ಶಿವಮೊಗ್ಗ , ಮೇ.11 : ಗೋಪಾಲಗೌಡ ಬಡಾವಣೆಯಲ್ಲಿರುವ ಚಂದನ ಪಾರ್ಕ್ ಭಾನುವಾರ ಸ್ವಚ್ಛವಾಯಿತು. ಯೂತ್ ಫಾರ್ ಸೇವಾ ಎಂಬ ಸ್ವಯಂ ಸೇವಾ ತಂಡದವರು ಇಡೀ ಪಾರ್ಕ್ ಅನ್ನು ಸ್ವಚ್ಛಗೊಳಿಸಿದರು.
ಸೇವೆಯೇ ಮೊದಲ ಆದ್ಯತೆ. ಪರಿಸರಕ್ಕೆ ಪ್ರಾಮುಖ್ಯತೆ ಹಸಿರೇ ನಮ್ಮ ಉಸಿರು ಎಂಬ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡ ಈ ಎನ್‌ಜಿಓ ಸಂಸ್ಥೆ ಪಾರ್ಕ್ ಅನ್ನು ಸ್ವಚ್ಛಗೊಳಿಸುವುದರ ಜೊತೆಗೆ ಇಡೀ ಪಾರ್ಕ್ ನಲ್ಲಿರುವ ಪ್ಲಾಸ್ಟಿಕ್ ವಸ್ತುಗಳನ್ನು ಆಯ್ದು ಬೇರ್ಪಡಿಸಿದರು.
ಗಮನಿಸಿ:ಸಂಪತ್‌ಕುಮಾರ್ ಗೆ ಪಿಹೆಚ್‌ಡಿ ಪದವಿ: ಬಡತನದಲ್ಲಿ ಅರಳಿದ ಪ್ರತಿಭೆ
ಈ ಸಂದರ್ಭದಲ್ಲಿ ಮಾತನಾಡಿದ ಪಾರ್ಕ್ ನ ಕಾರ್ಯದರ್ಶಿ ಎಲ್.ಗುರುರಾಜ್, ಎನ್‌ಜಿಒ ಸಂಸ್ಥೆಗಳು ಕೂಡಾ ಪಾರ್ಕ್ ಗಳನ್ನು ಸ್ವಚ್ಛಗೊಳಿಸುವ ಮೂಲಕ ಹಸಿರು ಪ್ರೇಮ ಮೆರೆಯುತ್ತಿರುವುದು ಸಂತೋಷದ ವಿಷಯವಾಗಿದೆ. ಈಗಾಗಲೇ ಈ ಚಂದನ ಪಾರ್ಕ್ ಇಡೀ ನಗರದಲ್ಲಿಯೇ ಒಂದು ಉತ್ತಮ ಪಾರ್ಕ್ ಎಂದು ಹೆಸರಾಗಿದ್ದು, ಸ್ಥಳೀಯ ಶಾಸಕರ ಮತ್ತು ಸೂಡಾ ನೆರವಿನಿಂದ ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಯೂತ್ ಫಾರ್ ಸೇವಾದ ಜಿಲ್ಲಾ ಸಂಯೋಜಕ ಅಶ್ರಿತ್ ಎನ್.ಎಸ್., ಕೋಪ್ರೆಸಿಡೆಂಟ್, ಸುಮಂತ್ ಎನ್. ಸಿಟಿ ಕೋ ಆರ್ಡಿನೇಟರ್, ಅಜಯಕುಮಾರ್ ಹೆಚ್. ಹಾಗೂ ಪ್ರಮುಖರಾದ ಸುಮಂತ್, ರೋಷಿಣಿ ಹರ್ಷ ಅರ್.ಯು. ದಿನೇಶ್ ಎಸ್., ಅಜಯಕುಮಾರ್ ಹೆಚ್.ಡಿ., ಹರ್ಷಿತಾ ಎಂ.ಆರ್., ಭೂಮಿಕಾ, ಸಾನಿಕಾ, ವಿಘ್ನೇಶ್, ದೇವಿಪ್ರಸಾದ್, ಭರತ್ ಕೆ.ಎಸ್., ತನಿಶಾ, ಅಮೃತಾ, ನಾಗಪ್ರಸಾದ್, ಧನುಷ್, ಪಾರ್ಕ್ ಪದಾಧಿಕಾರಿಗಳಾದ ಶಿವಕುಮಾರ್, ರೈಲ್ವೆ ಪ್ರಸಾದ್, ಭೋರೇಗೌಡ, ಸೇರಿದಂತೆ ಮುಂತಾದವರು ಇದ್ದರು.
