ಶಿವಮೊಗ್ಗ, ಮಾ.18: ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಸಮಿತಿಯಿಂದ ಮಾ.21 ರಂದು ಸವಳಂಗರಸ್ತೆಯಲ್ಲಿರುವ ಕೊಮ್ಮನಾಳು ಸಮೀಪದ ಸೋಮಿನಕೊಪ್ಪ ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ 7ನೇ ಜಾನಪದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದುಜಾನಪದ ಪರಿಷತ್ನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.21 ರಂದು ಸಂಜೆ 5 ಗಂಟೆಗೆ ಸೋಮಿನಕೊಪ್ಪ ಗ್ರಾಮದಹೆಬ್ಬಾಗಿಲಿನಿಂದ ಸಮ್ಮೇಳನಾಧ್ಯಕ್ಷರೊಂದಿಗೆ ಊರಿನ ಗಣ್ಯರು, ಸಂಘ, ಸಂಸ್ಥೆಗಳು, ಕನ್ನಡಮನಸ್ಸುಗಳೊಂದಿಗೆ ವಿವಿಧ ಜಾನಪದ ಕಲಾತಂಡಗಳ ಜಾನಪದ ನಡಿಗೆ ಕಾರ್ಯಕ್ರಮ ನಡೆಯಲಿದ್ದು, ಈಕಾರ್ಯಕ್ರಮಕ್ಕೆ ಶಾಸಕಿ ಶಾರದಾಪೂರ್ಯನಾಯ್ಕ್ ಚಾಲನೆ ನೀಡಲಿದ್ದು, ಶ್ರೀ ರಾಮಾಂಜನೇಯ ಸೇವಾಸಮಿತಿ ಅಧ್ಯಕ್ಷ ಕಾಂತರಾಜ್ ಸೋಮಿನಕೊಪ್ಪ ಉಪಸ್ಥಿತರಿರುವರು ಎಂದರು.
ಸಂಜೆ 6 ಗಂಟೆಗೆ ಸಮ್ಮೇಳನವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದು, ಕರ್ನಾಟಕ ಜಾನಪದಪರಿಷತ್ ಅಧ್ಯಕ್ಷ ಹಾಗೂ ಖ್ಯಾತ ಜಾನಪದ ವಿದ್ವಾಂಸರಾದ ಡಾ. ಹಿ.ಜಿ. ಬೋರಲಿಂಗಯ್ಯ ಅಧ್ಯಕ್ಷತೆವಹಿಸಲಿದ್ದು, ಡಿ.ಮಂಜುನಾಥ್ ಆಶಯ ನುಡಿಗಳನ್ನಾಡಲಿದ್ದಾರೆ ಎಂದರು.
ಬೆಂಗಳೂರಿನ ಗೀತಾಭಟ್ ಇವರು ಸಂಯೋಜಿಸಿದ ದೀವರ ಸಂಸ್ಕೃತಿ ಅನಾವರಣದ ಹಸೆ ಚಿತ್ತಾರಪುಸ್ತಕವನ್ನು ಶಾರದಾಪೂರ್ಯನಾಯ್ಕ್ ಹಾಗೂ ಬೆಂಗಳೂರಿನ ಖ್ಯಾತ ಜಾನಪದ ಗಾಯಕ ಡಾ. ಅಪ್ಪಗೆರೆತಿಮ್ಮರಾಜು, ಸಮ್ಮೇಳನಾಧ್ಯಕ್ಷ ಶಿವಮೊಗ್ಗದ ಖ್ಯಾತ ಜಾನಪದ ಗಾಯಕ ಕೆ.ಯುವರಾಜ್, ಕರ್ನಾಟಕಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಕಣ್ಣೂರು ಟಾಕಪ್ಪ ಬಿಡುಗಡೆ ಮಾಡುವರು.
ಮುಖ್ಯ ಅತಿಥಿಯಾಗಿ ಕಾಂತರಾಜ್ ಸೋಮಿನಕೊಪ್ಪ ಆಗಮಿಸಲಿದ್ದು, ಕರ್ನಾಟಕ ಜಾನಪದ ಪರಿಷತ್ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ ಸಮ್ಮೇಳನ ಅಧ್ಯಕ್ಷರ ಪರಿಚಯಮಾಡಲಿದ್ದಾರೆ ಎಂದರು.
ಪರಿಷತ್ನ ಜಿಲ್ಲಾ ಕೋಶಾಧ್ಯಕ್ಷ ಯು.ಮಧುಸೂದನ್ ಐತಾಳ್, ಉಪಾಧ್ಯಕ್ಷ ಡಾ.ಕೆ.ಜಿ.ವೆಂಕಟೇಶ್ಸೋಮಿನಕೊಪ್ಪದ ಮುಖಂಡರು ಭಾಗವಹಿಸಲಿದ್ದಾರೆ. ಅಂದು ಸಂಜೆಯಿಂದ ಮಧ್ಯರಾತ್ರಿವರೆಗೆನಡೆಯಲಿರುವ ಸಮ್ಮೇಳನದಲ್ಲಿ ಸುಮಾರು ೨೨ ಜನಪದ ಕಲಾತಂಡಗಳು ಭಾಗವಹಿಸುತ್ತಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಮೂರ್ತಿ ಹಿಳ್ಳೋಡಿ, ಡಿ.ಗಣೇಶ್, ಬಾಲರಾಜ್ ಚುರ್ಚುಗುಂಡಿ, ಪರಶುರಾಮ್ಮಟ್ಟೇರ, ಡಾ.ಭಾಗ್ಯಲಕ್ಷ್ಮಿ ಇನ್ನಿತರರು ಉಪಸ್ಥಿತರಿದ್ದರು.
