Homeಜಿಲ್ಲೆಸಂಪತ್‌ಕುಮಾರ್ ಗೆ ಪಿಹೆಚ್‌ಡಿ ಪದವಿ: ಬಡತನದಲ್ಲಿ ಅರಳಿದ ಪ್ರತಿಭೆ

ಸಂಪತ್‌ಕುಮಾರ್ ಗೆ ಪಿಹೆಚ್‌ಡಿ ಪದವಿ: ಬಡತನದಲ್ಲಿ ಅರಳಿದ ಪ್ರತಿಭೆ

Spread the love

ಶಿವಮೊಗ್ಗ .ಮೇ.11 : ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಸಂಪತ್‌ಕುಮಾರ್ ಅವರಿಗೆ ಬಾರಿ ಪಿಹೆಚ್‌ಡಿ ಪದವಿ ಲಭಿಸಿದೆ.

ಸಂಪತ್‌ಕುಮಾರ್ ಅವರು ಬರೆದ ಸಾಹಿತ್ಯ ಕೃತಿಯಾಧಾರಿತ ಟಿ.ಎಸ್.ನಾಗಾಭರಣ ಅವರ ಸಿನಿಮಾಗಳ ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ದೊರಕಿದ್ದು, ಇವರಿಗೆ ಕುವೆಂಪು ವಿವಿ ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕರಾಗಿರುವ ಪ್ರೊ. ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಮಾರ್ಗದರ್ಶನ ಮಾಡಿದ್ದರು. ಸಂಪತ್ ಕುಮಾರ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಗೊಡಬನಾಳ್ ಗ್ರಾಮದ ದಿಮಂಜಪ್ಪ ಹಾಗೂ ದಿ.ಪಾರ್ವತಮ್ಮ ಎಂಬ ದಂಪತಿ ಪುತ್ರರಾಗಿದ್ದಾರೆ. ಇತ್ತೀಚೆಗೆ ನಡೆದ 35 ನೇ ಕುವೆಂಪು ಘಟಿಕೋತ್ಸವದಲ್ಲಿ ರಾಜ್ಯಪಾಲರು ಸಂಪತ್ ಕುಮಾರ್ ಅವರಿಗೆ ಪದವಿ ಪ್ರದಾನ ಮಾಡಿದರು.

ಗಮನಿಸಿ:“ಶೂದ್ರ ಬಂಡಾಯ” ಕೃತಿ ಲೋಕಾರ್ಪಣೆ. ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ: ಮಧು ಬಂಗಾರಪ್ಪ

ಸಂಪತ್‌ಕುಮಾರ್ ತಂದೆ ದಿನಗೂಲಿ ಮಾಡುತ್ತಿದ್ದು, ಸಂಪತ್ ಅತ್ಯಂತ ಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿದವರು. ಈಗ ಅವರಿಗೆ ಪಿಹೆಚ್‌ಡಿ ಬಂದಿರುವುದು ಅತ್ಯಂತ ಸಂತೋಷ ತಂದಿದೆ. ಬಡತನದಲ್ಲೂ ವಿದ್ಯೆ ಇಲ್ಲಿ ಅರಳಿದಂತಾಗಿದೆ. ಇವರ ಸಾಧನೆಗೆ ಅವರ ಕುಟುಂಬ ವರ್ಗದವರು ಸ್ನೇಹಿತರು, ಕಾಲೇಜಿನ ಉಪನ್ಯಾಸ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ. ಕಸಾಪದಿಂದ ಇವರ ನಿಕಶ ಕೃತಿಗೆ ದತ್ತಿಪ್ರಶಸ್ತಿ ಕೂಡ ಲಭಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments