Homeಜಿಲ್ಲೆಬಾಕಿ ಇರುವ ರೈತರ ವಿದ್ಯುತ್ ಬಿಲ್ ಸಂದಾಯಕ್ಕೆ ಸಚಿವರಿಗೆ ಸಂಸದರು ವಿನಂತಿ

ಬಾಕಿ ಇರುವ ರೈತರ ವಿದ್ಯುತ್ ಬಿಲ್ ಸಂದಾಯಕ್ಕೆ ಸಚಿವರಿಗೆ ಸಂಸದರು ವಿನಂತಿ

Spread the love

ಶಿವಮೊಗ್ಗ ಟೆಲೆಕ್ಸ್ ಜು.17

ರಾಜ್ಯದಲ್ಲಿ ಮಳೆ ಕಡಿಮೆ ಇರುವ ಕಾರಣ ಏತ ನೀರಾವರಿ ಮೂಲಕ ಕೆರೆಗಳನ್ನು ತುಂಬುವ ಕೆಲಸ ನಡೆಯುತ್ತಿತ್ತು. ಆದರೆ ವಿದ್ಯುತ್ ಇಲಾಖೆಗೆ 67 ಕೋಟಿ ರೂ. ಬಿಲ್ ಬಾಕಿ ಇರುವುದರಿಂದ ನೀರು ಲಿಫ್ಟ್ ಮಾಡುವ ಕಾರ್ಯ ನಿಂತಿತ್ತು. ಈಗ ನಾನೇ ಖುದ್ದಾಗಿ ಸಚಿವ ರಾಮಲಿಂಗಾರೆಡ್ಡಿಯವರಿಗೆ ಭೇಟಿಯಾಗಿ ಈ ಸಮಸ್ಯೆ ವಿವರಿಸಿ ತಕ್ಷಣ ವಿದ್ಯುತ್ ಇಲಾಖೆಗೆ ಬಾಕಿಯಿರುವ ಹಣ ಸಂದಾಯ ಮಾಡಲು ವಿನಂತಿಸಿದ್ದೇನೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಅವರು ಶುಕ್ರವಾರ ಮಾಧ್ಯಮಗಾರರೊಂದಿಗೆ ಮಾತನಾಡಿ, ಈ ಸಂದರ್ಭದಲ್ಲಿ ನಾನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಏಕೆಂದರೆ ಅವರ ಅಧಿಕಾರದಲ್ಲಿದ್ದಾಗ ತುಂಗಾ, ಹೊಸಳ್ಳಿ ಏತ ನೀರಾವರಿ ಸೇರಿದಂತೆ 10ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ನೀರಾವರಿ ಯೋಜನೆಗಳಿಗೆ ಸುಮಾರು 2.5 ಸಾವಿರ ಕೋಟಿ ಅನುದಾನ ನೀಡಿದ್ದರು. ಆದರೆ ಈಗ ಅಂತಹ ಯಾವುದೇ ಕೆಲಸ ನಡೆಯುತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿ ರೈತರಿಗೆ ನೀರಿನ ಸಂಕಷ್ಟು ಎದುರಾಗಿದೆ. ಅದಕ್ಕಾಗಿ ಏತ ನೀರಾವರಿ ಅಗತ್ಯವಿದ್ದು, ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದೇನೆ. ಅವರು ತಾತ್ಕಾಲಿಕವಾಗಿ 6 ಕೋಟಿ ರೂ. ಹಣ ಬಿಡುಗಡೆ ಮಾಡಿ ಏತ ನೀರಾವರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಕೆಪಿಟಿಸಿಎಲ್ ವಿದ್ಯುತ್ ಸಂಪರ್ಕ ನೀಡಿದ್ದು, ಈಗ ಕೆರೆ ತುಂಬಿಸುವ ಆಗಿದೆ ಎಂದರು.

ಗಮನಿಸಿ: ಪರಿಸರವಾದಿ ಸೊನಮ್ ವಾಂಗ್ಚುಕ್ ಹೋರಾಟಗಾರನಿಗೆ ಬೆಂಬಲ ನೀಡಿ: ಕೃಪಾಕರ ಸೇನಾನಿ

ಶಿಕಾರಿಪುರದ 60 ಕೆರೆಗಳಲ್ಲಿ ಶೇ.50ರಷ್ಟು ಕೆರೆಗಳನ್ನು ತುಂಬಿಸಲಾಗಿದೆ. ಸೊರಬದಲ್ಲಿ ವರದಾ ನದಿಯಲ್ಲಿ ಕೂಡ ಈ ತಿಂಗಳ ಅಂತ್ಯದವರೆಗೆ ಮಳೆ ಬಾರದಿದ್ದರೂ ಪಂಪಿಂಗ್ ಮಾಡುವಷ್ಟು ನೀರು ಲಭ್ಯವಿದೆ. ಮಳೆಗಾಲದಲ್ಲೂ ನೀರಿನ ಕೊರತೆಯಾದರೆ ಈ ಏತ ನೀರಾವರಿಯಿಂದ ರೈತರಿಗೆ ನೀರು ತಲುಪಿಸಲು ಸಾಧ್ಯವಾಗಿದೆ ಎಂದರು.

ಆಗುಂಬೆ ಸುರಂಗಮಾರ್ಗದ ಕುರಿತು ತಾಂತ್ರಿಕ ಪರಿಣಿತರೊಂದಿಗೆ ಬರುವ ಶುಕ್ರವಾರ ಸಭೆ ಇದೆ. ಅಲ್ಲಿ ಸಾಧಕ-ಬಾಧಕಗಳ ಚರ್ಚೆಯಾಗಲಿದೆ. ಕೇರಳದಲ್ಲಿ ಸಂಭವಿಸಿದ ಗುಡ್ಡ ಕುಸಿತದ ಬಗ್ಗೆ ಅಧ್ಯಯನ ಮಾಡಿದ ಅಧಿಕಾರಿಯೇ ಈ ತಂಡದಲ್ಲಿರುತ್ತಾರೆ. ಆಗುಂಬೆ ಘಾಟ್ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ 420 ಕೋಟಿ ರೂ. ಮಂಜೂರಾಗಿದ್ದು, ಅರಣ್ಯ ಇಲಾಖೆ ಅನುಮತಿ ದೊರಕಿದ ಕೂಡಲೇ ಕಾಮಗಾರಿ ವೇಗೆ ಪಡೆಯಲಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಕಾಮಗಾರಿ ನಡೆಸಲಾಗುವುದು. ಪ್ರಕೃತಿ ಉಳಿಸಲು ಸುರಂಗ ಮಾರ್ಗವೇ ಸಹಕಾರಿ ಎಂಬುದು ತಜ್ಞರ ಅಭಿಪ್ರಾಯ. ಪ್ರಕೃತಿ ಉಳಿಯಬೇಕು ಜನರ ಬದುಕು ಉಳಿಯಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.

ಮುಖ್ಯಮಂತ್ರಿಗಳು ಮತ್ತು ಕೆಲವು ಸಚಿವರು ಕೇಂದ್ರದ ಮೇಲೆ ಅನುದಾನ ಬಂದಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾಡುವ ಕರ್ತವ್ಯಗಳನ್ನು ಮೊದಲು ಅವರು ಚಿಂತಿಸಲಿ. ರೈತರಿಗೆ ಉತ್ತೇಜನ ನೀಡುವ ಕಾರ್ಯ ಮಾಡಲಿ. ಬೀಜ, ಗೊಬ್ಬರದ ವಿತರಣೆ ಮಾಡಲಿ. ಕೇಂದ್ರ ಸರ್ಕಾರಕ್ಕೆ ಅನುದಾನ ಕೇಳುವ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಸಂಸದರಾಗಿ ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments