Homeಜಿಲ್ಲೆಮಳೆ ಹಾನಿ- ಕೆ.ಈ. ಕಾಂತೇಶ್ ಸ್ಥಳಕ್ಕೆ ಭೇಟಿ

ಮಳೆ ಹಾನಿ- ಕೆ.ಈ. ಕಾಂತೇಶ್ ಸ್ಥಳಕ್ಕೆ ಭೇಟಿ

Spread the love

ಶಿವಮೊಗ್ಗ ,ಏ.9: ಇತ್ತೀಚಿಗೆ ನಗರದ ವಾರ್ಡ್ ನಂ.7 ಆದರ್ಶ ಕಾಲೋನಿಯಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದಂತಹ ಲಕ್ಷ್ಮಿ ಮತ್ತು ಯುವ ಮುಖಂಡ ಕೆ.. ಕಾಂತೇಶ್ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಗಮನಿಸಿ:ದೇಶಕ್ಕೆ ಸೇವೆ ಸಲ್ಲಿಸುವ ಅಸಂಘಟಿತ ಕಾರ್ಮಿಕರಿಗೆ ಮೊದಲ ಸ್ಥಾನ ನೀಡಬೇಕು: ಬಿವೈಆರ್


ಸ್ಥಳದಲ್ಲಿ
ಹಾಜರಿದ್ದ ಆದರ್ಶ ಕಾಲೋನಿಯ ಮಳೆ ಹಾನಿಗೊಳಗಾದ ನಿವಾಸಿಗಳ ಸಮಸ್ಯೆಗಳನ್ನು ವಿಚಾರಿಸಿದರು. ಇಲ್ಲಿ ರಾಜಕಾಲುವೆ ಮತ್ತು 3 ಚರಂಡಿಗಳು ಸಂಪೂರ್ಣ ಮಳೆ ನೀರಿನಿಂದ ಉಕ್ಕಿ ಹರಿದು, ಸುಮಾರು 25-30 ಮನೆಗಳ ಒಳಗೆ 5 ರಿಂದ 6 ಅಡಿ ಮಳೆ ನೀರು ನುಗ್ಗಿ ಹಾನಿಗೊಳಗಾದ ಬಗ್ಗೆ ವಿಚಾರಿಸಿ ತಿಳಿದುಕೊಂಡರು.

ಆದರ್ಶ ಕಾಲೋನಿ ನಿವಾಸಿಗಳಿಗೆ ಪ್ರತಿ ವರ್ಷ ಅತಿಯಾದ ಮಳೆಯಿಂದ ಹಾನಿ ಸಂಭಂವಿಸುತ್ತಿತ್ತು, ಕೂಡಲೇ ಆದರ್ಶ ಕಾಲೋನಿಯ 2 ಡೆತ್ ಸ್ಟ್ರಾಬ್ ಗಳನ್ನ ಕನಿಷ್ಠ 2 1/2 ಅಡಿ ಎತ್ತರಕ್ಕೆ ಏರಿಸಿ ಸಮಸ್ಯೆಯನ್ನು ಬಗೆಹರಿಸಲು ಕಾಂತೇಶ್ ರವರು ಸ್ಥಳಕ್ಕೆ ಆಗಮಿಸಿ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದಂತಹ ಲಕ್ಷ್ಮಿ ಅವರನ್ನು ಕೋರಿದರು.

ಸಂದರ್ಭದಲ್ಲಿ ಹೋರಾಟಗಾರರಾದ ಕಲ್ಲೂರು ಮೇಘರಾಜ, ಕೆ ನಾಗರಾಜ, ಶ್ರೀಮತಿ ಜಯಮ್ಮ, ಶ್ರೀಮತಿ ಲತಾ, ಶ್ರೀಮತಿ ರಶ್ಮಿ, ಪೂವಯ್ಯ ಮುಂತಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments