Homeಜಿಲ್ಲೆಮಾ.23 ರಂದು ಪೆನ್ ನಾಟಕ

ಮಾ.23 ರಂದು ಪೆನ್ ನಾಟಕ

Spread the love

ಶಿವಮೊಗ್ಗ, ಮಾ.18: ಶಿವಮೊಗ್ಗದ ಹೊಂಗಿರಣ ತಂಡದಿಂದ ಮಾ.23 ರಂದು ಸಂಜೆ 7 ಗಂಟೆಗೆ ಕುವೆಂಪುರಂಗಮಂದಿರದಲ್ಲಿ ಪೆನ್ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಹೊಂಗಿರಣ ತಂಡದ ನಿರ್ದೇಶಕಡಾ.ಸಾಸ್ವೆಹಳ್ಳಿ ಸತೀಶ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೊಂಗಿರಣ ತಂಡವು 30ನೇ ವರ್ಷದ ಕಾರ್ಯಕ್ರಮಗಳನ್ನು ಉದ್ಘಾಟಿಸಿದ್ದು, ಪೆನ್ ನಾಟಕವನ್ನುಶಿವಕುಮಾರ್ ಮಾವಲಿ ರಚಿಸಿದ್ದು, ಶ್ರೀಪಾದ್ ಭಟ್ ನಿರ್ದೇಶನ ಮಾಡಿದ್ದಾರೆ. ನಾಟಕದಲ್ಲಿಲಕ್ಷ್ಮೀನಿವಾಸ ಧಾರಾವಾಹಿಯ ವೆಂಕಿ ಪಾತ್ರಧಾರಿ ಚಂದ್ರಶೇಖರ ಶಾಸ್ತ್ರಿ, ಕಾಮಿಡಿ ಕಿಲಾಡಿಗಳು ಖ್ಯಾತಿಯಚಂದ್ರಶೇಖರ ಹಿರೇಗೋಣಿಗೆರೆ ಅಭಿನಯಿಸಿದ್ದಾರೆ. ಸನ್ನಿಧಿ ಟಿ.ಎನ್. ಸಂಗೀತ ನಿರ್ವಹಣೆ ವಹಿಸಿದ್ದು, ಬೆಳಕು ಹರಿಗೆ ಗೋಪಾಲಸ್ವಾಮಿ, ರಂಗನಿರ್ವಹಣೆ ಮಾನಸಾ ಸಂತೋಷ್ ಹಾಗೂ ವರುಣ್‌ಸಿಂಗ್ಇವರದ್ದಾಗದೆ ಎಂದರು.

ಗೌರವ ಪ್ರವೇಶ ದರ 100 ಮತ್ತು 50 ರೂ. ಇದ್ದು, ಸಭಾ ಕಾರ್ಯಕ್ರಮ ಇರುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾನಸಾ ಸಂತೋಷ್, ಗಿರಿಧರ್ ದಿನ್ನೇಮನೆ, ಮಂಜುನಾಥ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments