Homeಜಿಲ್ಲೆಅಕ್ರಮ ಅಡಿಕೆ ಅಮದನ್ನು ತಡೆಗಟ್ಟಿ; ಅಮಿತ್‌ಶಾ ಗೆ ನಿಯೋಗ ಮನವಿ

ಅಕ್ರಮ ಅಡಿಕೆ ಅಮದನ್ನು ತಡೆಗಟ್ಟಿ; ಅಮಿತ್‌ಶಾ ಗೆ ನಿಯೋಗ ಮನವಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.7

ಹಿರಿಯ ನಾಯಕ, ಕರ್ನಾಟಕದ ಮಾಜಿ ಗೃಹ ಸಚಿವ ಮತ್ತು ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ಬಿಜೆಪಿ ಸಂಸದರು ಮತ್ತು ಕೇಂದ್ರ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (CAMPCO) ಪ್ರತಿನಿಧಿಗಳ ನಿಯೋಗ ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ದೇಶೀಯ ಅಡಿಕೆ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡುತ್ತಿರುವ ಅಕ್ರಮ ಅಡಿಕೆ ಅಮದು ಮತ್ತು ಕಳ್ಳಸಾಗಣೆ ತಡೆಯಲು ಬಲವಾದ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದೆ.

ಬಿಜೆಪಿ ಸಂಸದರಾದ ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಮತ್ತು ಇತರ ಕ್ಯಾಂಪ್ಕೋ ಪ್ರತಿನಿಧಿಗಳು, ಕರ್ನಾಟಕ ಸೇರಿದಂತೆ ಅಡಿಕೆ ಬೆಳೆಯುವ ರಾಜ್ಯಗಳ ಲಕ್ಷಾಂತರ ರೈತ ಕುಟುಂಬಗಳು, ಅಕ್ರಮ ಅಡಿಕೆ ಆಮದಿನಿಂದಾಗಿ ಎದುರಿಸುತ್ತಿರುವ ಸವಾಲಿನ ಸಂಕಷ್ಟಮಯ ಪರಿಸ್ಥಿತಿಗಳ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಅಡಿಕೆ ಬೆಳೆಗಾರರ ಹಿತರಕ್ಷಿಸಬೇಕು. ಬೆಳೆ ರೋಗಗಳು, ಹೆಚ್ಚುತ್ತಿರುವ ವೆಚ್ಚ, ಕುಸಿಯುತ್ತಿರುವ ಉತ್ಪಾದಕತೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿರುವ ರೈತರು, ಅಕ್ರಮ ವ್ಯಾಪಾರದಿಂದ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿದೇಶಿ ಮೂಲದ ಅಡಕೆಯನ್ನು ಗಡಿ, ಬಂದರುಗಳು ಮತ್ತು ಇತರ ಮಾರ್ಗಗಳ ಮೂಲಕ ಅಕ್ರಮವಾಗಿ ಸಾಗಿಸುವ ಬಗ್ಗೆ ಹಾಗೂ ಆಮದು ವರ್ಗೀಕರಣಗಳು ಮತ್ತು ವ್ಯಾಪಾರ ದಾಖಲಾತಿಗಳ ಸಂಭಾವ್ಯ ದುರುಪಯೋಗದ ಬಗ್ಗೆ ಮಾಹಿತಿ ನೀಡಿದರು.
ಐಟಿಸಿ (ಎಚ್‌ಎಸ್) 20081991 ರ ಅಡಿಯಲ್ಲಿ ‘ಹುರಿದ ಒಣಹಣ್ಣುಗಳು ಮತ್ತು ಬೀಜಗಳು’ ಎಂದು ಘೋಷಿಸಲಾದ ಸರಕುಗಳ ಸೂಕ್ಷö್ಮ ಪರಿಶೀಲನೆ ನಡೆಸಬೇಕು. ಸುರಕ್ಷತಾ ಕ್ರಮಗಳನ್ನು ತಪ್ಪಿಸಲು ಕೇವಲ ಹೆಸರಿಗೆ ಮಾತ್ರ ಸಂಸ್ಕರಿತ ಎಂದು ರೈತರು ಕಳವಳಗೊಂಡಿದ್ದಾರೆ. ಪ್ರತಿ ಕೆಜಿಗೆ ರೂ. 351 ಕನಿಷ್ಠ ಆಮದು ಬೆಲೆ (ಎಂಐಪಿ) ಕಟ್ಟುನಿಟ್ಟಾದ ಜಾರಿ ಮತ್ತು ಅಡಿಕೆ ಯಾವ ದೇಶದಿಂದ ಬರುತ್ತಿದೆ, ಅದರ ಘೋಷಿತ ಮೌಲ್ಯ ಮತ್ತು ರವಾನೆಗಳ ಮಾರ್ಗನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಈ ವೇಳೆ ಸಂಸದ ರಾಘವೇಂದ್ರ ಗೃಹ ಸಚಿವರೊಡನೆ ಮಾತನಾಡಿ, ಕನಿಷ್ಠ ಆಮದು ಬೆಲೆ ಸುರಕ್ಷತೆ ಸೇರಿದಂತೆ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ. ಇಂತಹ ರೈತ ಹಿತರಕ್ಷಣೆಯ ಪೂರಕ ಕ್ರಮಗಳು ರೈತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ದೇಶದೊಳಗೆ ನುಸುಳಿ ಬರುತ್ತಿರುವ ಅಕ್ರಮ ಅಡಿಕೆ ದೇಶೀಯ ಮಾರುಕಟ್ಟೆಗಳನ್ನು ತಲುಪುವುದನ್ನು ತಡೆಯಲು, ಪ್ರವೇಶ ಸ್ಥಳಗಳಲ್ಲಿ ಕಣ್ಗಾವಲು ಬಲಪಡಿಸುವುದರ ಜೊತೆಗೆ ಗೃಹ ವ್ಯವಹಾರಗಳು, ವಾಣಿಜ್ಯ ಮತ್ತು ಕೈಗಾರಿಕೆ, ಹಣಕಾಸು/ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ನ ಕೇಂದ್ರೀಯ ಮಂಡಳಿ, ರೆವಿನ್ಯೂ ಇಂಟೆಲಿಜೆನ್ಸ್ ನಿರ್ದೇಶನಾಲಯ, ಕಸ್ಟಮ್ಸ್ ಮತ್ತು ಸಂಬಂಧಿತ ರಾಜ್ಯಗಳು ಸಚಿವಾಲಯವನ್ನು ಒಳಗೊಂಡಂತೆ ವ್ಯವಸ್ಥಿತ ಕಾರ್ಯತಂತ್ರವನ್ನು ಸ್ಥಾಪಿಸಲು ನಿಯೋಗ ಕೋರಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments