Homeಜಿಲ್ಲೆಅಂತ್ಯ ಸಂಸ್ಕಾರ ಯೋಜನೆಯನ್ನು ಮರು ಜಾರಿ ಮಾಡಿ: ಕಲ್ಲೂರು ಮೇಘರಾಜ್ ಅಗ್ರಹ

ಅಂತ್ಯ ಸಂಸ್ಕಾರ ಯೋಜನೆಯನ್ನು ಮರು ಜಾರಿ ಮಾಡಿ: ಕಲ್ಲೂರು ಮೇಘರಾಜ್ ಅಗ್ರಹ

Spread the love

ಶಿವಮೊಗ್ಗ,ಜ.6: 2021 ರಿಂದ ಸ್ಥಗಿತಗೊಂಡಿರುವ ಅಂತ್ಯ ಸಂಸ್ಕಾರ ಯೋಜನೆಯನ್ನು ಕೂಡಲೇ ಮರು ಜಾರಿ ಮಾಡಬೇಕು. ಹಾಗೂ ಮೃತರ ವಾರಸುದಾರರಿಗೆ ನೀಡುತ್ತಿದ್ದು ರೂ.5000 ಸಹಾಯಧನವನ್ನು ರೂ.10 ಸಾವಿರಕ್ಕೆ ಹೆಚ್ಚಿಸಬೇಕೆಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ ಅಗ್ರಹಿಸಿದರು.

ಮಂಗಳವಾರ ಪತ್ರಿಜಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದ ಬಡತನ ರೇಖೆಗಿಂತ ಕೆಳಗಿನ ಆದಾಯವಿರುವ ಕುಟುಂಬದ ಯಾವುದೇ ಸದಸ್ಯರು ಮೃತರಾದಲ್ಲಿ ಅವರ ಅಂತ್ಯಸಂಸ್ಕಾರ ನಡೆಸುವ ವಾರಸುದಾರರಿಗೆ ಸರ್ಕಾರ 2006 ರಲ್ಲಿ “ ಅಂತ್ಯ ಸಂಸ್ಕಾರ ಯೋಜನೆಯಡಿ” ರೂ.5 ಸಾವಿರವನ್ನು ನೀಡುತ್ತಿದ್ದರು. ಇದರಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಅಂತ್ಯ ಸಂಸ್ಕಾರ ಕಾರ್ಯವವನ್ನು ಮಾಡಲು ಬಹಳಷ್ಟು ಸಹಕಾರಿಯಾಗುತ್ತಿತ್ತು. ಆದರೆ 2021 ಅನ್ವಯವಾಗುವಂತೆ ಸರ್ಕಾರದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸುಳ್ಳು ಮಾಹಿತಿಯಿಂದ ಇಂತಹ ಜನಪರ ಹಾಗೂ ಜೀವಪರ ಅಂತ್ಯ ಸಂಸ್ಕಾರ ಯೋಜನೆಯನ್ನು ಅವೈಜ್ಞಾನಿಕವಾಗಿ ಹಾಗೂ ಅಮಾನೀಯವಾಗಿ ರದ್ದಗೊಳಿಸಲಾಗಿದೆ. ಇದರಿಂದ ಬಡವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಕೂಡಲೇ ಕಾಂಗ್ರೆಸ್ ಸರ್ಕಾರದ ಈ ಯೋಜನೆಯಡಿ ಬಗ್ಗೆ ಗಮನಹರಿಸಿ ಮರು ಜಾರಿ ಮಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಲೀಂ ಖಾನ್, ಶಂಕರನಾಯ್ಕ, ಕೆ.ಆರ್.ಶಿವಣ್ಣ. ವೇದಾನಂದ ಗೌಡ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments