Homeಜಿಲ್ಲೆಅನಿಷ್ಟ ಪದ್ದತಿಯನ್ನು ಹೊಗಲಾಡಿಸಲು ಬಾಬುಜೀ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು: ಚನ್ನಬಸಪ್ಪ

ಅನಿಷ್ಟ ಪದ್ದತಿಯನ್ನು ಹೊಗಲಾಡಿಸಲು ಬಾಬುಜೀ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು: ಚನ್ನಬಸಪ್ಪ

Spread the love

ಶಿವಮೊಗ್ಗ,ಮಾ.5: ಬಿದ್ದವರನ್ನು ಮೇಲೆತ್ತುವ ಮೂಲಕ ಈ ದೇಶದಲ್ಲಿದ್ದ ಅನಿಷ್ಟ ಪದ್ದತಿಯನ್ನು ಹೊಗಲಾಡಿಸಲು ಬಾಬು ಜಗಜೀವನ್ ರಾಮ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದು ಶಾಸಕ ಎಸ್. ಎನ್ . ಚನ್ನಬಸಪ್ಪ ಸ್ಮರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆ ಸಹಯೋಗದೊಂದಿಗೆ ಭಾನುವಾರ ನಗರ ಕುವೆಂಪು ರಂಗಮಂದಿರದಲ್ಲಿ ಆಯೋಜಿದ್ದ ಹಸಿರು ಕ್ರಾಂತಿ ಹರಿಕಾರ, ಭಾರತದ ಮಾಜಿ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜಕ್ಕಾಗಿ ಬದುಕಿದ್ದವರನ್ನು ಸ್ಮರಿಸುವುದು ನಮ್ಮ ಸಂಸ್ಕೃತಿ ಆಗಿದೆ. ಇದು ಒಳ್ಳೆಯ ಬೆಳೆಯವಣಿಗೆಯ ಸಂಕೇತವು ಕೂಡ, ಶ್ರೇಷ್ಠ ವ್ಯಕ್ತಿತ್ವ ಹೊಂದಿರುವ ಬಾಬು ಜಗಜೀವನ್ ರಾಮ್ ಬಿದ್ದವರನ್ನು ಮೇಲೆತ್ತುತ್ತ ಬಂದವರು. ಈ ದೇಶದ ಅನಿಷ್ಟ ಪದ್ದತಿಯನ್ನು ಹೊಗಲಾಡಿಸಿದ ಮೊದಲಿಗರು. ಮಲ ಹೊರುವ ಪದ್ದತಿಯನ್ನು ನಿಷೇಧ ಮಾಡುವ ಆಲೋಚನೆ ಹೊಂದಿದ್ದ ಮಾತೃ ಹೃದಯದವರು. ಬಾಬು ಜಗಜೀವನ್ ರಾಮ್ ಎಂತಹ ಕಠಿಣ ಪರಿಸ್ಥಿತಿ ಬಂದರು ಅದನ್ನು ಧೈರ್ಯವಾಗಿ ಎದುರಿಸುವ ಮನಸ್ಥತಿಯನ್ನು ಹೊಂದಿದ್ದರು ಎಂದರು.

1971 ರಲ್ಲಿ ಚೀನಾ ವಿರುದ್ದ ಯುದ್ದದಲ್ಲಿ ಅವರ ತೆಗೆದುಕೊಂಡ ನಿರ್ಧಾರ ಐತಿಹಾಸಿಕ. ತನಗಾಗಿ ಬದುಕದೆ ಸದಾ ಈ ಸಮಾಜದ ಶೋಷಿತ ವರ್ಗಕ್ಕಾಗಿ ಹಾಗೂ ರಾಷ್ಟ್ರಕ್ಕಾಗಿ ಬದುಕಿದರು. ನಾವೆಲ್ಲ ಬಾಬು ಜಗಜೀವನ್ ರಾಮ್ ಅವರು ಹಾಕಿಕೊಟ್ಟಿರುವ ಇಂತಹ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕಳವಕಟ್ಟಿ ಮಾತನಾಡಿ, ಬಾಬು ಜಗಜೀವನ್ ರಾಮ್ ಅವರು ಸಮಾಜದ ಪರಿವರ್ತನೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಇದಲ್ಲದೆ ನಮ್ಮ ಹಕ್ಕನ್ನು ಹೋರಾಟದಿಂದಲೇ ಪಡೆಯಬೇಕು ಎಂದು ತಿಳಿಸಿದ್ದಾರೆ ಎಂದರು.

1936 ರಿಂದ 1986 ರವರೆಗೆ ಅಂದರೆ ಸುಮಾರು 50 ವರ್ಷಗಳ ಕಾಲ ಶಾಸಕಾಂಗದಲ್ಲಿ ನಿರಂತರವಾಗಿ ಕೆಲಸ ಮಾಡಿದ ದಾಖಲೆಯನ್ನು ಬಾಬುಜೀ ಅವರು ಹೊಂದಿದ್ದಾರೆ. ಕಾರ್ಮಿಕರಿಗೆ ತಮ್ಮ ಹಕ್ಕುಗಳ ಮನವರಿಕೆ ಹಾಗೂ ಅವರು ಗೌರವದಿಂದ ಜೀವನ ನಡೆಸುವ ಕಾನೂನು, ಹಸಿರು ಕ್ರಾಂತಿ ಮಾಡಿ ಭಾರತ ಸ್ವಾತಂತ್ರವಾಗಿ ಆಹಾರವನ್ನು ಉತ್ಪಾದಿಸಲು ಸಹಕಾರಿ, 1971 ರಲ್ಲಿ ಬಾಂಗ್ಲಾದೇಶ ವಿಮೋಚನೆಗೆ ಬಹುಮುಖ್ಯ ಪಾತ್ರ ವಹಿಸಿದ್ದು ಹಾಗೂ ಇದರ ಜೊತೆಗೆ ಸಂವಿಧಾನ ಕರುಡು ಸಮಿತಿಯ ಸದಸ್ಯರು ಆಗಿದ್ದರು. ಈ ಮೂರು ಆಯಾಮದಲ್ಲಿ ಬಾಬು ಜಗಜೀವನ್ ರಾವ್ ಅವರ ರಾಜಕೀಯ ಜೀವನನ್ನು ಕಾಣಬಹುದು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ .ಬಿ, ಉಪವಿಭಾಗಿಧಿಕಾರಿ ಸತ್ಯನಾರಾಯಣ, ತಹಸೀಲ್ದಾರ್ ರಾಜೀವ್, ಮಹಾನಗರ ಪಾಲಿಕೆ ಆಯುಕ್ತರು ಮಾಯಣ್ಣ ಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲೇಶಪ್ಪ, ಜಿಲ್ಲಾ ಪರಿಶಿಷ್ಟಪಂಗಡ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ವಿವಿಧ ಸಂಘಟನೆಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments