈತರಿಗೆ ವರದಾನವಾ ಗಿದ್ದು, ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಬೇಕು ಈ ಮೂಲಕ ರೈತರ ಆರ್ಥಿಕ ಸ್ಥಿತಿಯನ್ನು ಭದ್ರಗೊಳಿಸಬೇಕು. ಮತ್ತು ರೈತರು ಕೂಡ ಮಣ್ಣಿನ ಫಲವತ್ತತೆ ಉಳಿಸಬೇಕಾದರೆ ಕೊಟ್ಟಿಗೆ ಗೊಬ್ಬರವನ್ನೇ ಹೆಚ್ಚಾಗಿ ಬಳಸಬೇಕು. ರೈತರ ಹಾಲಿಗೆ ಹೆಚ್ಚಿನ ದರ ಲಭಿಸಿದಾಗ ಮಾತ್ರ ರೈತರು ಹೈನುಗಾರಿಕೆಗೆ ಮನಸ್ಸು ಮಾಡುತ್ತಾರೆ. ಶಿಮೂಲ್‌ನಲ್ಲಿಯೇ ಪ್ರತಿನಿತ್ಯ 9.50ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದು ಬಹಳ ದೊಡ್ಡ ಆರ್ಥಿಕ ನೆರವು ನೀಡಿದ ಹಾಗೆ ಆಗಿದೆ. ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗಿ ಅನೇಕ ಅಡಿಕೆ ತೋಟಗಳು ಮತ್ತು ಇತರ ಬೆಳೆಗಳು ನಷ್ಟವಾಗುತ್ತಿದೆ. ರಾಜ್ಯದಲ್ಲಿ ಕೆಎಂಎಫ್‌ಗೆ ಪ್ರತಿನಿತ್ಯ ಒಂದು ಕೋಟಿ ಲೀಟರ್ ಹಾಲು ಬರುತ್ತಿದೆ. ಇದರಲ್ಲಿ ಸಹಕಾರಿ ಸಂಘಗಳ ಪಾತ್ರ ದೊಡ್ಡದು. ಹಾಲು ಉತ್ಪಾದಕ ಸಂಘಟನೆಗಳು ರೈತರಿಗೆ ಹಲವಾರು ನೆರವನ್ನು ನೀಡುತ್ತದೆ ಎಂದರು.

ಶಿಮುಲ್ ಅಧ್ಯಕ್ಷ ವಿದ್ಯಾಧರ್ ಮಾತನಾಡಿ, ಪ್ರತಿನಿತ್ಯ 4.5ಲಕ್ಷ ಲೀಟರ್ ಹಾಲು ನಮ್ಮ ದಿನನಿತ್ಯದ ಬಳಕೆಗೆ ಸಾಕು. ಆದರೆ 9.5ಲಕ್ಷ ಹಾಲು ಬರುತ್ತಿದೆ. ಅದರಲ್ಲಿ 3.5 ಲಕ್ಷ ಲೀಟರ್ ಆರ್.ಎಂ. ಮಂಜು ನಾಥ್ ಗೌಡರು ಕೆಎಂಎಫ್ ನಿರ್ದೇಶಕ ರಾದ ಮೇಲೆ ಅವರ ಪ್ರಯತ್ನದಿಂದ ಹೊರ ಜಿಲ್ಲೆಗೆ ಹೋಗುತ್ತಿದೆ. ಉಳಿದ 2.5ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿಗೆ ಬಳಸಲಾಗುತ್ತಿದೆ. ಶಿಮುಲ್‌ನಿಂದ ಹಾಲು ಉತ್ಪಾದನಾ ಸಂಘದ ಕಟ್ಟಡಗಳಿಗೆ ಈಗ 9 ಲಕ್ಷದವರೆಗೆ ನೀಡುತ್ತಿದ್ದೇವೆ. ನಿವೃತ್ತರಾದಾಗ ಸದಸ್ಯರಿಗೆ 3ಲಕ್ಷ ರೂ.ಗಳನ್ನು ಕೊಡುತ್ತಿದ್ದೇವೆ. 40ಸಾವಿರ ರಬ್ಬರ್ ಮ್ಯಾಟ್‌ಗಳನ್ನು ನೀಡಿದ್ದೇವೆ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಆದರೂ ಕೆಲವು ರೈತರು ಒಂದು ದಿನದ ಸಂತೆ ಮಾಡಲು ಬಂದ ಖಾಸಗೀ ಸಂಸ್ಥೆಗಳಿಗೆ ಹಾಲನ್ನು ನೀಡುತ್ತಿದ್ದಾರೆ. ನಮ್ಮ ಸಹಕಾರಿಗಳಿಗೆ ಸಬ್ಸಿಡಿ, ಇನ್ಸುರೆನ್ಸ್, ವೈದ್ಯ ಕೀಯ ಸೌಲಭ್ಯ, ತರಬೇತಿ ಸೇರಿದಂತೆ ಅನೇಕ ಲಾಭಗಳಿವೆ. ರೈತರು ಶಿಮುಲ್ ಬಿಟ್ಟು ಬೇರೆ ಖಾಸಗಿಯವರಿಗೆ ಹಾಲು ಮಾರುವ ಮುನ್ನ ಯೋಚಿಸಬೇಕು ಎಂದರು.

ಮಾಜಿ ಅಧ್ಯಕ್ಷ ಕೆ.ಎಲ್.ಜಗದೀಶ್ವರ್, ಸಹಕಾರ ಸಂಘಗಳ ಉಪನಿಬಂಧಕರಾದ ನಾಗಭೂಷಣ ಸಿ.ಕಲ್ಮನೆ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಶಿಮುಲ್ ಉಪಾಧ್ಯಕ್ಷ ಚೇತನ್ ಎಸ್. ನಾಡಿಗರ, ಮಾಜಿ ಅಧ್ಯಕ್ಷರಾದ ಡಿ.ಆನಂದ್, ನಿರ್ದೇಶಕರಾದ ಎಸ್.ವೈ.ಪುಷ್ಪಾ, ಶಿಮುಲ್ ಎಂ.ಡಿ.ಡಾ.ಮಂಜೇಶ್, ಪಿ.ಆರ್., ಲೆಕ್ಕಪರಿಶೋಧನಾ ಉಪನಿರ್ದೇ ಶಕರಾದ ತೇಜೋಮೂರ್ತಿ ಆರ್., ಯಶವಂತ್‌ಕುಮಾರ್ ಹೆಚ್., ಅಮೃತೇ ಶ್ವರ್ ಇದ್ದರು. ಕಾರ್ಯದರ್ಶಿಗಳಿಗೆ ಮತ್ತು ಹಾಲು ಪರೀಕ್ಷಕರುಗಳಿಗೆ ಉತ್ತಮ ಗುಣಮಟ್ಟದ ಹಾಲು ಸಂರಕ್ಷಣೆ ಕುರಿತು ಶಿಮುಲ್ ಸಹಾಯಕ ವ್ಯವಸ್ಥಾಪಕರಾದ ಸ್ವೀಟಿ ಹಾಗೂ ರಾಸುಗಳಲ್ಲಿ ಕೃತಕ ಗರ್ಭಧಾರಣೆ ಕುರಿತು ಡಾ.ಸೂರಜ್ ಇವರು ತರಬೇತಿ ನೀಡಿದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments