Homeಜಿಲ್ಲೆRSS ನೋಂದಣಿಯನ್ನು ಪ್ರಶ್ನಿಸುವವರು "ಅಹಿಂದ" ನೋಂದಣಿಯನ್ನು ಪ್ರಶ್ನಿಸಲಿ

RSS ನೋಂದಣಿಯನ್ನು ಪ್ರಶ್ನಿಸುವವರು “ಅಹಿಂದ” ನೋಂದಣಿಯನ್ನು ಪ್ರಶ್ನಿಸಲಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.13

ಆರ್‌ಎಸ್‌ಎಸ್ ನೋಂದಣಿ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ ಸಿದ್ದರಾಮಯ್ಯನವರು ಅಹಿಂದ ಪ್ರವಾಸ ಕೈಗೊಂಡಿದ್ದಾರೆ. ಹಾಗಾದರೆ ಅಹಿಂದ ನೋಂದಣಿಯಾಗಿದೆಯೇ ಎಂದು ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಪ್ರಶ್ನಿಸಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಹಿಂದ ನಾಯಕನೆಂಬ ಬಿರುದನ್ನು ಸಹ ಪಡೆದಿದ್ದಾರೆ. ಹಾಗಾದರೆ ಅಹಿಂದ ನೊಂದಣಿ ಆಗಿದ್ದಿಯಾ. ಒಂದು ವೇಳೆ ಆಗಿದ್ದರೆ ಅದರ ಕಚೇರಿಯಲ್ಲಿದೆ? ಅದರ ಅಧ್ಯಕ್ಷ ಯಾರು? ಎಂದು ಕುಟುಕಿದರು.

ಗಮನಿಸಿ: ಕಾಂತರಾಜು ವರದಿ ತಿರಸ್ಕೃತರಿಂದ ಸಾಮಾಜಿಕ ಸಮೀಕ್ಷೆ ವರದಿ ಜಾರಿ ನಿರೀಕ್ಷಿಸಲು ಸಾಧ್ಯವೇ?: ರಘು ಕೌಟಿಲ್ಯ

ಸಾಮಾಜಿಕ ನ್ಯಾಯ, ಜಾತಿ ಸಮೀಕ್ಷೆ ಹಾಗೂ ಹಿಂದುಳಿದ ವರ್ಗಗಳ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಕೇವಲ ಮೀಸಲಾತಿ ವರದಿಯನ್ನು ಪಡೆದರೆ ಸಾಕಾಗುವುದಿಲ್ಲ. ಸಾಮಾಜಿಕ ಸ್ಥಿತಿಗತಿ ವರದಿಯನ್ನು ಅಧ್ಯಯನ ಮಾಡಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯ ಎಂದರು.

ಜಾತಿ ಗಣತಿಯನ್ನು ಕೇಂದ್ರ ಸರ್ಕಾರ ನಡೆಸಬೇಕು. ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ ಸಮೀಕ್ಷೆ ನಡೆಸಬೇಕು. ಯಾವುದೇ ಸಮುದಾಯಕ್ಕೆ ಮೀಸಲಾತಿ ನೀಡಬೇಕಾದರೆ ಅದರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯ ಅಧ್ಯಯನದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಸಮೀಕ್ಷೆಗಾಗಿ 450 ಕೋಟಿ ವೆಚ್ಚ ಮಾಡಿರುವ ಬಗ್ಗೆ ಪ್ರಶ್ನಿಸಿದ ಅವರು, “ವರದಿಯನ್ನೇ ಇನ್ನೂ ಸಾರ್ವಜನಿಕರಿಗೆ ಬಿಡುಗಡೆ ಮಾಡಿಲ್ಲ. ಏನು ಮಾಡಿದ್ದಾರೆ, ಹೇಗೆ ಮಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ” ಎಂದು ಟೀಕಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments