Homeಜಿಲ್ಲೆಮನುಷ್ಯ ಪ್ರೀತಿ ಬೆಳೆಸಿಕೊಳ್ಳಿ-ಪಡೆಯುವುದು ಮಾತ್ರವಲ್ಲ ಕೊಡುವುದನ್ನು ಕಲಿಯಿರಿ

ಮನುಷ್ಯ ಪ್ರೀತಿ ಬೆಳೆಸಿಕೊಳ್ಳಿ-ಪಡೆಯುವುದು ಮಾತ್ರವಲ್ಲ ಕೊಡುವುದನ್ನು ಕಲಿಯಿರಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.13

ಮಿಡಿಯುವ ಮನಸ್ಸಿನ ಜೊತೆಗೆ ಸಿಡಿಯುವ ಜಾಗೃತಿಯೂ ಇರಬೇಕೆಂದು ಕವಯತ್ರಿ ಸವಿತಾ ನಾಗಭೂಷಣ್ ಹೇಳಿದರು.

ಅವರು ಗುರುವಾರ ಕುವೆಂಪು ವಿವಿ, ಸಹ್ಯಾದ್ರಿ ವಾಣಿಜ್ಯ ನಿರ್ವಹಣಾ ಕಾಲೇಜು, ರಾಷ್ಟ್ರೀಯ  ಸೇವಾ ಯೋಜನೆ ಘಟಕಗಳು, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ರೆಡ್ ರಿಬ್ಬನ್ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ  ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವಕರಿಗೆ ಉಪದೇಶ ಹೇಳುವ ಕಾಲ ಮುಗಿದಿದೆ. ಅವರು ತಮ್ಮ ಜವಾಬ್ದಾರಿಗಳನ್ನು ಅರಿಯುವತ್ತಾ ಸಾಗುತ್ತಿದ್ದಾರೆ. ಇಂತಹ ಯುವ ಜನಾಂಗದ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದೆ. ಕಾಲವನ್ನೇ ಹಿಡಿದು ನಿಲ್ಲಿಸುವ ಕಾಲದಲ್ಲಿ ಯುವಕರಿದ್ದಾರೆ. ನಾವು ಅವರಿಗೆ ಇಷ್ಟು ವರ್ಷಗಳ ಕಾಲ ಒಳ್ಳೆಯದ್ದನ್ನ ಸೃಷ್ಟಿಸಿ ಕೊಡಲಿಲ್ಲ. ತಪ್ಪ ನಮ್ಮದೆ ಮೊಸದ ಬೀಜವನ್ನೇ ನಾವು ಭಿತ್ತಿ ಬಿಟ್ಟಿದ್ದೇವು. ಅವರಾದರೂ ಎಷ್ಟು ದಿನ ಅದನ್ನು ಸಹಿಸಿಕೊಂಡಾರು. ಈಗ ಅದನ್ನು ಸರಿ ಮಾಡಲು ತಿರುಗಿ ಬೀಳು ಹೊರಟಿದ್ದಾರೆ. ಇದಕ್ಕೆ ಇತ್ತೀಚಿನ ಜೆನ್-ಜಿಗಳ ಹೋರಾಟವೇ ಸಾಕ್ಷಿ ಎಂದರು.

ಗಮನಿಸಿ: 50 ಎಲೆಕ್ಟ್ರಿಕ್ ಬಸ್ ಸೇವೆ ಮುಕ್ತಗೊಳಿಸಿ: ಸಚಿವರಿಗೆ ಚೇತನ್ ಗೌಡ ಮನವಿ

ಆದರೂ ಯುವಕರು ಇಂದು ಎಚ್ಚರದಿಂದ ಇರಬೇಕಾಗಿದೆ. ತಾಕಲಾಟ, ತಲ್ಲಣಗಳ ನಡೆಯುವೆಯು ಸಣ್ಣ ಸಣ್ಣ ಸಂಗತಿಗಳನ್ನ ನಿರ್ಲಕ್ಷ್ಯ ಮಾಡಬಾರದು. ಆರೋಗ್ಯ ಮುಖ್ಯ. ಊಟ, ನಿದ್ರೆಗೆ ಮಹತ್ವ ಕೊಡಿ. ಪ್ರಕೃತಿಗೆ ಹತ್ತಿರವಾಗಿ ಮನುಷ್ಯ ಪ್ರೀತಿ ಬೆಳೆಸಿಕೊಳ್ಳಿ. ಪಡೆಯುವುದು ಮಾತ್ರ ನಿಮ್ಮ ಕೆಲಸವಲ್ಲ, ಕೊಡಿವುದನ್ನು ಕಲಿಯಿರಿ ಎಂದರು.

ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಎಸ್.ಕೆ.ಕಿರಣ್ ಮಾತನಾಡಿ, ಯುವಕರು ಮೌಲ್ಯಗಳತ್ತ ಸಾಗಬೇಕಾಗಿದೆ. ಆದರೆ ಬಹಳಷ್ಟು ಕಡೆ ವ್ಯಸನಿಗಳಾಗುವುದನ್ನ ನಾವು ನೋಡುತ್ತೇವೆ. ಅಲ್ಲದೇ ಆರೋಗ್ಯದ ಕಡೆಯು ಗಮನ ಹರಿಸುತ್ತಿಲ್ಲ. ಒಬ್ಬ ಏಡ್ಸ್ ಅಧಿಕಾರಿಯಾಗಿ ಅಂಕಿಅಂಶಗಳನ್ನ ನೋಡಿದರೆ ಆತಂಕವಾಗುತ್ತದೆ. ಏಡ್ಸ್ ನಿರ್ಮೂಲನ ಹಂತದಲ್ಲಿರುವ ನಾವು ಈಗ ರಾಜ್ಯದಲ್ಲಿ 7 ಸಾವಿರ ಅದರಲ್ಲೂ 25 ವರ್ಷದ ಒಳಗಿನ ಯುವಕರು ಇದ್ದಾರೆ ಎಂಬುದು ಎಂದು ತಿಳಿದು ಬಂದಿದೆ. ಜಿಲ್ಲೆಯ ಅಂಕಿಅಂಶ ನೋಡಿದರೆ 194 ಹೆಚ್‌ಐವಿ ಸೋಂಕಿತರಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಅವಿನಾಶ್.ಟಿ ಮಾತನಾಡಿ, ಯುವ ದಿನಾಚರಣೆಯನ್ನು ಕೇವಲ ಆಚರಣೆಯನ್ನಾಗಿ ಮಾಡದೆ ಯುವಕರಲ್ಲಿ ಜವಾಬ್ದಾರಿ ಮತ್ತು ಸಾಮಾಜಿಕ ಕಳಕಳಿ ಮೂಡಿಸುವ ದಿನವನ್ನಾಗಿ ಪರಿವರ್ತಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರ ಡಾ. ಲವ ಜಿ.ಆರ್, ಯುವಕರ ಸಬಲೀಕರಣ ಮತ್ತು ಸ್ಥುಸ್ತಿರ ಅಭಿವೃದ್ದಿಗಾಗಿ ಅಂತರಾಷ್ಟ್ರೀಯ  ಯುವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ದೇಶದ ಭವಿಷ್ಯ ಯುವಕರ ಕೈಯಲ್ಲಿಯೇ ಇದೆ. ಸಾಮಾಜಿಕ ಸಮಕಾಲೀನ ಸಮಸ್ಯೆಗಳಿಗೆ ಯುವಕರು ಇಂದು ಸ್ಪಂದಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಗಿರಿಧರ್.ಕೆ.ವಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪರಶುರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಮೇಲ್ವಿಚಾರಕರು ಮಂಗಳ ಮುಂತಾದವರು ಇದ್ದರು.
ವನಿತಾ ಗೌಡ ಸ್ವಾಗತಿಸಿ, ಭಾಗ್ಯಶ್ರೀ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments