Homeಜಿಲ್ಲೆಹುಡುಗಿಗೆ ಸಂದೇಶ ಕಳಿಸಿದಕ್ಕೆ ಬೆದರಿಕೆ- ಹುಡುಗ ಆತ್ಮಹತ್ಯೆ

ಹುಡುಗಿಗೆ ಸಂದೇಶ ಕಳಿಸಿದಕ್ಕೆ ಬೆದರಿಕೆ- ಹುಡುಗ ಆತ್ಮಹತ್ಯೆ

Spread the love

ಶಿವಮೊಗ್ಗ, ಏ.1: ಹುಡುಗಿಗೆ ಸಂದೇಶ ಕಳಿಸುತ್ತಿದ್ದ ಕಾರಣ ಬೆದರಿಕೆ ಹಾಕಿದಕ್ಕೆ ಹುಡುಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ದಿನಾಂಕ: 05-05-2021 ರಂದು ಸಂಜೆ ಭದ್ರಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮದ ರುದ್ರೇಶಪ್ಪರವರ ಅಣ್ಣನ ಮಗನಾದ ನವೀನ್ ಕುಮಾರ್ (22 )ಈತನಿಗೆ ಗ್ರಾಮದ ಆರೋಪಿತರಾದ ನಾಗರಾಜ್ ರಾವ್ (26) ಮತ್ತು ಮಂಜೋಜಿ ರಾವ್ (50)ರವರು, ನಮ್ಮ ಮನೆ ಹುಡುಗಿಗೆ ಸಂದೇಶ ಕಳುಹಿಸುವುದು ಮಾಡುತ್ತಿದ್ದಿಯಾ ಎಂದು ಅವಾಚ್ಯ ಶಬ್ಧಗಳಿಂದ ಬೈದು, ಕೈಗಳಿಂದ ಹೊಡೆದು, ನವೀನ್ ಕುಮಾರ್ ಮೊಬೈಲ್‌ ಅನ್ನು  ತೆಗೆದುಕೊಂಡು, ನೀನು ಜೀವ ತೆಗೆದುಕೊಳ್ಳಬೇಕು ಇಲ್ಲವಾದರೆ ಊರು ಬಿಟ್ಟು ಹೋಗಬೇಕು ಎಂದು ಹೆದುರಿಸಿದ್ದು, ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ನವೀನ್ ಕುಮಾರ್ ಈತನು ದಿನಾಂಕ: 06-05-2021 ರಂದು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಾಗರಾಜ್ ರಾವ್

ಮಂಜೋಜಿ ರಾವ್

ನವೀನ್ ಕುಟುಂಬದವರು ಈ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಹೊಳೆಹೊನ್ನುರು ಪೊಲೀಸ್ ಠಾಣೆ ಗುನ್ನೆ ನಂ: 134/2021 ಕಲಂ 341, 504, 323, 306 ಸಹಿತ34 ಐಪಿಸಿ ರಿತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಪಿಎಸ್ಐ ಮೋಹನ್ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ.ಪಿ ವಾದ ಮಂಡಿಸಿದ್ದು, ಭದ್ರಾವತಿಯ ಘನ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ರವರು ದಿನಾಂಕ:01-04-2026 ರಂದುಆರೋಪಿತರಿಗೆ ಕಲಂ  341,504,323,306 ಸಹಿತ 34 ಐಪಿಸಿ ರೀತ್ಯಾ 10 ವರ್ಷ ಕಠಿಣ ಕಾರಾವಾಸ ಮತ್ತು ಒಟ್ಟು 2,23,000/- ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತದೆ.

ಮೃತ ನಾಗರಾಜ್ ರವರ ತಂದೆ ಗುಡುಮಲ್ಲಪ್ಪ ರವರಿಗೆ 1,50,000/- ರೂ ಪರಿಹಾರ ನೀಡಲು ಆದೇಶಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments