Homeಜಿಲ್ಲೆಬುದ್ದ ಶೋಷಣೆಯನ್ನು ಒಪ್ಪಲಿಲ್ಲ: ಚಂದ್ರಶೇಖರ ಎನ್

ಬುದ್ದ ಶೋಷಣೆಯನ್ನು ಒಪ್ಪಲಿಲ್ಲ: ಚಂದ್ರಶೇಖರ ಎನ್

Spread the love

ಶಿವಮೊಗ್ಗ, ಮೇ.1: ಸದಾ ಹಿಂಸೆಯನ್ನು ವಿರೋಧಿಸುತ್ತಾ ಬಂದ ಬುದ್ದ  ಮನುಷ್ಯ ಮನುಷ್ಯನ ಮೇಲೆ ನಡೆಸುತ್ತಿದ್ದ ಶೋಷಣೆಯನ್ನು ಯಾವತ್ತು ಒಪ್ಪಲಿಲ್ಲ ಎಂದು ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಎನ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಶುಕ್ರವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಭಗವಾನ್ ಶ್ರೀ ಬುದ್ದ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ರೂಢಿಗತ ಬದುಕನ್ನು ಪ್ರಶ್ನಿಸುತ್ತಾ ಬಂದಿದ್ದ ಬುದ್ದ, ಮನುಷ್ಯನ ಮನಸ್ಸಿನ ಸಂಸ್ಕೃತಿಯನ್ನು ಉನ್ನತಿಕರಿಸುವಲ್ಲಿ ತುಡಿಯುತ್ತಿದ್ದ.  ಈ ಉದ್ದೇಶದಿಂದ ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಂಡು ಹಾಗೂ ಇದರ ಬಗ್ಗೆ ಜಾಗೃತಿ ಮೂಡಿಸಿದ ಎಂದು ಹೇಳಿದರು.

ನಮ್ಮಲ್ಲಿ ಮಾನಸಿಕ ಸಂಸ್ಕೃತಿಯನ್ನು ಹೆಚ್ಚಿಸಿಕೊಂಡರೆ ಮಾತ್ರ ಬುದ್ದ ಕಾಣುತ್ತಾನೆ. ಹಾಗಾಗಿ ಹೆಚ್ಚಿನ ಜ್ಞಾನವನ್ನು ವೃದ್ದಿಸಿಕೊಳ್ಳಬೇಕು. ಅದಕ್ಕೆ ಅಕ್ಷರಗಳನ್ನು ಎದೆಗೆ ಇಳಿಸಿಕೊಳ್ಳಬೇಕು. ಈ ಮೂಲಕ ವೈಜ್ಞಾನಿಕವಾಗಿ ಚಿಂತನೆಗೆ ತೊಡಗಿಕೊಳ್ಳಬಹುದು  ಎಂದರು.

ಬುದ್ದನಿಗೆ ಹುಟ್ಟು, ಬದುಕು, ಕಾಯಿಲೆ,ಸಾವು ತುಂಬಾ ಕಾಡಿತ್ತು. ಈ ಕುರಿತು ಸದಾ ಚಿಂತನೆಯಲ್ಲಿ ತೊಡಗಿಕೊಂಡಿದ್ದ ತಾತ್ವಿಕವಾಗಿ ಪ್ರಶ್ನಿಸುತ್ತಿದ್ದ. ಬುದ್ದನ ಈ ಬುದ್ದಿವಂತಿಕೆ ನೋಡಿ ಆತನ ಸಮಕಾಲೀನವರು ಬುದ್ದ, ಪ್ರಬುದ್ದ ಎಂದೆಲ್ಲಾ ಹೆಸರು ಇಟ್ಟರು ಎಂದು ತಿಳಿಸಿದರು.

ಬುದ್ದ ಇಡೀ ಮನುಕುಲಕ್ಕೆ ಆಸೆಯೇ ದುಃಖಕ್ಕೆ ಮೂಲ ಎಂದ ಸಂದೇಶ ಕೊಡುತ್ತಾನೆ. ಹಿಂಸೆಯನ್ನು ವಿರೋಧ ಮಾಡುತ್ತಾನೆ. ದಾನ ಕೊಡುವುದನ್ನು ರೂಢಿಸಿಕೊಳ್ಳಬೇಕು. ಸಾವಿಲ್ಲದೆ ಇರುವ ಮನೆಯಿಲ್ಲ ಎಂಬ ಸತ್ಯವನ್ನು ತಿಳಿಸಿದ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ಅಧ್ಯಕ್ಷ ಸಿ. ಎಸ್.  ಚಂದ್ರಭೂಪಾಲ್ , ಬುದ್ದ ಧಮ್ಮಾಂಕರ ಟ್ರಸ್ಟ್ , ಪ್ರೊ. ರಾಚಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್ ಉಮೇಶ್, ಎಸಿ ಕಚೇರಿಯ ಲಿಂಗರಾಜರು  ಇದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments