Homeಜಿಲ್ಲೆರಾಜಕಾರಣದಲ್ಲಿ ಸಿದ್ದರಾಮಯ್ಯನವರ ಪ್ರಭಾವ ಇದ್ದೇ ಇರುತ್ತದೆ: ಸಿ.ಟಿ.ರವಿ

ರಾಜಕಾರಣದಲ್ಲಿ ಸಿದ್ದರಾಮಯ್ಯನವರ ಪ್ರಭಾವ ಇದ್ದೇ ಇರುತ್ತದೆ: ಸಿ.ಟಿ.ರವಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.6

ಸಿದ್ದರಾಮಯ್ಯ ಈಗಲೂ ಕೂಡ ಪವರ್ ಫುಲ್. ಸಿದ್ದರಾಮಯ್ಯನವರನ್ನು ಕಡೆಗಣಿಸಿ ರಾಜಕಾರಣ ಮಾಡುವುದು ಅಷ್ಟು ಸುಲಭ ಅಲ್ಲ. ಮಾಸ್ ಲೀಡರ್ಸ್ ಅಧಿಕಾರದಲ್ಲಿರಲಿ, ಇಲ್ಲದಿರಲಿ ಅವರ ಪ್ರಭಾವ ಇರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಶನಿವಾರ ಅವರು ಮಾಧ್ಯಗಾರರೊಂದಿಗೆ ಮಾತನಾಡಿ, 1,34,000 ಕೋಟಿ ರೂ. ಸಾಲ ಮಾಡಬೇಕಾಗುತ್ತದೆ ಎಂದು ಬಜೆಟ್ ಪೂರ್ವ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಡಿಕೆಶಿ ಕೂಡ ಮತ್ತಷ್ಟು ಘೋಷಣೆ ಮಾಡಿದ್ದಾರೆ. ಇದು ಕೇಳಲು ಮತ್ತಷ್ಟು ಚಂದ. ಉಚಿತ ಬಸ್ ಪಾಸ್ ಎಂದರೆ ಇನ್ನಷ್ಟು ಸಾಲ ಮಾಡ ಬೇಕಾಗುತ್ತೆ. ಜನರ ಮೇಲೆ ತೆರಿಗೆ ಹಾಕಬೇಕಾಗುತ್ತದೆ ಎಂದರು.

ಡಿಕೆಶಿ ಅನುಭವ ಹೊಂದಿರುವ ರಾಜಕಾರಣಿ ಆಗಿರಬಹುದು. ಆದರೆ, ರಾಜ್ಯವನ್ನು ಅಭಿವೃದ್ಧಿಪಡಿಸುವ ಇಚ್ಛಾ ಶಕ್ತಿಯ ಕೊರತೆ ಇದೆ. ಡಿಕೆಶಿ ಬೇರೆ ಖಾತೆಗಳಿಗೆ ಕೈ ಹಾಕಬಾರದು ಎಂದು ಕೊಂಡಿ ಹಾಕುವ ಕೆಲಸ ಮಾಡಿದ್ದಾರೆ. ಒಬ್ಬರಿಗೆ ಹೆಚ್ಚುವರಿ ಜವಾಬ್ದಾರಿ ಕೊಟ್ಟಿದ್ದಕ್ಕೆ ಸಚಿವರು ಮುನಿಸಿಕೊಂಡಿದ್ದಾರೆ. ಹಿರಿತನಕ್ಕೆ ತಕ್ಕ ಖಾತೆ ಕೊಟ್ಟಿಲ್ಲ ಎಂದು ಮತ್ತೊಬ್ಬರು ಮುನಿಸಿಕೊಂಡಿದ್ದಾರೆ ಎಂದರು.

ಗಮನಿಸಿ: ಸಂಚರಿಸುತ್ತಿದ್ದ ದುರ್ಗಾಂಬ ಬಸ್‌ನಲ್ಲಿ ಬೆಂಕಿ: ಪ್ರಯಾಣಿಕರು ಬಚಾವ್!!

ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕು ಎಂದು ರಾಮಲಿಂಗಾರೆಡ್ಡಿ ಮುನಿಸಿಕೊಂಡ ವಿಚಾರದ ಬಗ್ಗೆ ಮಾತನಾಡಿ, ಬೆಂಗಳೂರಿನಲ್ಲಿ ಅತಿವೃಷ್ಟಿಯಲ್ಲಿ ಲಾಭ ಇದೆ. ಬರದಲ್ಲೂ ಲಾಭ ಇದೆ. ಬೆಂಗಳೂರಿನಲ್ಲಿ ಮಳೆಗೂ ಬೆಳೆಗೂ ಏನು ಸಂಬAಧ ಇಲ್ಲ. ಬೆಂಗಳೂರಿನಲ್ಲಿ ಮಳೆ ಜಾಸ್ತಿ ಬಂದರೂ ಬರದಿದ್ದರೂ ಬೆಳೆ ಇರುತ್ತದೆ ಎಂದರು.

ರಾಜ್ಯದ ಮೂರು ವರ್ಷದ ಸರ್ಕಾರದ ಅವಲೋಕನ ಮಾಡಿದಾಗ ಭ್ರಷ್ಟಾಚಾರ ರಹಿತ ಆಡಳಿತ ಕೊಡಬಹುದು ಅನಿಸುತ್ತಿಲ್ಲ. ಡಿಕೆಶಿ ನೇತೃತ್ವದಲ್ಲಿ ಒಳ್ಳೆಯ ಆಡಳಿತ ಬರಲಿ ಎಂದು ನಿರೀಕ್ಷೆ ಮಾಡುತ್ತೇವೆ. ಡಿಕೆಶಿ ಆದಾಯದಷ್ಟೇ ರಾಜ್ಯದ ಆದಾಯವೂ ಅದೇ ರೀತಿ ಏರಿಕೆ ಆಗಲಿ. ನವ ಕರ್ನಾಟಕದ ನಿರ್ಮಾತೃ ಎಂಬ ಬಿರುದು ನಿಮಗೆ ಸಿಗುವಂತೆ ಆಗಲಿ. ಒಂದು ಕಡೆ ಆಲೂಗಡ್ಡೆ ಹಾಕಿ ಚಿನ್ನದ ಬೆಳೆ ತೆಗೆಯುವಂತೆ ರಾಜ್ಯದ ದೃಷ್ಟಿಯಿಂದಲೂ ಆಗಲಿ. ಆಲೂಗಡ್ಡೆ ಹಾಕಿ ಚಿನ್ನ ತೆಗೆಯುವ ವಿದ್ಯೆ ಗೊತ್ತಿರುವ ಕಲಾವಿದರು ಇದ್ದಾರೆ. ಅದು ರಾಜ್ಯಕ್ಕೆ ಬಳಕೆ ಆಗಲಿ ಎಂದರು.

ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಅಣ್ಣಾಮಲೈ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಅಣ್ಣಾಮಲೈ ಮಹತ್ವಾಕಾಂಕ್ಷಿ ಒಳ್ಳೆಯ ಮನುಷ್ಯ. ಮನುಷ್ಯನ ಸಮರ್ಪಿತ ಜೀವನದಿಂದ ಸಾರ್ಥಕತೆ ಬರುತ್ತದೆ ಅವರು ಅದೇ ರೀತಿ ಇದ್ದಾರೆ. ತಮಿಳುನಾಡಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕಿಲ್ಲ. ನಾವು ಲಾಭವನ್ನು ಗಳಿಸಿಲ್ಲ ಎಂದರೆ ನಷ್ಟದ ಲೆಕ್ಕ ಹೇಗೆ? ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಮತ ಗಳಿಕೆ ಆಯ್ತು ಈ ಹಿಂದೆ ಎಷ್ಟಾಗಿದೆ ಎಂಬ ವಿಮರ್ಶೆಗೆ ಹೋಗಲ್ಲ. ಅಣ್ಣಾಮಲೈಯ ಮೂಲಕ ದೇಶಕ್ಕೆ ರಾಜ್ಯಕ್ಕೆ ಒಳ್ಳೆದಾಗಲಿ. ದೇಶಭಕ್ತಿಯನ್ನು ಉಳಿಸಿಕೊಂಡು ರಾಜಕಾರಣ ಮಾಡುವುದಾದರೆ ನಾನು ಯಾಕೆ ಬೇಡ ಎನ್ನಲಿ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments