Homeಜಿಲ್ಲೆಜ.10 ರಿಂದ ಮಲೆನಾಡು ಉತ್ಸವ

ಜ.10 ರಿಂದ ಮಲೆನಾಡು ಉತ್ಸವ

Spread the love

ಶಿವಮೊಗ್ಗ,.8: ಗ್ರೋ ಗ್ರೀನ್ ಮತ್ತು ಪೃಥ್ವಿಗೌಡ ಕಲ್ಚರಲ್ ಈವೆಂಟ್ಸ್ ಸಹಯೋಗದೊಂದಿಗೆ ಅರುಣೋದಯ ಇವೆಂಟ್ಸ್ ಅವರು .10 ಮತ್ತು 11 ರಂದು ಸಂಜೆ 5 ಗಂಟೆಗೆ ನಗರದ ಅಲ್ಲಮಪ್ರಭು ಫ್ರೀಡಂ ಪಾರ್ಕ್ ನಲ್ಲಿ ಮಲೆನಾಡು ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪೃಥ್ವಿಗೌಡ ಕಲ್ಚರಲ್ ಈವೆಂಟ್ಸ್ ನ ಮುಖ್ಯಸ್ಥ ಪೃಥ್ವಿಗೌಡ ತಿಳಿಸಿದರು.

ಗುರುವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಗೀತೆಗೆ 100 ವರ್ಷದ ಸಂಭ್ರಮ ಹಾಗೂನಮ್ಮ ರಾಷ್ಟ್ರಗೀತೆ ವಂದೇ ಮಾತರಂ ಗೆ 150 ವರ್ಷದ ಸಂಭ್ರಮದ ಅಂಗವಾಗಿ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯ 150 ಮಕ್ಕಳಿಂದ ಏಕಕಂಠ ಗಾಯನ ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಲಿದೆ.

ಗೋಲ್ಡನ್ ವಾಯ್ಸ್ ಆಫ್ ಮಲೆನಾಡು ರಾಜ್ಯಮಟ್ಟದ ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫೈನಲ್ ಹಾಗೂ ನೃತ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, 6 ನೃತ್ಯ ತಂಡಗಳಿಂದ ಡೊಳ್ಳು ಕುಣಿತ, ಯಕ್ಷಗಾನ, ಚಲಚಿತ್ರ ನೃತ್ಯ ಪ್ರಕಾರಗಳು ಪ್ರದರ್ಶನ ಮಾಡಲಾಗುತ್ತದೆ.

ಸಾಲುಮರದ ತಿಮ್ಮಕ್ಕನರ ಸ್ಮರಣೆಯಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಯನ್ನು ಆಯೋಜಿಸಲಾಗಿದೆ. 1 ರಿಂದ 3, 4 ರಿಂದ 7, 8 ರಿಂದ 10 ವಯಸ್ಸಿನ ಮಕ್ಕಳಿಗೆ ಅವಕಾಶವಿದ್ದು, ಈಗಾಗಲೇ 250 ಮಕ್ಕಳು ನೋಂದಣಿಆಗಿದ್ದಾರೆ, ನೊಂದಣಿ ಶುಲ್ಕ ರೂ.50 ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಚನ್ನಯ್ಯ ಅಚಾರ್ಯ, ಅಭಿಷೇಕ್, ಗಿರಿರಾಜ್‌ಗೌಡ, ನಿರಂಜನಿ, ಶ್ವೇತಾ, ಶಶಿಕುಮಾರ್, ಸುನೀಲ್‌ಗೌಡ, ಗುರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments