ಶಿವಮೊಗ್ಗ.ಮೇ.14: ಹಿಜಾಬ್ಗೆ ಅವಕಾಶ ಕೊಟ್ಟು, ಕೇಸರಿ ಶಾಲು ಧರಿಸುವುದಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದಲ್ಲದೆ, ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲ ಇಡೀ ರಾಜ್ಯವೇ ಮುಂದೆ ಕೇಸರಿಮಯವಾಗಿ ಕಾಂಗ್ರೆಸ್ ನಿರ್ನಾಮವಾಗುವುದು ಖಚಿತ ಎಂದು ಎಚ್ಚರಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಇದು ಕಾಂಗ್ರೆಸ್ ಸರ್ಕಾರದ ಕೊನೆಯ ಆದೇಶವಾಗಲಿದೆ. ಮುಸ್ಲಿಂರನ್ನು ಒಲೈಸುವುದಕ್ಕೆ ಕೋರ್ಟ್ ತೀರ್ಪನ್ನೇ ಉಲ್ಲಂಘಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸನಾತನ ಹಿಂದೂ ಧರ್ಮದ ಕುರಿತು ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟ್ಯಾಲಿನ್ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಕೆ.ಎಸ್.ಈಶ್ವರಪ್ಪ, ಮೂರ್ಖನ ಮಾತಿಗೆ ಯಾವುದೇ ಬೆಲೆ ಇಲ್ಲ ಎಂದು ಕಿಡಿಕಾರಿದರು.
ಸನಾತನ ಹಿಂದೂ ಧರ್ಮವನ್ನು ನಿರ್ನಾಮ ಮಾಡಬೇಕೆಂದು ಹೇಳಿರುವ ಉದಯನಿಧಿ ಸ್ಟ್ಯಾಲಿನ್ ಈ ಕೆಲಸವನ್ನು ಮೊದಲು ತಮ್ಮ ಮನೆಯ ಅಡುಗೆ ಮನೆಯಿಂದಲೇ ಅದನ್ನು ಶುರು ಮಾಡಲಿ ಎಂದು ಸವಾಲು ಹಾಕಿದರು.
ಗಮನಿಸಿ: ಬಿಜೆಪಿ ಮುಖಂಡನಿಂದಲ್ಲೆ ಪ್ರಶ್ನೆ ಪತ್ರಿಕೆ ಸೋರಿಕೆ- ಪಾರದರ್ಶಕತೆ ಕಾಪಾಡುವಲ್ಲಿ ಕೇಂದ್ರ ವಿಫಲ: ಎನ್ಎಸ್ಯುಐ
ವಿಶ್ವದಲ್ಲಿ ಆದಿಯೂ ಇಲ್ಲದ ಮತ್ತು ಅಂತ್ಯವೂ ಇಲ್ಲದ ಧರ್ಮವೆಂದರೆ ಅದು ಸನಾತನ ಹಿಂದೂ ಧರ್ಮ. ಅದನ್ನು ನಾಶ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ. ದೇಶಕ್ಕೆ ದಂಡೆತ್ತಿ ಬಂದು 800 ವರ್ಷಕ್ಕೂ ಹೆಚ್ಚು ಕಾಲ ಭಾರತವನ್ನಾಳಿದ ಮೊಹಮ್ಮದ್ ಘಜ್ನಿ, ಘೋರಿ, ಬಾಬರ್, ಔರಂಗಜೇಬ್ ನಂತವರಿಂದಲ್ಲೆ ಹಿಂದೂ ಧರ್ಮವನ್ನು ಏನೂ ಮಾಡಲಾಗಿಲ್ಲ. ಇನ್ನು ಈ ಉದಯನಿಧಿ ಸ್ಟಾಲಿನ್ನಿಂದ ಹಿಂದೂ ಧರ್ಮವನ್ನು ನಾಶ ಮಾಡಲು ಸಾಧ್ಯವೇ ? ಇದೇ ಕಾರಣಕ್ಕಾಗಿಯೇ ತಮಿಳುನಾಡಿನಲ್ಲಿ ಇವರ ಸರ್ಕಾರ ಪತನಗೊಂಡು ಮುಖ್ಯಮಂತ್ರಿ ಸ್ಥಾನ, ಮಂತ್ರಿ ಸ್ಥಾನವನ್ನು ಕಳೆದುಕೊಂಡಿರುವುದು ಎಂದು ಅಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಸೋಲಿನಿಂದ ತಮ್ಮ ಕುಟುಂಬ ಅನುಭವಿಸುತ್ತಿರುವ ಸಂಕಷ್ಟವನ್ನು ಬಗೆಹರಿಸಲೆಂದು ಉದಯನಿಧಿ ಅವರ ತಾಯಿ ಶ್ರೀಮತಿ ದುರ್ಗಾ ಅವರು ಕೊಲ್ಲೂರು ಶ್ರೀ ಮೂಕಾಂಬಿಕೆಯಲ್ಲಿ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಕ್ಷುಲಕ ರಾಜಕೀಯ ಕಾರಣಕ್ಕಾಗಿ ಇವರು ಏನೇ ಹೇಳಿಕೆ ಕೊಡಲಿ, ಆದರೆ ಆ ತಾಯಿ ಹಿಂದೂ ಧರ್ಮದ ಮೇಲೆ ತನ್ನ ಅಪಾರ ನಿಷ್ಠೆ ಹೊಂದಿರುವುದೇ ಸನಾತನ ಹಿಂದೂ ಧರ್ಮದ ಶಕ್ತಿಯನ್ನು ತೋರಿಸುತ್ತದೆ ಮತ್ತು ಮತಾಂತರವಾದ ಎಲ್ಲರ ಮನದಲ್ಲೂ ಸನಾತನ ಹಿಂದೂ ಸಂಸ್ಕೃತಿ, ಆಚರಣೆಗಳು, ವಿಚಾರಗಳು ಇನ್ನೂ ಹಾಗೆಯೇ ಉಳಿದಿವೆ ಎಂದು ತಿರುಗೇಟು ನೀಡಿದರು.
