Homeಜಿಲ್ಲೆದಲಿತರಿಗೆ ನವ ಬ್ರಾಹ್ಮಣರಿಂದಲೇ ಹೆಚ್ಚು ಶೋಷಣೆ: ಕಿಮ್ಮನೆ ರತ್ನಾಕರ್

ದಲಿತರಿಗೆ ನವ ಬ್ರಾಹ್ಮಣರಿಂದಲೇ ಹೆಚ್ಚು ಶೋಷಣೆ: ಕಿಮ್ಮನೆ ರತ್ನಾಕರ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.18

ಇಂದಿಗೂ ಹರಿಜನರನ್ನು ದೇವಸ್ಥಾನದ ಒಳಗೆ ಬಿಡದೆ ಅವರನ್ನು ತುಳಿಯಲು ಕೆ.ಎಸ್.ಈಶ್ವರಪ್ಪನವರಂತಹ ಸಂತತಿಗಳೆ ಕಾರಣ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಟೀಕಿಸಿದರು.

ಗುರುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಎಸ್.ಈಶ್ವರಪ್ಪ ಸಹೃದಯ ಮನುಷ್ಯ ಆದರೆ ಮಾಧ್ಯಮ ಹಾಗೂ ವೇದಿಕೆಗಳು ಕಂಡರೆ ಅವರ ನಾಲಿಗೆ ನಿಲ್ಲುವುದಿಲ್ಲ. ತಮಗೆ ತೋಚಿದಂತೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಅವರನ್ನು ಟೀಕೆ ಮಾಡುತ್ತಿದ್ದರು. ಈಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟೀಕೆ ಮಾಡುತ್ತಿದ್ದಾರೆ. ಮಾಧ್ಯಮಗಳು ಕಂಡರೆ ಸಾಕು ಹೀಗೆಲ್ಲಾ ಮಾತನಾಡಬೇಕೆಂದು ಅವರಿಗೆ ಅನಿಸುತ್ತದೆ ಎಂದು ಕುಟುಕಿದರು.

ಗಮನಿಸಿ: ಮತದಾನದಿಂದ ಅಲ್ಪಸಂಖ್ಯಾತರು ಮತ್ತು ದಲಿತರನ್ನು ಆಚೆ ಇಡುವ ಪ್ರಯತ್ನ: ಕಿಮ್ಮನೆ ರತ್ನಾಕರ್

ದಲಿತ ಜಾತಿಗೆ ಸೇರಿದ ಎಂಬ ತಾತ್ಸಾರ ಮನೋಭಾವದಿಂದ ಪ್ರಿಯಾಂಕ್ ಖರ್ಗೆಯನ್ನು ಟೀಕೆ ಮಾಡುವ ಈಶ್ವರಪ್ಪ ಅದೇ ಉತ್ಕೃಷ್ಟ ಜಾತಿಯವರಿಗೆ ಈ ರೀತಿ ಟೀಕೆ ಮಾಡಲು ಸಾಧ್ಯವೇ?. ತುಳಿತಕ್ಕೆ ಒಳಗಾದ ಸಮುದಾಯದ ಬಗ್ಗೆ ಮಾತಾಡುವಾಗ ಜಾಗೃತೆ ಇರಬೇಕು, ಬಹಸಂಖ್ಯಾತರು ತಾಳ್ಮೆ ವಹಿಸಬೇಕು ಎಂದರು.

ವಾಸ್ತವದಲ್ಲಿ ದಲಿತರಿಗೆ ಬ್ರಾಹ್ಮಣರಿಗಿಂತ ನವ ಬ್ರಾಹ್ಮಣರಿಂದ ಅವಮಾನ ಹೆಚ್ಚಾಗುತ್ತಿದೆ. ಬ್ರಾಹ್ಮಣರು ಶಾಪ ಅಥವಾ ಮಂತ್ರ ಹೇಳಿ ಸುಮ್ಮನಾಗುತ್ತಾರೆ. ಆದರೆ ನವ ಬ್ರಾಹ್ಮಣರು ದೇವಸ್ಥಾನದ ಒಳಗೆ ಬಿಡದೆ ಶೋಷಣೆ ಮಾಡುತ್ತಾರೆ. ಈಶ್ವರಪ್ಪನವರು ಅದೇ ಹಾದಿಯಲ್ಲಿ ಇದ್ದಾರೆ ಅನಿಸುತ್ತದೆ. ಚಿಂತನಗಂಗಾದ ಪುಟ 356 ಹರಿಜನರು ಹಿಂದುಗಳಲ್ಲ ಎಂದು ತಿಳಿಸುತ್ತದೆ. ಅದೇ ಪುಸ್ತಕದ ಪುಟ 35 ಮತ್ತು 36 ಜಾತಿ ವ್ಯವಸ್ಥೆ ಪಾಲನೆ ಮಾಡಬೇಕೆಂದು ತಿಳಿಸುತ್ತದೆ. ಈಶ್ವರಪ್ಪ ಇದನ್ನು ಓದಿಕೊಂಡಿದ್ದರೆ ಈ ರೀತಿಯಾಗಿ ನಡೆದುಕೊಳ್ಳುತ್ತಿರಲಿಲ್ಲ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments