Homeರಾಜ್ಯಡಿಸಿಸಿ ಬ್ಯಾಂಕ್ ಗೆ ಆಧುನಿಕ ಬ್ಯಾಂಕಿಂಗ್ ಸ್ಪರ್ಶ, ಪ್ರಸಕ್ತ ಸಾಲಿನಲ್ಲಿ 36 ಕೋ.ರೂ ಲಾಭ: ಮಂಜುನಾಥಗೌಡ

ಡಿಸಿಸಿ ಬ್ಯಾಂಕ್ ಗೆ ಆಧುನಿಕ ಬ್ಯಾಂಕಿಂಗ್ ಸ್ಪರ್ಶ, ಪ್ರಸಕ್ತ ಸಾಲಿನಲ್ಲಿ 36 ಕೋ.ರೂ ಲಾಭ: ಮಂಜುನಾಥಗೌಡ

Spread the love

ಡಿಸಿಸಿ ಬ್ಯಾಂಕ್ ಗೆ ಆಧುನಿಕ ಬ್ಯಾಂಕಿಂಗ್ ಸ್ಪರ್ಶ, ಪ್ರಸಕ್ತ ಸಾಲಿನಲ್ಲಿ 36 ಕೋ.ರೂ ಲಾಭ: ಮಂಜುನಾಥಗೌಡ

ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಸ್‌ಡಿಸಿಸಿ)  2024-25 ನೇ ಸಾಲಿನಲ್ಲಿ 36.75ಕೋ.ರೂ.ಗಳ ಲಾಭ ಗಳಿಸಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಇದರ ಪ್ರಮಾಣ 45 ಕೋ.ರೂ.ಗಳಿಗೆ ತಲುಪುವ ನಿರೀಕ್ಷೆ ಇದೆ ಎಂದು ಬ್ಯಾಂಕ್ ನ ಅಧ್ಯಕ್ಷ ಡಾ. ಆರ್. ಎಂ ಮಂಜುನಾಥಗೌಡ ಅವರು ತಿಳಿಸಿದ್ದಾರೆ.

ಇಂದಿಲ್ಲಿ ಸುದ್ದಿಗೋಷಿಯಲ್ಲಿ ಮಾತನಾಡಿದ ಅವರು ಬ್ಯಾಂಕ್  155.34ಕೋಟಿ ರೂ. ಷೇರು ಬಂಡವಾಳ, 91.98ಕೋಟಿ, ರೂ. ದುಡಿಯುವ ಬಂಡವಾಳ ಹೊಂದಿದೆ.1720.88 ಕೋಟಿ ಠೇವಣಿ ಸಂಗ್ರಹಣೆಯಾಗಿದ್ದು, ಒಟ್ಟಾರೆ ಬ್ಯಾಂಕಿನ ವ್ಯವಹಾರವು ವಾರ್ಷಿಕ ರೂ.೩೭೦೦.೦೦ ಕೋಟಿ ತಲುಪಿದ್ದು, ನಬಾರ್ಡ್ ಪರಿವೀಕ್ಷಣಾ ವರದಿಯಲ್ಲಿ “ಎ” ದರ್ಜೆ ಪಡೆದಿದೆ ಎಂದು ವಿವರಿಸಿದರು.

ಹೋಬಳಿ ಮತ್ತು ಗ್ರಾಮಪಂಚಾಯ್ತಿ ಮಟ್ಟದಲ್ಲಿ ಬ್ಯಾಂಕ್ ನ ಶಾಖೆಗಳ ತೆರೆಯಲು ಈಗಾಗಲೆ ಯೋಜಿಸಲಾಗಿದ್ದು, ಅದರಂತೆ ಭದ್ರಾವತಿಯ ಬಾರಂದೂರು, ಹೊಸನಗರದ ಚಿಕ್ಕಪೇಟೆ ನಗರ, ಸಾಗರದ ತ್ಯಾಗರ್ತಿ ಹಾಗೂ ಶಿವಮೊಗ್ಗದ ಗಾಜನೂರು ಗ್ರಾಮಗಳಲ್ಲಿ ಒಟ್ಟು 4ನೂತನ ಶಾಖೆಗಳನ್ನು ತೆರೆಯಲಾಗಿದ್ದು, ಜನವರಿ-೨೦೨೬ಕ್ಕೆ ತೀರ್ಥಹಳ್ಳಿಯ ಎ.ಪಿ.ಎಂ.ಸಿ ಆವರಣದಲ್ಲಿ ನೂತನ ಶಾಖೆಯನ್ನು ಆರಂಭಿಸಲಾಗುವುದು ಹಾಗೂ ೨೦೨೬ ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ೧೪ ಶಾಖೆಗಳನ್ನು ತೆರೆಯಲಾಗುವುದು ತಿಳಿಸಿದರು.

ನಬಾರ್ಡ್ ಪುನರ್ಧನ ಸೌಲಭ್ಯ ಕಡಿತಗೊಂಡಿದಾಗ್ಯೂ ಬ್ಯಾಂಕಿನಿಂದ ೨೦೨೫-೨೬ ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ 105990ರೈತರಿಗೆ  1250.30 ಕೋಟಿ ರೂ. ಅಲ್ಪಾವಧಿ ಕೃಷಿ ಬೆಳೆ ಸಾಲ ನೀಡಲಾಗಿದೆ. ಮಧ್ಯಮಾವಧಿ ಕೃಷಿ ಸಾಲ ಪ್ರಸಕ್ತ ದಿನಾಂಕದವರೆಗೆ ೬೨೭ ರೈತರಿಗೆ ರೂ.೧೧೫.೨೧ ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದೆ. ಸ್ವ-ಸಹಾಯ ಸಂಘಗಳಿಗೆ 3488  157,22ಕೋಟಿ ರೂ. ಸಾಲ ವಿತರಿಸಲಾಗಿದೆ. ಬ್ಯಾಂಕಿನ ಶಾಖೆಗಳ ಮೂಲಕ 17937 ವ್ಯಕ್ತಿಗಳಿಗೆ ಕೃಷಿಯೇತರ ಸಾಲ ರೂ. 643.37 ಕೋಟಿ ಸಾಲ ನೀಡಲಾಗಿದ್ದು, ಒಟ್ಟಾರೆ ಸಾಲ ನೀಡಿಕೆ 1800 ಕೋಟಿ ರೂ. ಆಗಿರುತ್ತದೆ. ಸಾಲ ವಸೂಲಾತಿ ಶೇ.80 ಇರುತ್ತದೆ ಎಂದು ವಿವರಿಸಿದ ಅಧ್ಯಕ್ಷ ಡಾ. ಆರ್ ಎಂ ಮಂಜುನಾಥಗೌಡ ಅವರು,2025-26 ನೇ ಸಾಲಿನಲ್ಲಿ ಬ್ಯಾಂಕಿನಿಂದ 16626  ರೈತರಿಂದ 6.75ಕೋಟಿ ರೂ.ಬೆಳೆ ವಿಮೆ ಪ್ರೀಮಿಯಂ ಪಾವತಿಸಲಾಗಿದ್ದು, ನವೆಂಬರ್-2025 ರ ಮಾಹೆಯಲ್ಲಿ ಬ್ಯಾಂಕಿನಿಂದ ವಿಮೆ ಪಾವತಿಸಿದವರ ಪೈಕಿ 11921 ರೈತರಿಗೆ ರೂ.11.53ಕೋಟಿರೂ. ವಿಮಾ ಪರಿಹಾರ ಮೊತ್ತ ಬಿಡುಗಡೆಯಾಗಿರುತ್ತದೆ ಎಂದರು.

2025-26 ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಬೆಳೆ ಸಾಲ ಒಟ್ಟು 1.20000 ರೈತರಿಗೆ 1300 ರೂ. ಕೋಟಿ ಹಾಗೂ ಶೇ.3 ರ ಬಡ್ಡಿ ದರದಲ್ಲಿ 1500 ರೈತರಿಗೆ ರೂ.80 ಕೋಟಿ ಮಧ್ಯಮಾವಧಿ ಕೃಷಿ ಪಾಲ ಹಂಚಿಕೆ ಮಾಡುವ ಯೋಜನೆಯನ್ನು ಹೊಂದಲಾಗಿದೆ. 2100 ಸ್ವ-ಸಹಾಯ ಸಂಘಗಳಿಗೆ 100. ಕೋಟಿ ರೂ. ಹೆಚ್ಚುವರಿ ಸಾಲ ವಿತರಿಸುವ ಆಯೋಜನೆಯನ್ನು ಹೊಂದಲಾಗಿದ್ದು, ಬ್ಯಾಂಕಿನಿಂದ ಪೆಟ್ರೋಲ್ ಬಂಕ್, ಟ್ರಾನ್ಸ್‌ಪೋರ್ಟ್ ಕಂಪನಿ, ಹಾಸ್ಪಿಟಲ್ ಮುಂತಾದ ಉದ್ಯಮಗಳಿಗೆ ಸಾಲ ನೀಡುವ ಮೂಲಕ ಕೃಷಿಯೇತರ ಸಾಲ ನೀಡಿಕೆ ಹೆಚ್ಚಿಸಲು ಕ್ರಮವಹಿಸಲಾಗಿದೆ. ವಾಣಿಜ್ಯ ಬ್ಯಾಂಕ್ ಗಳಿಗೂ ಕಡಿಮೆ ಇಲ್ಲದಂತೆ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಲ್ಲಿ ಡಿಸಿಸಿ ಬ್ಯಾಂಕ್ ಎಲ್ಲಾ ಕ್ರಮಗಳನ್ನು ವಹಿಸಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪ, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಎಂ .ಶ್ರೀಕಾಂತ್, ನಿರ್ದೇಶಕರಾದ ಸುಧೀರ್, ದುಗ್ಗಪ್ಪ ಗೌಡ, ಸಿ. ಹನುಮಂತ, ಮಹಾಲಿಂಗ ಶಾಸ್ತ್ರಿ , ಬ್ಯಾಂಕ್ ವ್ಯವಸ್ಥಾಪಕ ಕಾರ್ಯನಿರ್ವಾಹಕ ಸಿ.ರಾಜಣ್ಣ ರೆಡ್ಡಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬ್ಯಾಂಕ್ ನ ನೂತನ ವರ್ಷದ ಕ್ಯಾಲೆಂಡರ್ ಮತ್ತು ಡೈರಿಯನ್ನು ಬಿಡುಗಡೆಗೊಳಿಸಲಾಯಿತು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments