Homeಅಪರಾಧಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ: ಯುವಕರ ಸಮಯ ಪ್ರಜ್ಞೆಯಿಂದ ಉಳಿದ ಜೀವ

ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ: ಯುವಕರ ಸಮಯ ಪ್ರಜ್ಞೆಯಿಂದ ಉಳಿದ ಜೀವ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.24

ಕೌಟಂಬಿಕ ಕಲಹ ಹಿನ್ನಲೆ ಚಿತ್ರದುರ್ಗದ ಮೂಲದ ಮಹಿಳೆ ಭವಾನಿ ತನ್ನ ಮೂರು ಮಕ್ಕಳೊಂದಿಗೆ ತುಂಗಾನದಿಗೆ ಹಾರಿದ ಘಟನೆ ಅರಕೇರೆ ದೇವಸ್ಥಾನ ಬಳಿ ನಡೆದಿದೆ.

ಸೋಮವಾರ ಸುಮಾರು ರಾತ್ರಿ 7.30 ಕ್ಕೆ ತುಂಗಾ ಸೇತುವೆಯ ರೈಲ್ವೆ ಹಳಿ ಮೇಲಿನಿಂದ ಹಾರಿದ್ದಾಳೆ.

ಗಮನಿಸಿ: ಪ್ರವಾದಿ ಮುಹಮ್ಮದ್(ಸ) ಸಂದೇಶ ಪರಿಚಯಿಸಲು ಸೀರತ್ ಅಭಿಯಾನ

ಮಹಿಳೆ ಕುಟುಂಬದೊಂದಿಗೆ ಸವಳಂಗದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸಂಜೆ ವೇಳೆಗೆ ಮನೆಯಲ್ಲಿಜಗಳ ಮಾಡಿಕೊಂಡು ಬಂದು ನದಿಗೆ ಹಾರಿದ್ದಾಳೆ.

ಸಣ್ಣ,ಸಣ್ಣ ಮೂರು ಜನ ಮಕ್ಕಳೊಂದಿಗೆ ನದಿಗೆ ಮಹಿಳೆ ಹಾರಿದ್ದು, ಇದರಲ್ಲಿ ಒಂದೂವರೆ ವರ್ಷದ ಮಗುವನ್ನ ನವೀನ್ ಹಾಗೂ ದಾದಾಪೀರ್ ಎಂಬ ಯುವಕರು ರಕ್ಷಿಸಿದ್ದಾರೆ.

ಇನ್ನಿಬ್ಬರೂ ಮಕ್ಕಳನ್ನು ರಕ್ಷಿಸುವಂತೆ ತಾಯಿ ಗೋಗರೆಯುತ್ತಿದ್ದು, ಮಕ್ಕಳಿಗಾಗಿ ತುಂಗಾ ನದಿಯಲ್ಲಿಪೊಲೀಸರ ಶೋಧ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments