ಶಿವಮೊಗ್ಗ,ಜ.8: ಫರ್ಸ್ಟ್ ಸರ್ಕಲ್ ಉದ್ಯಮ ಒಕ್ಕಲಿಗ ವತಿಯಿಂದ ಜ.9, 10 ಮತ್ತು 11 ರಂದು ಬೆಂಗಳೂರಿನಅರಮನೆ ಮೈದಾನದಲ್ಲಿ ಗಾಯತ್ರಿ ಗ್ಯ್ರಾಂಡ್ ಮತ್ತು ಗಾಯತ್ರಿ ವೃಕ್ಷದ ಐದು ಸಭಾಂಗಣದಲ್ಲಿ ಫರ್ಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ಪೋ-2026 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಫರ್ಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಜಿಲ್ಲಾಧ್ಯಕ್ಷ ಎಂ.ಎ.ರಮೇಶ್ ಹೆಗಡೆ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಉದ್ಯಮ ಒಕ್ಕಲಿಗೆ ಎಕ್ಸ್ಪೋನಲ್ಲಿ 200 ಕ್ಕೂ ಹೆಚ್ಚು ಪ್ರದರ್ಶನಕಾರರು ಮಳಿಗೆಗಳನ್ನು ತೆರೆಯಲು ಸ್ಥಳಾವಕಾಶ ಪಡೆದಿದ್ದು, ಈ ಬಾರಿ ರೈತ ಸಂತೆಯಲ್ಲಿ 50 ಕ್ಕೂಹೆಚ್ಚು ರೈತರು ಪದಾರ್ಥಗಳನ್ನು ಮಾರಾಟ ಮಾಡಲಿದ್ದಾರೆ.
ಮೂರು ದಿನಗಳ ಈ ಸಮಾವೇಶದಲ್ಲಿ ವಿಶೇಷ ವಲಯಗಳಾದ ಕೃಷಿ, ಆರೋಗ್ಯ, ಶಿಕ್ಷಣ, ಎಂಎಸ್ಎಂಇ ಆಹಾರ–ಅತಿಥ್ಯ, ಮಾಧ್ಯಮ–ಮನರಂಜನೆ, ಸ್ಟಾರ್ಟ್ ಆಪ್ ಸೆಕ್ಟರ್ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ಮತ್ತು ಸಂವಹನ ನಡೆಯಲಿದೆ.
ಉದ್ಯಮ ಒಕ್ಕಲಿಗ ಎಕ್ಸ್ಪೋ ನಲ್ಲಿ ಮಹಿಳೆಯರಿಗೆ ಮತ್ತು ಯುವಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿಲಿದ್ದು, ರೂ.10 ಸಾವಿರ ಪ್ರೋತ್ಸಾಹಧನ ನೀಡುವ ಮೂಲಕ 3 ತಿಂಗಳು ಉದ್ಯಮದ ಕುರಿತು ಕೌಶಲ್ಯತೆ ತರಬೇತಿಯನ್ನು ನೀಡಿ ನೀಡಲಾಗುತ್ತದೆ.
ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕರು, ಸಂಸದರು, ಹಿರಿಯ ಉದ್ಯಮಿಗಳು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಬಿ.ಎಂ.ರಮೇಶ್ ಹೆಗಡೆ, ಉದ್ಯಮ ಒಕ್ಕಲಿಗಜಿಲ್ಲಾ ಕಾರ್ಯದರ್ಶಿ ರಾಕೇಶ್, ನಿರ್ದೇಶಕ ರವಿ ಹಾಜರಿದ್ದರು.
