Homeಜಿಲ್ಲೆSSLC ಪರೀಕ್ಷೆಗೆ ನಗರದಲ್ಲಿ ಸಕಲ ಸಿದ್ದತೆ

SSLC ಪರೀಕ್ಷೆಗೆ ನಗರದಲ್ಲಿ ಸಕಲ ಸಿದ್ದತೆ

Spread the love

ಶಿವಮೊಗ್ಗ, ಮಾ.17: ನಾಳೆ ನಡೆಯಲಿರುವ 2026 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಶಿವಮೊಗ್ಗ ನಗರ ಸಿದ್ದತೆಗೊಂಡಿದ್ದು, ಕ್ಷೇತ್ರ ಶಿಕ್ಷಣ ಇಲಾಖೆಯು ಪರೀಕ್ಷೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೆ ಅಡತಡೆಯಾಗದಂತೆ ಪರೀಕ್ಷಾ ನಡೆಸಲು ತಯಾರಿ ಮಾಡಿಕೊಂಡಿದೆ.

ಶಿವಮೊಗ್ಗ ತಾಲ್ಲೂಕಿನಲ್ಲಿ ಒಟ್ಟು 20 ಪರೀಕ್ಷಾ ಕೇಂದ್ರ ಒಳಗೊಂಡಿದೆ, 6612 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.

6 ಮಾರ್ಗದಿಂದ ನಗರಕ್ಕೆ ಪ್ರಶ್ನೆಪತ್ರಿಕೆ ಬರಲಿದೆ. ಜಿಲ್ಲಾ ಖಜಾನೆಯಿಂದ ಪೊಲೀಸ್ ಬಂದೋಸ್ತ್ ನಲ್ಲಿ 7:45 ಕ್ಕೆ ಪ್ರಶ್ನೆಪತ್ರಿಕೆ ವಾಹನ ಹೊರಡಲಿದ್ದು, 9:30 ಕ್ಕೆ ಪರೀಕ್ಷೆ ಕೇಂದ್ರಕ್ಕೆ ತಲುಪಲಿದೆ.

ಪರೀಕ್ಷೆ ಕೇಂದ್ರ ಮೇಲ್ವಿಚಾರಕರಾಗಿ ವಿವಿಧ ಇಲಾಖೆಯ ಅಧಿಕಾರಗಳನ್ನು ನೇಮಕ ಮಾಲಾಗಿದ್ದು, 20 ಪರೀಕ್ಷೆ ಕೇಂದ್ರದಲ್ಲಿ 20 ಅಧಿಕಾರಿಗಳನ್ನು ನೇಮಿಸಲಾಗಿದೆ. 20 ಪರೀಕ್ಷಾ ಕೇಂದ್ರಕ್ಕೆ 20 ಜನ ಪೊಲೀಸ್ ಮತ್ತು 6 ಮಾರ್ಗಕ್ಕೆ 6 ಜನ ಪೊಲೀಸ್ ನೇಮಕ ಮಾಡಲಾಗಿದೆ ಎಂದು ಬಿಇಓ ರಮೇಶ್ ಮಾಹಿತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments