ಶಿವಮೊಗ್ಗ, ಮಾ.18: ಒಳಮೀಸಲಾತಿ ಹಂಚಿಕೆಯಲ್ಲಿ ಬಲಗೈ ಸಮುದಾಯಕ್ಕೆ ಆಗುತ್ತಿರುವಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯಸರ್ಕಾರಕ್ಕೆ ಆಗ್ರಹಿಸಿ ರಾಜ್ಯ ಬಲಗೈ ಸಮುದಾಯದಒಕ್ಕೂಟದಿಂದ ಮಾ.24 ರ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಹಕ್ಕೊತ್ತಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಛಲವಾದಿ ಮಹಾಸಭಾದ ಮುಖಂಡಬಿ.ಡಿ.ಸಾವಕ್ಕನವರ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ಹಂಚಿಕೆ ವಿಚಾರವಾಗಿ ಬಲಗೈ ಸಮುದಾಯಕ್ಕೆಅನ್ಯಾಯವಾಗುತ್ತಿದ್ದು ರೋಸ್ಟರ್ ಪದ್ಧತಿಯಲ್ಲಿ ಬದಲಾವಣೆ ಮಾಡಿ ಎಲ್ಲರಿಗೂ ಸಮಾನವಾಗಿ ಮೀಸಲಾತಿಹಂಚಿಕೆ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಒಳಮೀಸಲಾತಿ ನಿಲುವಿನಲ್ಲಿ ಶೇ.17 ರಷ್ಟು ಮಾಡಿದ್ದು, ಆದರೆ ಕರ್ನಾಟಕ ಉಚ್ಛನ್ಯಾಯಾಲಯವುಇದನ್ನು ಶೇ.೫೦ಕ್ಕಿಂತ ಮೀಸಲಾತಿಯನ್ನು ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಆದೇಶಿಸಿದ್ದಪ್ರಕಾರ ಶೇ.50 ಕ್ಕೆ ಸೀಮಿತಗೊಳಿಸಿದ್ದಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ.೧೫ರಷ್ಟು ಮಾತ್ರ ದೊರೆಯುತ್ತದೆ. ಈ ಸದರಿ ಶೇ.೧೫ರ ಕರ್ನಾಟಕ ಸರ್ಕಾರವು 101 ಜಾತಿಯಲ್ಲಿನ ಒಳಮೀಸಲಾತಿಯಾಗಿ ಹಂಚಿಕೆಮಾಡಬೇಕಾಗಿದೆ. ಆದರೆ ಸರ್ಕಾರವು ವಿಳಂಬ ನೀತಿ ಅನುಸರಿಸಿ ಅಸ್ಪಶ್ಯರಲ್ಲಿ ಒಬ್ಬರ ವಿರುದ್ಧಇನ್ನೊಬ್ಬರನ್ನು ಎತ್ತಿಕಟ್ಟಿದ ವಾತಾವರಣ ನಿರ್ಮಾಣವಾಗಿರುವುದು ದುರಾದೃಷ್ಟಕರ ಎಂದರು.
ನಮ್ಮ ರಾಜ್ಯದಲ್ಲಿ ಅಸ್ಪೃಶ್ಯರಂದರೆ ಹೊಲೆಯ, ಮಾದಿಗರ ನಿಜವಾದ ಅಸ್ಪೃಶ್ಯರುಫಲಾನುಭವಿಗಳಾಗಿರುತ್ತಾರೆ. ಇಲ್ಲಿಯವರೆಗೆ ಈ ಜಾತಿಗಳಿಗೆ ನ್ಯಾಯ ಸಿಕ್ಕಿಲ್ಲ. ಕಾರಣ ಅಸ್ಪೃಶ್ಯರು ಎಲ್ಲರೂಒಂದಾಗಿ ಹೋರಾಟ ನಡೆಸಿ ರಾಜ್ಯಸರ್ಕಾರದಿಂದ ನ್ಯಾಯ ಪಡೆಯುವ ದಿಸೆಯಲ್ಲಿ ನಮ್ಮ ಹೋರಾಟ ಈನಿಲುವನ್ನು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ನಮ್ಮ ಜಿಲ್ಲಾ ಸಮಾಜದ ನಿಲುವನ್ನು ತಿಳಿಸಬೇಕಾಗಿದೆಎಂದರು.
ಹೊಲೆಯ–ಛಲವಾದಿ ತತ್ಸಮಾನಾಂತರ ಬಲಗೈ ಸಮಾಜಕ್ಕೆ ಒಳಮೀಸಲಾತಿಯಲ್ಲಿ ನ್ಯಾಯ ಸಮ್ಮತವಾದಹಂಚಿಕೆಯಾಗಬೇಕೆಂಬುದೇ ನಮ್ಮ ಹಕ್ಕೊತ್ತಾಯ. ಈ ಹಿಂದೆ ಸರ್ಕಾರಿ ಆದೇಶದ ಒಳಮೀಸಲಾತಿಅನ್ವಯ ಬಿಂದುಗಳನ್ನು ನಿಗದಿಪಡಿಸಿದಲ್ಲಿ 1 9, 13 ಈ ರೀತಿಯಾಗಿ ಅವೈಜ್ಞಾನಿಕವಾಗಿ ಮಾಡಿದ್ದು, ಎಲ್ಲಾ101 ಜಾತಿಗಳಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದರು.
ಆದ್ದರಿಂದ ಸದರಿ ಅಸಮಾನತೆಯಲ್ಲಿ ನಿಗದಿಪಡಿಸಿರುವ ಅಂಶಗಳು ಮರುಕಳಿಸಬಾರದಾಗಿ ನಮ್ಮ ಮನವಿಹಾಗೂ ನಮ್ಮ ಹೋರಾಟವು ಯಾವುದೇ ಸಹೋದರ ಜಾತಿಗಳ ವಿರುದ್ಧ ಇರುವುದಿಲ್ಲ. ಎಲ್ಲಾ ಅಸ್ಪೃಶ್ಯಬಂಧುಗಳು ಇಲ್ಲಿಯವರೆಗೆ ಹೇಗೆ ಸಹೋದರರಂತೆ ಇದ್ದೇವೋ ಹಾಗೆ ಉಳಿಯಬೇಕೆಂದು ನಮ್ಮಸಮಾಜದ ನಿಲುವು. ನ್ಯಾ|| ನಾಗಮೋಹನ್ದಾಸ್ ಆಯೋಗದ ವರದಿಯಲ್ಲಿನ ಅಂಶಗಳು ಪರಿಶಿಷ್ಟಜಾತಿಯ ಬಲಗೈ ಸಮಾಜದ ತತ್ಸಮ ಜಾತಿಗಳಿಗೆ ನ್ಯಾಯಬದ್ಧವಾಗಿ ಗಣತಿಯಾಗದೆ ಅನ್ಯಾಯವಾಗಿದೆ. ಸರ್ಕಾರವು ಈ ನ್ಯೂನ್ಯತೆಯನ್ನು ಸರಿಪಡಿಸಿ ಆದೇಶ ಮಾಡಬೇಕೆಂದು ಆಗ್ರಹಿಸಿದರು.
ಮಾ.25 ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಹಕ್ಕೊತ್ತಾಯ ಕಾರ್ಯಕ್ರಮದಲ್ಲಿ ರಾಜ್ಯದಿಂದಸುಮಾರು 5 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಶಿವಮೊಗ್ಗ ಜಿಲ್ಲೆಯಿಂದಲೂ ಸಹ ಸಾವಿರಾರು ಸಂಖ್ಯೆಯಲ್ಲಿಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಕುಮಾರಸ್ವಾಮಿ, ಗೌರವಾಧ್ಯಕ್ಷಹೆಚ್.ಸಿದ್ದಪ್ಪ, ಉಪಾಧ್ಯಕ್ಷೆ ಲಲಿತಮ್ಮ, ಪ್ರಧಾನ ಕಾರ್ಯದರ್ಶಿ ಡಿ.ಕಾಂತರಾಜ್ ಇನ್ನಿತರರುಉಪಸ್ಥಿತರಿದ್ದರು.
